ಎಷ್ಟೇ ಅಡೆ-ತಡೆಗಳು ಬಂದರು ಗುರಿ ಬದಲಿಸಬೇಡಿ: ಮಾಜಿ ಶಾಸಕ ಆನಂದ ನ್ಯಾಮಗೌಡ

| Published : Jan 04 2025, 12:30 AM IST

ಎಷ್ಟೇ ಅಡೆ-ತಡೆಗಳು ಬಂದರು ಗುರಿ ಬದಲಿಸಬೇಡಿ: ಮಾಜಿ ಶಾಸಕ ಆನಂದ ನ್ಯಾಮಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಇಂದಿನ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ,ದೇಶ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾಗಿದೆ. ಅದಕ್ಕೆ ಸತತ ಪರಿಶ್ರಮ ಹಾಗೂ ಗುರಿ ಇರಬೇಕು.

ಕನ್ನಡಪ್ರಭ ವಾರ್ತೆ ಜಮಖಂಡಿ

ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಒಂದು ಗುರಿಯನ್ನಿಟ್ಟುಕೊಂಡು ಸಾಧನೆ ಮಾಡಬೇಕು. ಎಷ್ಟೇ ಅಡೆ-ತಡೆಗಳು ಬಂದರು ಗುರಿ ಬದಲಿಸಬಾರದು ಎಂದು ಮಾಜಿ ಶಾಸಕ ಆನಂದ ನ್ಯಾಮಗೌಡ ಹೇಳಿದರು.

ಶುಕ್ರವಾರ ಜಿಪಂ, ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ರಾಯಲ್‌ ಪ್ಯಾಲೇಸ್‌ ಸಂಸ್ಥೆಯ ಸಭಾಭವನದಲ್ಲಿ ನಡೆದ 10ನೇ ತರಗತಿ ವಿದ್ಯಾರ್ಥಿಗಳ ಪ್ರೇರಣಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳು ಜಿಲ್ಲೆ, ರಾಜ್ಯ,ದೇಶ ಮಾತ್ರವಲ್ಲದೇ ವಿಶ್ವ ಮಟ್ಟದಲ್ಲಿ ಸ್ಪರ್ಧೆ ಎದುರಿಸಬೇಕಾಗಿದೆ. ಅದಕ್ಕೆ ಸತತ ಪರಿಶ್ರಮ ಹಾಗೂ ಗುರಿ ಇರಬೇಕು. ಸಾಧನೆಯ ಹಾದಿಯಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳನ್ನು ಮೆಟ್ಟಿ ನಿಲ್ಲುವ ಮೂಲಕ ಗುರಿಸಾಧಿಸಬೇಕು. ಅದಕ್ಕೆ ಸರಿಯಾದ ಮಾರ್ಗದರ್ಶನ ಹಾಗೂ ಸರಿಯಾದ ದಾರಿಯಲ್ಲಿ ನಡೆಯಬೇಕು. ಕಾರ್ಯಾಗಾರದಲ್ಲಿ ತಿಳಿದು ಕೊಂಡಿರುವ ಮಾಹಿತಿಯನ್ನು ತಮ್ಮ ಸಹಪಾಠಿಗಳಿಗೂ ತಿಳಿಸಿ ಹೇಳಿ ಎಲ್ಲ ಮಕ್ಕಳು ಉತ್ತಮ ಸಾಧನೆ ಮಾಡಿ ತಾಲೂಕಿಗೆ ಕೀರ್ತಿ ಹೆಚ್ವಿಸಬೇಕು ಎಂದು ಸಲಹೆ ನೀಡಿದರು.

ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ ವಿದ್ಯಾರ್ಥಿಗಳಗೆ ಪರಿಕ್ಷೆ ಬರೆಯಲು ಮಾಡಿಕೊಳ್ಳಬೇಕಾದ ಸಿದ್ಧತೆಯ ಕುರಿತು ಉಪನ್ಯಾಸ ನೀಡಿದರು. ಸರ್ಕಾರ 10ನೇ ತರಗತಿ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮ ಜಾರಿಮಾಡಿದೆ. ಸರ್ಕಾರದ ಯೋಜನೆ ಸದುಪಯೋಗಿಸಿಕೊಂಡು ಉತ್ತಮ ಸಾಧನೆ ಮಾಡಬೇಕು ಎಂದು ಕ್ಷೇತ್ರಶಿಕ್ಷಣಾಧಿಕಾರಿ ಅಶೋಕ ಬಸಣ್ಣವರ ಹೇಳಿದರು. ಕಳೆದ ವರ್ಷ ಜಮಖಂಡಿ ತಾಲೂಕು 10ನೇ ತರಗತಿಯ ಫಲಿತಾಂಶ ಶೇ 87.37ರಷ್ಟು ಬಂದಿದ್ದು ಈ ಬಾರಿ ಇನ್ನೂ ಹೆಚ್ಚಿನ ಸಾಧನೆ ತೋರಬೇಕು. ನೂರಕ್ಕೆ ನೂರು ಫಲಿತಾಂಶ ನಮ್ಮ ತಾಲೂಕಿಗೆ ಬರಬೇಕು ಆನಿಟ್ಟಿನಲ್ಲಿ ಶಿಕ್ಷಣ ಇಲಾಖೆ, ಶಿಕ್ಷಕರು ಶ್ರಮಿಸುತ್ತಿದ್ದು ಮಕ್ಕಳು ಸಾಧನೆ ಮಾಡಬೇಕು ಎಂದರು. ವಿವಿಧ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದು ಸಂತಸದ ವಿಷಯ ಎಲ್ಲ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುವ ಮೂಲಕ ಇಲಾಖೆಗೆ ಹೆಸರು ತರಬೇಕು ಎಂದರು. ರಾಯಲ್‌ ಪ್ಯಾಲೇಸ್‌ ಡಿಗ್ರಿ ಕಾಲೇಜು ಪ್ರಾಂಶುಪಾಲ ಎನ್‌.ಎಂ.ರೊಳ್ಳಿ ಮಾತನಾಡಿದರು. ಪಿಯು ಕಾಲೇಜು ಪ್ರಾಚಾರ್ಯರಾದ ರೀಟಾ ಜೈನರ ವೇದಿಕೆಯಲ್ಲಿದ್ದರು. ಉಪವಿಭಾಗದ ವಿವಿಧ ಶಾಲೆಗಳಿಂದ ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿ ದ್ದರು. ನುರಿತ ತಜ್ಞರಿಂದ ಉಪನ್ಯಾಸಗಳು ನಡೆದವು. ರುದ್ರಮುನಿ ಅಗಡಿ ಕಾರ್ಯಕ್ರಮ ನಿರೂಪಿಸಿದರು. ಎಸ್‌.ಜಿ.ವಿಜಯಪುರ ಸ್ವಾಗತಿಸಿದರು. ವೀಣಾ ಕಟಗಿ ವಂದಿಸಿದರು.