ಮಕ್ಕಳನ್ನು ಕೇಂದ್ರೀಕರಿಸುವುದು ಶಿಕ್ಷಕರು ಮಾತ್ರ, ಶಿಕ್ಷಣದಿಂದ ಮಾತ್ರ ಬದಕನ್ನು ಬದಲಾಯಿಸುಲ ಸಾಧ್ಯ
ಹಾನಗಲ್ಲ: ಯಾವ ಭಾಷೆ ಮೇಲು, ಕೀಳಲ್ಲ, ವ್ಯವಹಾರ ಅಧ್ಯಯನ ಹಾಗೂ ಉದ್ಯೋಗಕ್ಕಾಗಿ ಅಗತ್ಯವಿರುವ ಯಾವುದೇ ಭಾಷೆಯನ್ನು ಕಲಿಯುವುದರಲ್ಲಿ ತಪ್ಪಿಲ್ಲ. ಆದರೆ, ಮಾತೃಭಾಷೆ ಮರೆಯಬಾರದು. ಮಕ್ಕಳು ಮನಸ್ಸು ಮಾಡಿದರೆ ಸಾಧನೆ ಮಾಡಬಹುದು ಎಂದು ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ರಾಜೇಶ್ವರಿ ಬಿ. ನುಡಿದರು
ಇಲ್ಲಿನ ರೋಶನಿ ಸಮಾಜ ಸೇವಾ ಸಂಸ್ಥೆಯಲ್ಲಿ ಒಂದು ತಿಂಗಳ ಕಾಲ ನಡೆಯುವ ಉಚಿತ ಸ್ಪೋಕನ್ ಇಂಗ್ಲಿಷ್ ತರಗತಿ ಉದ್ಘಾಟಿಸಿ ಮಾತನಾಡಿದರು. ರಜಾ ಅವಧಿಯಲ್ಲಿ ಮೊಬೈಲ್, ಟಿವಿಯಲ್ಲಿ ಕಳೆಯುವುದು ಬೇಡ. ಸ್ಪರ್ಧಾತ್ಮಕ ಯುಗದಲ್ಲಿರುವ ನಾವು ಜ್ಞಾನ ಸಂಪಾದನೆಗೆ ಈ ಸಮಯ ವಿನಿಯೋಗಿಸೋಣ ಎಂದರು.ಮುಖ್ಯ ಅತಿಥಿಯಾಗಿ ಮಾತನಾಡಿದ ಹನುಮಂತಪ್ಪ ಮರಗಡೆ, ಮಕ್ಕಳನ್ನು ಕೇಂದ್ರೀಕರಿಸುವುದು ಶಿಕ್ಷಕರು ಮಾತ್ರ, ಶಿಕ್ಷಣದಿಂದ ಮಾತ್ರ ಬದಕನ್ನು ಬದಲಾಯಿಸುಲ ಸಾಧ್ಯ ಎಂದರು.
ಕಾರ್ಯಕ್ರಮದ ಅಧಕ್ಷತೆ ವಹಿಸಿದ ರೋಶನಿ ಸಂಸ್ಥೆಯ ನಿರ್ದೇಶಕಿ ಅನಿತಾ ಡಿಸೋಜಾ ಮಾತನಾಡಿ, ಮಕ್ಕಳು ನಿರಂತರ ಅಧ್ಯಯನ ಮಾಡಿ ಇಂಗ್ಲಿಷ್ ಭಾಷೆಯ ಮೇಲೆ ಹಿಡಿತ ಸಾಧಿಸಲು ಸಾಧ್ಯ. ಮಕ್ಕಳು ಇದರೊಂದಿಗೆ ಮೌಲ್ಯಗಳ ಬಗ್ಗೆ ತಿಳಿದುಕೊಳ್ಳಬೇಕು. ಹಿರಿಯರನ್ನು ಗೌರವಿಸಬೇಕು, ನಿಮಗೆ ರೋಶನಿ ಸಂಸ್ಥೆ ಸದಾ ಮಾರ್ಗದರ್ಶನ ಮಾಡುತ್ತದೆ ಎಂದರು.ಈ ಸಂದರ್ಭದಲ್ಲಿ ಕೆಡಿಪಿ ಸದಸ್ಯ ಮಹ್ಮದ ಹನೀಫ್, ಪ್ರಗತಿಪರ ಸಂಘಟನೆಯ ಸದಸ್ಯ ಫೈರೋಜ ಶಿರಬಡಗಿ, ಮಾರುತಿ ಪೇಟಕರ, ಜನವೇದಿಕೆ ನಾಯಕರಾದ ದೀಪಾ ಈಳಿಗೇರ ಉಪಸ್ಥಿತರಿದ್ದರು.
ಗೌರಮ್ಮ ವೈ.ಕೆ. ಸ್ವಾಗತಿಸಿದರು, ಶಿವಕುಮಾರ ಮಾಂಗ್ಲೇನವರ ಕಾರ್ಯಕ್ರಮ ನಿರೂಪಿಸಿದರು. ಮಂಜುನಾಥ ಹೊಟ್ಟೆಗೌಡರ ವಂದಿಸಿದರು.