ಸಾರಾಂಶ
ಕನ್ನಡಪ್ರಭ ವಾರ್ತೆ ಕೊಲ್ಹಾರ
ಶಾಲೆಯಲ್ಲಿ ಮನೆಗೆಲಸ ಕೊಟ್ಟರೆ ಅದನ್ನು ತಾಯಿಂದಿರರು ಮನೆಯಲ್ಲಿ ಮಾಡಿಸಬೇಕು. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಟ್ಟರೆ ಯಾರು ಕದಿಯಲು ಸಾಧ್ಯವಿಲ್ಲ. ಬೆಳ್ಳಿ, ಬಂಗಾರ ಕದಿಯಬಹುದು ಎಂದು ವಿಜಯಪುರ ಡಿಸಿಸಿ ಬ್ಯಾಂಕ್ ನಿರ್ದೇಶಕ ಚಂದ್ರಶೇಖರಗೌಡ ಪಾಟೀಲ ಹೇಳಿದರು.ತಾಲೂಕಿನ ರೋಣಿಹಾಳದಲ್ಲಿ ಶನಿವಾರ ಸಂಗನಬಸವ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ 9ನೇ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಸಂಗನಬಸವ ಶ್ರೀಗಳ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಈ ಶಾಲೆಯಲ್ಲಿ ಕಲಿತ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಆಯ್ಕೆಯಾಗಿದ್ದು ಬಹಳ ಸಂತೋಷ. ಈ ಕೀರ್ತಿ ಶಾಲೆಯ ಶಿಕ್ಷಕರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.
ಮನಗೂಳಿ ಹಿರೇಮಠ ಸಂಸ್ಥಾನದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಅವರು, ಜಿಲ್ಲೆಯಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ ಬಂಥನಾಳದ ಸಂಗನಬಸವ ಶ್ರೀಗಳ ನಂತರ ರೋಣಿಹಾಳ ಹಾಗೂ ಮನಗೂಳಿ ಭಾಗದಲ್ಲಿ ಭಕ್ತರಿಗಾಗಿ ದುಡಿದು 2ನೇ ನಡೆದಾಡುವ ದೇವರಾಗಿದ್ದವರು. ಮನಗೂಳಿ ಹಿರೇಮಠದ ಸಂಗನಬಸವ ಶ್ರೀಗಳು ಎಂದರು.ದೀಪ ತನ್ನ ದೇಹ ಸುಟ್ಟುಕೊಂಡು ಜಗತ್ತಿಗೆ ಬೆಳಕನ್ನು ಹೇಗೆ ನಿಡುತ್ತದೆಯೋ ಹಾಗೆಯೇ ರೋಣಿಹಾಳ ಹಾಗೂ ಮನಗೂಳಿ ಭಾಗದ ಸುತ್ತ-ಮುತ್ತಲಿನ ಹಳ್ಳಿಗಳಿಗೆ ಬೆಳಕನ್ನು ನೀಡಿದವರು ಸಂಗನಬಸವ ಮಹಾಸ್ವಾಮಿಗಳು. ಅವರ ಹೆಸರಿನಲ್ಲಿ ಇಂದು ರೋಣಿಹಾಳ ಗ್ರಾಮದಲ್ಲಿ ಶಾಲೆಯನ್ನು ಪ್ರಾರಂಭಿಸಲಾಗಿದೆ. ಈ ಶಾಲೆಯು ಬಡ ಮಕ್ಕಳಿಗೆ ವಿದ್ಯೆಯನ್ನು ನೀಡುತ್ತಿದೆ. ಇಲ್ಲಿ ವಿದ್ಯೆ ಕಲಿತ ಮಗು ಶ್ರೀಮಂತ ವ್ಯಕ್ತಿಯಾಗಿ ಬೆಳೆಯಲಿ. ಆದರೆ, ಶ್ರೀಮಂತನಾಗಿ ಹುಟ್ಟಿ ಬಡವನಾದರೆ ಬಹಳ ಕಷ್ಟವಾಗುತ್ತದೆ ಎಂದರು.
ಹುಬ್ಬಳ್ಳಿ ಧಾರವಾಡ ವಾಣಿಜ್ಯ ತೆರಿಗೆ ಇಲಾಖೆ ಡೆಪ್ಯೂಟಿ ಡೈರೆಕ್ಟರ್ ಶಂಕರ ಬೆಳ್ಳುಬ್ಬಿ ಜ್ಯೋತಿ ಬೆಳಗಿಸಿ ಮಾತನಾಡಿ, ಮಕ್ಕಳಿಗೆ ಎಲ್ಲ ಮಹನೀಯರನ್ನು ತೋರಿಸಿ ನೀನು ಏನಾಗುವೆ ಎಂದು ಕೇಳಬೇಕು. ಅಂದಾಗ ಆಗ ಮಗು ಆಯ್ಕೆ ಮಾಡಿಕೊಳತ್ತದೆ. ಈಗಿನ ಮತ್ತು ಹಿಂದಿನ ಜೀವನಕ್ಕೆ ಬಹಳ ವ್ಯತ್ಯಾಸವಿದೆ. ಹಿಂದೆ ನಾವೆಲ್ಲ ಪಾರ್ಲೆಜಿ ಬಳಸ್ತಿದ್ದಿವಿ. ಈಗಿನವರೂ 5ಜಿ ಬಳಸ್ತಾರೆ. ಗ್ರಾಂನಲ್ಲಿ ಲೆಕ್ಕ ಹಾಕತಿದ್ದಿವಿ, ಈಗಿನವರೂ ಇನ್ ಸ್ಟ್ರಾಗ್ರಾಂನಲ್ಲಿ ಇದ್ದಾರೆ. ಬುಕ್ಕ ಬಳಸ್ತಿದ್ದಿವಿ, ಈಗಿನವರೂ ಪೇಸ್ಬುಕ್ ಬಳಸ್ತಿದ್ದಾರೆ. ಮಕ್ಕಳಿಗೆ ಇಂದು ಉತ್ತಮ ಚಾರಿತ್ರ್ಯವನ್ನು ನೀಡುವಂತ ಶಿಕ್ಷಣ ಕೊಡಬೇಕಾಗಿದೆ ಅದನ್ನು ಈ ಸಂಗನಬಸವ ಶಾಲೆ ನೀಡತಾಯಿದೆ ಎಂದರು.ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಮಗು ಡಾಕ್ಟರ್‌ರಾಗು, ಇಂಜನಿಯರರಾಗು. ಆದರೆ, ಮೊದಲು ಮಾನವನಾಗು. ಇಂದು ಗ್ರಾಮೀಣ ಪ್ರದೇಶಗಳಲ್ಲಿ ಒಳ್ಳೆಯ ಪ್ರತಿಭೆಗಳಿವೆ. ಅವುಗಳನ್ನು ಹೊರತರಲು ಇಂತಹ ಸುಂದರವಾದ ಸುಸಂಸ್ಕೃತ ಶಾಲೆ ಬೇಕು. ಈ ಶಾಲೆ ಇಲ್ಲಿನ ಮಕ್ಕಳಿಗೆ ಒಳ್ಳೆಯ ಸಂಸ್ಕೃತಿಯನ್ನು ಕೊಡುತ್ತಿದೆ. ಹಿಂದೆ ನಾವೆಲ್ಲ ಶಾಲೆಯನ್ನು ಹುಡುಕಿಕೊಂಡು ಹೋಗುತ್ತಿದ್ದೇವು. ಆದರೆ, ಇಂದು ಶಾಲೆ ಮನೆ ಬಾಗಿಲಿಗೆ ಬಂದಿದೆ ಎಂದರು.
ಕಾರ್ಯಕ್ರಮದಲ್ಲಿ ಕನ್ನಡಪ್ರಭ ವರದಿಗಾರ ಮಲ್ಲಿಕಾರ್ಜುನ ಕುಬಕಡ್ಡಿ, ಉದಯಕುಮಾರ ಹಳ್ಳಿ, ಗುರು ಚಲವಾದಿ, ಮಹ್ಮದ್ ಗೌಸ ಹವಾಲ್ದಾರ ಇವರಿಗೆ ಸಂಗನಬಸವ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವಿವಿಧ ವಸತಿ ಶಾಲೆಗಳಿಗೆ ಆಯ್ಕೆಯಾದ ಮಕ್ಕಳಿಗೆ ಸನ್ಮಾನ ಮಾಡಲಾಯಿತು. ನಂತರ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಮನಗೂಳಿ ಹಿರೇಮಠದ ಅಭಿನವ ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಸಾನ್ನಿಧ್ಯವನ್ನುರೋಣಿಹಾಳದ ರಾಜಶೇಖರಯ್ಯ ಹಿರೇಮಠ, ಮಹಾಂತಯ್ಯ ಮಠಪತಿ ವಹಿಸಿದ್ದರು. ಅಧ್ಯಕ್ಷತೆಯನ್ನು ಮಕ್ಕಳ ಸಾಹಿತಿ ಪ.ಗು.ಸಿದ್ದಾಪುರ ವಹಿಸಿದ್ದರು. ಉದ್ಘಾಟನೆಯನ್ನು ಚಂದ್ರಶೇಖರಗೌಡ ಪಾಟೀಲ ನೆರವೇರಿಸಿದರು. ವಾಣಿಜ್ಯ ತೆರಿಗೆ ಡಿ.ಸಿ.ಶಂಕರ ಬೆಳ್ಳುಬ್ಬಿ, ಶಾಲಾ ಆಡಳಿತ ಮಂಡಳಿ ಜಿಲ್ಲಾಧ್ಯಕ್ಷ ಬಸವರಾಜ ಪೂಜಾರಿ ಜ್ಯೋತಿ ಬೆಳಗಿಸಿದರು. ಅತಿಥಿಗಳಾಗಿ ಸಂಸ್ಥೆಯ ಅಧ್ಯಕ್ಷ ಶ್ರೀಶೈಲ ಪಾರಗೊಂಡ, ಬಸವರಾಜ ಬೀಳಗಿ, ತಾನಾಜಿ ನಾಗರಾಳ, ಗುರನಗೌಡ ಬಿರಾದಾರ, ಮಲ್ಲು ದೇಸಾಯಿ ಬೀಳಗಿ, ಓಂಕಾರಗೌಡ ಪಾಟೀಲ, ಗಂಗಾಧರ ಚೌಧರಿ, ಜಗದೀಶ ಸಾಲಳ್ಳಿ, ಆರ್.ಸಿ.ಹಿರೇಮಠ, ಇರಫಾನ್ ಬೀಳಗಿ, ಮಲ್ಲಿಕಾರ್ಜುನ ಚಿಮ್ಮಲಗಿ, ಜಿ.ಐ.ಗೋಡ್ಯಾಳ, ಎಸ್.ಜಿ.ಪಾರಗೊಂಡ, ಶಿವಗೊಂಡ ಪಾರಗೊಂಡ, ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಸಿದ್ದಲಿಂಗ ರೂಡಗಿ, ಉಪನ್ಯಾಸಕ ಮಂಜುನಾಥ ಮಟ್ಯಾಳ, ಆನಂದ ಪಾರಗೊಂಡ ಕಾರ್ಯಕ್ರಮ ನಡೆಸಿಕೊಟ್ಟರು.