ವರಿಷ್ಠರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸೂಚನೆ ಇಲ್ಲ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ

| Published : Feb 10 2024, 01:52 AM IST

ವರಿಷ್ಠರಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಸೂಚನೆ ಇಲ್ಲ: ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿವೆ ಎಂದು ಹಾಸನ ಲೋಕಸಭಾ ಸದಸ್ಯರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರ. ಈ ಕುರಿತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆ ಆಗಿರುವ ಬಗ್ಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ ತಿಳಿಸಿದರು. ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಮಾತನಾಡಿದರು.

28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ

ಕನ್ನಡಪ್ರಭ ವಾರ್ತೆ ಹಾಸನ

ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆ ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿವೆ ಎಂದು ಹಾಸನ ಲೋಕಸಭಾ ಸದಸ್ಯರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರ. ಈ ಕುರಿತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆ ಆಗಿರುವ ಬಗ್ಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ ತಿಳಿಸಿದರು.

ಜೆಡಿಎಸ್ ಮತ್ತು ಬಿಜೆಪಿ ಎರಡು ಪಕ್ಷಗಳು ಮೈತ್ರಿ ಆಗಿವೆ ಎಂದು ಹಾಸನ ಲೋಕಸಭಾ ಸದಸ್ಯರು ಹೇಳಿದ್ದಾರೆ. ಇದು ಸತ್ಯಕ್ಕೆ ದೂರ. ಈ ಕುರಿತು ರಾಷ್ಟ್ರೀಯ ನಾಯಕರ ನಡುವೆ ಚರ್ಚೆ ಆಗಿರುವ ಬಗ್ಗೆ ಯಾವ ಸೂಚನೆಯೂ ಬಂದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಸಿದ್ದೇಶ್‌ ನಾಗೇಂದ್ರ ತಿಳಿಸಿದರು. ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಹಿನ್ನೆಲೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಫೆ೯-೧೧ ದೇಶದಾದ್ಯಂತ ಗ್ರಾಮ ಚಲೋ ಅಭಿಯಾನದ ಕರಪತ್ರ ಬಿಡುಗಡೆ ಹಿನ್ನೆಲೆ ನಗರದ ಖಾಸಗಿ ಹೋಟೆಲೊಂದರಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ‘ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಪಕ್ಷದ ವರಿಷ್ಠರ ನಿರ್ಣಯವೇ ಅಂತಿಮ ಎಂದಿದ್ದಾರೆ. ೨೮ ಕ್ಷೇತ್ರಗಳ ಬಗ್ಗೆ ಬಿಜೆಪಿ ವರಿಷ್ಠರು ತೀರ್ಮಾನಿಸಿದ ಮೇಲೆಯೇ ಮುಂದಿನ ನಡೆ. ಈ ಹಿಂದೆ ಲೋಕಸಭೆ ಚುನಾವಣೆಯಲ್ಲಿ ೨೬೬ ಸೀಟು ಬಂದರೆ ಸಾಕು ಎನ್ನುತ್ತಿದ್ದೆವು. ಈಗ ೪೦೦ಕ್ಕೂ ಹೆಚ್ಚು ಸೀಟು ಬರಬೇಕು ಎಂಬ ಘೋಷಣೆಯಾಗಿದೆ. ೩೬೬ ಸೀಟುಗಳು ಬಿಜೆಪಿಗೆ ಸಿಗಲಿದೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ’ ಎಂದು ತಿಳಿಸಿದರು.

‘ಐದೂವರೆ ಶತಮಾನದ ಕನಸಾದ ರಾಮ ಮಂದಿರ ಪ್ರತಿಷ್ಠಾಪನೆ ಮಾಡಿರುವುದು ಹೆಮ್ಮೆಯ ವಿಚಾರ. ಕೇಂದ್ರದ ೧೦ ವರ್ಷಗಳ ಯೋಜನೆಯ ಸಾಧನೆ ಬಗ್ಗೆ ಅಭಿನಂದನಾ ಪೋಸ್ಟ್ ಕಾರ್ಡ್ ಮೂಲಕ ಕೇಂದ್ರದ ಕಾರ್ಯಾಲಯಕ್ಕೆ ಕಳಿಸೋಣ’ ಎಂದು ಹೇಳಿದರು.

‘ಕೇಂದ್ರ ಸರ್ಕಾರದ ಸಾಧನೆ ಸಮರ್ಥಿಸಿಕೊಳ್ಳಿ, ಮಹಿಳೆಯರು ಸಹ ತೊಡಗಿಸಿಕೊಂಡು ದೇಶದ ಅಭಿವೃದ್ಧಿಗೆ ಪಕ್ಷದ ಕೊಡುಗೆ ಹೇಳಿ, ಮಾತಾಡದಿದ್ದರೂ ಕರಪತ್ರ ಕೊಟ್ಟು ಬನ್ನಿ. ಈ ಕಾರ್ಯಕ್ರಮಕ್ಕೆ ಕ್ರಿಯಾಶೀಲ ಹುಡುಗರನ್ನು ತೊಡಗಿಸಿಕೊಂಡು ಪಕ್ಷದ ಸಾಧನೆ ಹೇಳಿ. ರಾಜ್ಯ ಸರ್ಕಾರದ ವೈಫಲ್ಯದ ಬಗ್ಗೆಯೂ ಹೇಳಿ. ಎಸ್ಸಿ, ಎಸ್ಟಿಗಳಿಗೆ ಮೀಸಲಾದ ೧೧ ಸಾವಿರ ಕೋಟಿ ರು. ಅನುದಾನವನ್ನು ಗ್ಯಾರಂಟಿಗೆ ಬಳಕೆ ಮಾಡಿಕೊಳ್ಳಲಾಗಿದೆ. ಕೇಂದ್ರದಿಂದ ೨೯ ರು.ಗೆ ಒಂದು ಕೆಜಿ ಅಕ್ಕಿ ಶೀಘ್ರದಲ್ಲಿ ಸಿಗಲಿದೆ’ ಎಂದು ಕೇಂದ್ರದ ಯೋಜನೆ ಬಗ್ಗೆ ತಿಳಿಸಿದರು.

ಬಿಜೆಪಿ ಹಿರಿಯ ಮುಖಂಡ ಹಾಗೂ ಹುಡಾ ಮಾಜಿ ಅಧ್ಯಕ್ಷ ನವೀಲೆ ಅಣ್ಣಪ್ಪ ಮಾತನಾಡಿ, ‘ಅಕ್ಕಿ ಕೊಡುತ್ತಿರುವವರು ನಮ್ಮ ಕಾರ್ಯಕರ್ತರು, ಗ್ರಾಮಗಳ ಪ್ರಮುಖರ ಭೇಟಿ ಮಾಡಬೇಕು. ಕೇಂದ್ರಕ್ಕೆ ಮೋದಿ ಬೇಕು ಎನ್ನುವ ಜನ ಕಾಂಗ್ರೆಸ್‌ನಲ್ಲೂ ಇದ್ದಾರೆ. ಶಿಕ್ಷಕರು, ವಿದ್ಯಾರ್ಥಿ ಪ್ರಮುಖರು ಪೋಸ್ಟ್ ಮ್ಯಾನ್, ಆಶಾ ಕಾರ್ಯಕರ್ತೆಯರ ಭೇಟಿ ಮಾಡಬೇಕು’ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಆರ್. ಮೋಹನ್, ಬಿಜೆಪಿ ನಗರ ಮಂಡಲ ಅಧ್ಯಕ್ಷ ವೇಣುಗೋಪಾಲ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಅಮಿತ್ ಶೆಟ್ಟಿ, ಯುವ ಮೋರ್ಚಾದ ಉಪಾಧ್ಯಕ್ಷ ಹರ್ಷಿತ್, ಜಿಲ್ಲಾ ಸಂಚಾಲಕ ರಾಕೇಶ್ ಗೌಡ, ಮಾದ್ಯಮ ಸಂಚಾಲಕ ಪ್ರೀತಿವರ್ಧನ್ ಇದ್ದರು.

ಗ್ರಾಮ ಚಲೋ ಅಭಿಯಾನದ ಪೋಸ್ಟರ್‌ ಬಿಡುಗೆಡೆ

ದೇಶದ ಪ್ರಧಾನಿಯಾಗಿ ೧೦ ವರ್ಷಗಳು ಪೂರೈಸಿದ ಸಾಧನೆಯನ್ನು ಪ್ರಚಾರ ಮಾಡಲು ಗ್ರಾಮ ಚಲೋ ಅಭಿಯಾನ ನಡೆಸಲಾಗುತ್ತಿದೆ ಎಂದು ಬಿಜೆಪಿ ಪಕ್ಷದ ಜಿಲ್ಲಾಧ್ಯಕ್ಷ ಸಿದ್ದೇಶ್ ನಾಗೇಂದ್ರ ತಿಳಿಸಿದರು.

‘ಮಂಡಲದ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಫೆ.೯,೧೦,೧೧ ರಂದು ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಪುಣ್ಯಸ್ಮರಣಾ ದಿನ ಮೂರು ದಿನಗಳ ಕಾಲ ವಿಶೇಷ ದಿನ ಎಂದು ಅವಧಿ ಮೀಸಲಿಡಬೇಕು. ಎಲ್ಲಾ ಮಂಡಲ ಅಧ್ಯಕ್ಷರು, ಸ್ವಯಂ ಪ್ರೇರಣೆಯಿಂದ ಕೆಲಸ ಮಾಡೋಣ’ ಎಂದರು.

‘ಪ್ರತಿ ಮನೆ ಮನೆಗೆ ಕೇಂದ್ರದ ಯೋಜನೆ ತಲುಪಿಸುವ ಕೆಲಸ ಆಗಬೇಕು. ೨೦೨೪ಕ್ಕೆ ಮತ್ತೊಮ್ಮೆ ಮೋದಿ ಯಾಕೆ ಬಿಜೆಪಿ ಪ್ರಧಾನಿ ಆಗಬೇಕು ಎಂದು ಅರಿವು ಮೂಡಿಸಬೇಕು. ಸ್ವಯಂ ಪ್ರೇರಣೆಯಾಗಿ ಶಕ್ತಿ ಕೇಂದ್ರಕ್ಕೆ ಕರೆ ಮಾಡಬಹುದಾಗಿದೆ’ ಎಂದು ಮಾಹಿತಿ ನೀಡಿದರು. ಮೋದಿ ಪ್ರಧಾನಿಯಾಗಿ ಹತ್ತು ವರ್ಷದ ಸಂದ ಹಿನ್ನೆಲೆಯಲ್ಲಿ ಗ್ರಾಮ ಚಲೋ ಅಭಿಯಾನದ ಪೋಸ್ಟರ್‌ ಬಿಡುಗಡೆ ಮಾಡಲಾಯಿತು.