ಹಿಂದುತ್ವ ರಕ್ಷಣೆ ಹೋರಾಟಕ್ಕೆ ಯಾರೂ ಬರುತ್ತಿಲ್ಲ

| Published : Sep 30 2024, 01:21 AM IST

ಸಾರಾಂಶ

ನಮ್ಮ ಹಿಂದು ಹೆಣ್ಣು ಮಕ್ಕಳು ಆಯ್ಕೆ ಮಾಡಿಕೊಂಡವವರನ್ನು ನೋಡಿದರೆ ವಾಂತಿ ಬರುವ ಹಾಗೆ ಇರುತ್ತದೆ. ಅಂತವರನ್ನು ನಂಬಿ ಮನೆ ಮಟ ಬಿಟ್ಟು ಅವರ ಜೊತೆ ಹಿಂದೂ ಸಮುದಾಯದ ಹೆಣ್ಣು ಮಕ್ಕಳು ಒಪ್ಪಿಕೊಳ್ಳುತ್ತಿರುವುದು ಖಂಡನೀಯ.

ಕನ್ನಡಪ್ರಭ ವಾರ್ತೆ ಕೋಲಾರಸೊಳ್ಳೆ ಸಾಯಿಸಿದ್ರು ಹೋರಾಟ ಮಾಡುವ ಕಾಲದಲ್ಲಿ ಹಿಂದುತ್ವ ಹಿಂದು ಸಮುದಾಯದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವ ವಿಚಾರ ಬಂದಾಗ ಪ್ರತಿಭಟಿಸಿಲು ಯಾರು ಮುಂದೆ ಬರುತ್ತಿಲ್ಲ ಎಂದು ಶ್ರೀರಾಮ ಸೇನೆಯ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ನರಗಲ್ ವಿಷಾದ ವ್ಯಕ್ತಪಡಿಸಿದರು. ನಗರದ ಪತ್ರಕರ್ತರ ಭವನದಲ್ಲಿ ಶ್ರೀರಾಮಸೇನೆ ಕರ್ನಾಟಕ ಕೋಲಾರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಾವೆಲ್ಲರೂ ಎಚ್ಚೆತ್ತುಕೊಂಡು ಶ್ರೀರಾಮಸೇನೆಯ ಸಂಘಟನೆ ಬಲಿಷ್ಟವಾಗಿ ಸಂಘಟನೆ ಮಾಡುವ ಮೂಲಕ ಹಿಂದೂ ರಾಷ್ಟವನ್ನಾಗಿಸಲು ಪಣ ತೊಡಬೇಕು ಎಂದು ಮನವಿ ಮಾಡಿದರು. ಹೆಣ್ಣು ಮಕ್ಕಳ ವರ್ತನೆಗೆ ಖಂಡನೆ

ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿದೆ, ನಮ್ಮ ಹಿಂದು ಹೆಣ್ಣು ಮಕ್ಕಳು ಆಯ್ಕೆ ಮಾಡಿಕೊಂಡವರನ್ನು ನೋಡಿದರೆ ವಾಂತಿ ಬರುವ ಹಾಗೆ ಇರುತ್ತದೆ. ಅಂತವರನ್ನು ನಂಬಿ ಮನೆ ಮಟ ಬಿಟ್ಟು ಅವರ ಜೊತೆ ಹಿಂದು ಸಮುದಾಯದ ಹೆಣ್ಣು ಮಕ್ಕಳು ಒಪ್ಪಿಕೊಳ್ಳುತ್ತಿರುವುದು ಖಂಡನೀಯ. ಅವರನ್ನು ರಕ್ಷಿಸಲು ಮುಂದಾಗುವ ನಮ್ಮನ್ನು ನಂಬಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಪದಾಧಿಕಾರಿಗಳ ಆಯ್ಕೆ:ಶ್ರೀ ರಾಮಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ಚಿನ್ನಪ್ಪಿ, ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ನಾಗೇಂದ್ರ, ಉಪಾಧ್ಯಕ್ಷರಾಗಿ ಹರೀಶ್, ಸಹಕಾರ್ಯದರ್ಶಿ ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿಯಾಗಿ ಗೌತಮ್, ಚಂದ್ರಶೇಖರ್, ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಮುಖ್ ಹಿಂದು ಆನಂದ್, ತಾಲ್ಲೂಕು ಸಾಮಾಜಿಕ ಜಾಲಾತಾಣ ಪ್ರಮುಖ್ ಶ್ರೀಕಾಂತ್.ಎಚ್ ಆಯ್ಕೆಯಾದರು.ಬೆಂಗಳೂರು ನಗರ ಅಧ್ಯಕ್ಷ ಭಾಸ್ಕರ್, ಶ್ರೀರಾಮ ಸೇನೆ ಕೋಲಾರ-ಚಿಕ್ಕಬಳ್ಳಾಪುರ ವಿಭಾಗೀಯ ಅಧ್ಯಕ್ಷ ರಮೇಶ್ ರಾಜ್ ಅರಸ್, ಹಿಂದು ಸಂಘಟನೆಯ ಮುಖಂಡ ಅಡಿಕೆ ನಾಗರಾಜ್ ಇದ್ದರು.