ಸುಜಾತಾ ಭಟ್ಗೂ ನಮಗೂ ಸಂಬಂಧವಿಲ್ಲ: ತಿಮರೋಡಿ

| N/A | Published : Aug 24 2025, 02:00 AM IST

ಸಾರಾಂಶ

ಸೌಜನ್ಯ ಪರವಾದ ನಮ್ಮ ಹೋರಾಟಕ್ಕೂ ಸುಜಾತಾ ಭಟ್‌ಗೂ ಯಾವುದೇ ಸಂಬಂಧವಿಲ್ಲ. ಧರ್ಮಸ್ಥಳದ ಮಂಜುನಾಥಸ್ವಾಮಿ, ಅಣ್ಣಪ್ಪನನ್ನು ಬಿಟ್ಟು ಬೇರೆ ಯಾರೂ ನಮ್ಮ ಹೋರಾಟದ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸ್ಪಷ್ಟಪಡಿಸಿದ್ದಾರೆ.

  ಉಡುಪಿ :  ಸೌಜನ್ಯ ಪರವಾದ ನಮ್ಮ ಹೋರಾಟಕ್ಕೂ ಸುಜಾತಾ ಭಟ್‌ಗೂ ಯಾವುದೇ ಸಂಬಂಧವಿಲ್ಲ. ಧರ್ಮಸ್ಥಳದ ಮಂಜುನಾಥಸ್ವಾಮಿ, ಅಣ್ಣಪ್ಪನನ್ನು ಬಿಟ್ಟು ಬೇರೆ ಯಾರೂ ನಮ್ಮ ಹೋರಾಟದ ದಾರಿ ತಪ್ಪಿಸಲು ಸಾಧ್ಯವಿಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಸ್ಪಷ್ಟಪಡಿಸಿದ್ದಾರೆ. 

ಉಡುಪಿ ಜಿಲ್ಲಾ ನ್ಯಾಯಾಲಯದಿಂದ ಜಾಮೀನು ಸಿಕ್ಕ ಬಳಿಕ ಹಿರಿಯಡ್ಕದ ಸಬ್‌ ಜೈಲಿನಿಂದ ಮನೆಗೆ ಹಿಂತಿರುಗಿ ಸುದ್ದಿಗಾರರೊಂದಿಗೆ ಮಾತನಾಡಿ, ಧರ್ಮಸ್ಥಳದಲ್ಲಿ ಅನಾಮಿಕ ದೂರುದಾರನ ಬಂಧನ ಆಗಿರುವುದು ನನಗೆ ಗೊತ್ತಿಲ್ಲ. 

ಆತನನ್ನು ಎಸ್‌ಐಟಿಯವರು ತನಿಖೆ ಮಾಡುವುದೂ ಒಳ್ಳಯದೇ ಎಂದರು.ಇನ್ನು ಅನನ್ಯ ಭಟ್ ಸಾವಿನ ಬಗ್ಗೆ ಗೊಂದಲಕಾರಿ ಹೇಳಿಕೆ ನೀಡುತ್ತಿರುವ ಸುಜಾತಾ ಭಟ್ ಬಗ್ಗೆ ಏನೂ ಹೇಳುವುದಿಲ್ಲ. ಆಕೆ ನಮ್ಮ ಹೋರಾಟದಲ್ಲಿ ಇಲ್ಲ. ತನಗೆ ಅನ್ಯಾಯ ಆಗಿದೆ ಎಂದು ಸುಜಾತಾ ಬಂದಿದ್ದರು. ನಾವು ಅವರನ್ನು ನಂಬಿಲ್ಲ, ನಾವು ಸೌಜನ್ಯ ಪರ ಹೋರಾಟವನ್ನು ನಂಬಿದವರು, ಈ ಹೋರಾಟವನ್ನು ನಿಲ್ಲಿಸುವುದಿಲ್ಲ ಎಂದು ಹೇಳಿದರು.

Read more Articles on