ನಾವು ಎಷ್ಟೇ ಭಾಷೆ ಕಲಿತಿದ್ದರೂ ನಮ್ಮ ಜೀವನದ ಭಾಷೆ ಕನ್ನಡ: ಶ್ರೀಇಳೈ ಅಳ್ವಾರ್‌ ಸ್ವಾಮೀಜಿ

| Published : Dec 01 2024, 01:35 AM IST

ನಾವು ಎಷ್ಟೇ ಭಾಷೆ ಕಲಿತಿದ್ದರೂ ನಮ್ಮ ಜೀವನದ ಭಾಷೆ ಕನ್ನಡ: ಶ್ರೀಇಳೈ ಅಳ್ವಾರ್‌ ಸ್ವಾಮೀಜಿ
Share this Article
  • FB
  • TW
  • Linkdin
  • Email

ಸಾರಾಂಶ

ಕರ್ನಾಟಕ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಕನ್ನಡ ಭಾಷೆ ಬಳಸುವ ಮೂಲಕ ನಿತ್ಯದ ಹಬ್ಬವಾಗಬೇಕು. ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ನಾವು ಎಷ್ಟೇ ಭಾಷೆಗಳನ್ನು ಕಲಿತಿದ್ದರೂ ನಮ್ಮ ಜೀವನದ ಭಾಷೆ ಕನ್ನಡ ಎಂದು ಮೇಲುಕೋಟೆ ನಂಬೀಪುರ ವಂಗೀಮಠದ ಶ್ರೀಇಳೈ ಅಳ್ವಾರ್‌ ಸ್ವಾಮೀಜಿ ತಿಳಿಸಿದರು.

ನಗರದ ಕೃಷ್ಣಮೂರ್ತಿಪುರಂನಲ್ಲಿರುವ ನಮನ ಕಲಾ ಮಂಟಪದಲ್ಲಿ ಕಸ್ತೂರಿ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಹಾಗೂ ಕೀರ್ತಿ ಯುವತಿ ಮಹಿಳಾ ಮಂಡಳಿ ಸಂಯುಕ್ತವಾಗಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಶನಿವಾರ ಆಯೋಜಿಸಿದ್ದ ಸಾಧಕರಿಗೆ ಅಭಿನಂದನೆ ಹಾಗೂ ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಅಂಕವೀರ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸಾವಿರಾರು ವರ್ಷದ ಇತಿಹಾಸವಿರುವ ಕನ್ನಡ ನಾಡು, ನುಡಿ, ಸಂಸ್ಕೃತಿಗೆ ಅನೇಕ ಮಹನೀಯರ ಕೊಡುಗೆ ಇದೆ ಎಂದು ಅವರು ಹೇಳಿದರು.

ಹಿರಿಯ ಸಮಾಜ ಸೇವಕ ಕೆ. ರಘುರಾಂ ಮಾತನಾಡಿ, ಕರ್ನಾಟಕ ರಾಜ್ಯೋತ್ಸವ ಆಚರಣೆ ಒಂದು ದಿನಕ್ಕೆ ಸೀಮಿತವಾಗದೆ ಪ್ರತಿದಿನ ಕನ್ನಡ ಭಾಷೆ ಬಳಸುವ ಮೂಲಕ ನಿತ್ಯದ ಹಬ್ಬವಾಗಬೇಕು ಎಂದರು.

ಕನ್ನಡ ರಾಜ್ಯೋತ್ಸವ ಅಂಗವಾಗಿ ವಿವಿಧ ಕ್ಷೇತ್ರದ ಸಾಧಕರಾದ ಸಿ.ಆರ್. ಪುಟ್ಟರಾಜು (ಜಾನಪದ ಕ್ಷೇತ್ರ), ಯಶೋಧ ರಾಮಕೃಷ್ಣ (ಸಾಹಿತ್ಯ), ಶಾಂತವ್ವ ಹಾವನ್ನವರ (ಜಾನಪದ), ಸಿ.ಎಸ್. ರೋಹಿತ್ ಕುಮಾರ್ (ಸಮಾಜ ಸೇವೆ), ಜಿ.ಕೆ. ಈರಪ್ಪ (ರಂಗಭೂಮಿ), ಎಲ್.ಕೆ. ಶಶಿಕಲಾ ಪುಟ್ಟರಾಜು (ಜನಪದ), ಚಿ. ರಾಧಾಕೃಷ್ಣ (ಸಾಹಿತ್ಯ) ಅವರಿಗೆ ಸುವರ್ಣ ಕರ್ನಾಟಕ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಅಂಕವೀರ ಪುರಸ್ಕಾರ ನೀಡಲಾಯಿತು.

ಕಸ್ತೂರಿ ಸಿರಿಗನ್ನಡ ವೇದಿಕೆ, ಕೀರ್ತಿ ಯುವತಿ ಮಹಿಳಾ ಮಂಡಳಿಯ ಅಧ್ಯಕ್ಷೆ ಕೆ. ಮಂಜುಳಾ ರಮೇಶ್, ಲಯನ್ಸ್ ಕ್ಲಬ್ ಆಫ್ ಮೈಸೂರು ಬಾಂಧವ್ಯ ಅಧ್ಯಕ್ಷ ಎಂ. ವಿಜಯ್ ಕುಮಾರ್, ಕಸ್ತೂರಿ ಸಿರಿಗನ್ನಡ ವೇದಿಕೆ ರಾಜ್ಯಾಧ್ಯಕ್ಷ ಪೋತೆರ ಮಹದೇವು,

ಆಕಾಶವಾಣಿಯ ನಿವೃತ್ತಿ ಕಾರ್ಯಕ್ರಮಾಧಿಕಾರಿ ಎನ್.ವಿ. ರಮೇಶ್ ಮೊದಲಾದವರು ಇದ್ದರು.

ಡಾ.ಶೋಭಿತ್ ರಂಗಪ್ಪಗೆ ಜೀನೋಮಿಕ್ಸ್ ಪ್ರಶಸ್ತಿ ಪ್ರದಾನ

ಕನ್ನಡಪ್ರಭ ವಾರ್ತೆ ಮೈಸೂರು

ಬಯೋಟೆಕ್ ರಿಸರ್ಚ್ ಸೊಸೈಟಿ ಆಫ್ ಇಂಡಿಯಾ (ಬಿಆರ್ ಎಸ್ಐ) ಯಿಂದ ಆಣ್ವಿಕ ಮತ್ತು ವ್ಯವಸ್ಥಿತ ಜೀವಶಾಸ್ತ್ರದಲ್ಲಿ ಅತ್ಯುತ್ತಮ ಕೊಡುಗೆಗಾಗಿ 2023ನೇ ಸಾಲಿನ ಎಸ್ ಬಿಎಸ್- ಎಂಕೆಯು ಜೀನೋಮಿಕ್ಸ್ ಪ್ರಶಸ್ತಿಯು ಆದಿಚುಂಚನಗಿರಿ ವಿಶ್ವವಿದ್ಯಾನಿಲಯದ ನಿರ್ದೇಶಕ ಡಾ. ಶೋಭಿತ್ ರಂಗಪ್ಪ ಅವರಿಗೆ ನೀಡಲಾಗಿದೆ.

ಈ ಪ್ರಶಸ್ತಿಯು ನಗದು ಬಹುಮಾನ, ಸ್ಮರಣಿಕೆ ಮತ್ತು ಪ್ರಮಾಣ ಪತ್ರವನ್ನು ಹೊಂದಿರುತ್ತದೆ. ಈ ಪ್ರಶಸ್ತಿ ಪ್ರಧಾನ ಸಮಾರಂಭವು ಇತ್ತೀಚೆಗೆ ಪುಣೆಯ ಡಿ.ವೈ. ಪಾಟೀಲ್ ಬಯೋಟೆಕ್ನಾಲಜಿ ಮತ್ತು ಬಯೋಇನ್ಫರ್ಮ್ಯಾಟಿಕ್ಸ್ ಸಂಸ್ಥೆಯಲ್ಲಿ ನಡೆಯಿತು. ನವದೆಹಲಿಯ ಏಮ್ಸ್‌ನಿವೃತ್ತ ಪ್ರಾಧ್ಯಾಪಕ ಟಿ.ಪಿ. ಸಿಂಗ್ ಮತ್ತು ಇತರೆ ಪ್ರಸಿದ್ಧ ವಿಜ್ಞಾನಿಗಳ ಸಮ್ಮುಖದಲ್ಲಿ ಈ ಪ್ರಶಸ್ತಿಯನ್ನು ನೀಡಲಾಯಿತು.

ಬಿಆರ್ ಎಸ್ಐ ಭಾರತದ ಹೆಸರಾಂತ ವಿಜ್ಞಾನಿಗಳಿಂದ ಸ್ಥಾಪಿತವಾದ 20 ವರ್ಷದ ರಾಷ್ಟ್ರೀಯ ಸೊಸೈಟಿಯಾಗಿದೆ. ಡಾ. ಶೋಭಿತ್ ಅವರು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ವಿಶ್ವವಿದ್ಯಾಲಯದ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ಶೋಭಿತ್ ಅವರು ಸುಮಾರು 100 ಸಂಶೋಧನಾ ಪ್ರಬಂಧಗಳನ್ನು ಮತ್ತು 8 ಪೇಟೆಂಟ್‌ ಗಳನ್ನು ಕ್ಯಾನ್ಸರ್ ಸಂಶೋಧನೆಯಲ್ಲಿ ಪ್ರಕಟಿಸಿದ್ದಾರೆ.