ಪೊಲೀಸರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ

| Published : Apr 24 2025, 12:05 AM IST

ಸಾರಾಂಶ

ಮಕ್ಕಳು ಯಾವುದೇ ಅಪರಾಧ ಕೆಲಸದಲ್ಲಿ ಭಾಗಿಯಾಗಬಾರದು. ಅಪರಾಧಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು

ಮುಂಡರಗಿ: ಪೊಲೀಸರ ಬಗ್ಗೆ ಭಯಪಡುವ ಅವಶ್ಯಕತೆ ಇಲ್ಲ. ಪೊಲೀಸರು ಯಾವಾಗಲೂ ಪ್ರಜೆಗಳ ರಕ್ಷಣೆಗೋಸ್ಕರ ಕೆಲಸ ಮಾಡುತ್ತಿರುತ್ತಾರೆ ಎಂದು ಮುಂಡರಗಿ ಪಿಎಸ್ಐ ವಿ.ಜೆ. ಪವಾರ ಹೇಳಿದರು.

ಅವರು ಬುಧವಾರ ಪಟ್ಟಣದ ಶಾರದಾ ಕರಿಯರ್ ಅಕಾಡೆಮಿಯಲ್ಲಿ ಹಮ್ಮಿಕೊಂಡಿದ್ದ ಕಾನೂನು ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ದೊಂಡು ಮಾತನಾಡಿದರು. ವಿದ್ಯಾರ್ಥಿಗಳು ಕಾನೂನು ಅರಿತುಕೊಳ್ಳಬೇಕು. ನೀತಿ-ನಿಯಮ ಕಾನೂನು ಪಾಲಿಸಿ ನಡೆದರೆ ಎಲ್ಲವೂ ಸುರಕ್ಷಿತವಾಗಿರುತ್ತದೆ. ಹೊಸ ಕಾಯ್ದೆ-ಕಾನೂನು ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಅಪರಾಧ ಕೃತ್ಯಗಳಿಗೆ ಭಾರತೀಯ ನ್ಯಾಯ ಸಂಹಿತೆಯಲ್ಲಿ ಕಠಿಣ ಕಾನೂನು ಜಾರಿಗೆ ತರಲಾಗಿದೆ. ಆದ್ದರಿಂದ ಯಾರೂ ಅಪರಾಧ ಕೃತ್ಯಗಳಲ್ಲಿ ಪಾಲ್ಗೊಳ್ಳುವುದು ಹಾಗೂ ಇನ್ನೊಬ್ಬರಿಗೆ ಪ್ರಚೋದನೆ ನೀಡುವುದನ್ನು ಮಾಡಬಾರದು. ಯಾವುದೇ ರೀತಿಯ ಸಮಸ್ಯೆಗಳಿದ್ದರೆ 112 ಸಹಾಯವಾಣಿಗೆ ಕರೆಮಾಡಿ ನೆರವು ಕೇಳಬೇಕು ಎಂದರು.

ಸಂಸ್ಥೆಯ ಮಲ್ಲಿಕಾರ್ಜುನ ಹಡಪದ ಮಾತನಾಡಿ, ಮಕ್ಕಳು ಯಾವುದೇ ಅಪರಾಧ ಕೆಲಸದಲ್ಲಿ ಭಾಗಿಯಾಗಬಾರದು. ಅಪರಾಧಗಳು ಕಂಡು ಬಂದಲ್ಲಿ ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ಕಾರ್ಯಕ್ರಮದಲ್ಲಿ ಮುಕ್ಕಣ್ಣ ಪೂಜಾರ, ಮಹೇಶ ಹಡಪದ, ಮಂಜುಳಾ ಹಡಪದ, ಗುಡದಪ್ಪ ಶೀರನಹಳ್ಳಿ, ರಂಜಿತಾ, ಕಾವೇರಿ, ಶಕುಂತಲಾ, ರೇಖಾ ಮತ್ತು ಗುಡದಪ್ಪ ಶೀರನಹಳ್ಳಿ ಸೇರದಂತೆ ಅನೇಕರು ಉಪಸ್ಥಿತರಿದ್ದರು.