ಆರೋಗ್ಯದ ಬಗ್ಗೆ ಯಾರು ನಿರ್ಲಕ್ಷ್ಯ ಮಾಡುವುದು ಬೇಡ

| Published : Oct 14 2024, 01:16 AM IST

ಸಾರಾಂಶ

ಬೀದರ್: ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಅತಿ ಕಡಿಮೆ ಶುಲ್ಕದಲ್ಲಿ ಆರೋಗ್ಯ ತಪಾಸಣೆ ಮಾಡುವ ಖ್ಯಾತ ಹಿರಿಯ ವೈದ್ಯ ಡಾ.ಸುಭಾಷ ಕರ್ಪೂರ ನುಡಿದರು.

ಬೀದರ್: ನಾವು ನಮ್ಮ ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿರ್ಲಕ್ಷ್ಯ ಮಾಡಬಾರದು ಎಂದು ಅತಿ ಕಡಿಮೆ ಶುಲ್ಕದಲ್ಲಿ ಆರೋಗ್ಯ ತಪಾಸಣೆ ಮಾಡುವ ಖ್ಯಾತ ಹಿರಿಯ ವೈದ್ಯ ಡಾ.ಸುಭಾಷ ಕರ್ಪೂರ ನುಡಿದರು.

ಅವರು ಅ.13ರಂದು ಸೂರ್ಯ ನಮಸ್ಕಾರ ಸಂಘದಿಂದ ಬೀದರ್-ಹೈದ್ರಾಬಾದ್ ರಿಂಗ್ ರೋಡ್ ಹತ್ತಿರವಿರುವ ನಾಗಶೆಟ್ಟಿ ಕರ್ಪೂರ ಲೇಔಟ್‌ನಲ್ಲಿ ಹಮ್ಮಿಕೊಂಡಿದ್ದ ಉತ್ತಮ ಆರೋಗ್ಯ ಸಂರಕ್ಷಣೆ ಕುರಿತು ಏರ್ಪಡಿಸಿದ್ದ ಉಪನ್ಯಾಸದಲ್ಲಿ ಮಾತನಾಡಿ, ಉತ್ತಮ ಆರೋಗ್ಯವಿದ್ದರೆ ಮಾತ್ರ ಜೀವನದಲ್ಲಿ ಶಾಂತಿ-ನೆಮ್ಮದಿ, ಹಿಡಿದ ಗುರಿ ಮುಟ್ಟಲು ಸಾಧ್ಯ ಎಂದು ನುಡಿದರು. ಒಂದು ವೇಳೆ ನಾವು ಆರೊಗ್ಯವಂತರಾಗಿರದಿದ್ದರೆ ಯಾವುದೇ ಕೆಲಸದಲ್ಲಿ ಉತ್ಸಾಹ ಚೈತನ್ಯ ಇರುವುದಿಲ್ಲ. ಹಾಗಾಗಿ ನಾವು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ, ಸಮಯಕ್ಕೆ ಸರಿಯಾಗಿ ನಮ್ಮ ದಿನನಿತ್ಯದ ಆಹಾರಕ್ರಮ ಹಿತ, ಮಿತವಾಗಿ ಇಟ್ಟುಕೊಳ್ಳಬೇಕು ಎಂದರು.ಸೂರ್ಯ ನಮಸ್ಕಾರ ಸಂಘದ ಅಧ್ಯಕ್ಷ ಕಾಮಶೆಟ್ಟಿ ಚಿಕಬಸೆ ಮಾತನಾಡಿ, ಯುವಕ-ಯುವತಿಯರು ಇಂದು ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಖೇದದ ಸಂಗತಿ. ಯಾವುದೇ ಚಟಗಳಿಗೆ ಅಂಟಿಕೊಳ್ಳದೆ ಅದರಿಂದ ಹೊರಬರಬೇಕು. ಕ್ರಮಬದ್ಧವಾಗಿ ನಮ್ಮ ಜೀವನ ಸಾಗಿಸಬೇಕು ಎಂದು ಎಚ್ಚರಿಸಿದರು. ಸಂಘದ ಕಾರ್ಯದರ್ಶಿ ಶಿವಕುಮಾರ ಪಾಟೀಲ, ಕೋಶಾಧ್ಯಕ್ಷ ಸಚ್ಚಿದಾನಂದ ಚಿದ್ರೆ, ನಿತೀನ ಕರ್ಪೂರ, ಶಿವಕುಮಾರ ಪಾಖಾಲ್, ಭಗವಂತಪ್ಪಾ, ರಾಘವೇಂದ್ರ ಕುಲಕರ್ಣಿ, ಸುರೇಶ ಬಿರಾದಾರ, ಸುಧಾಕರ ಬಿರಾದಾರ, ಚಂದ್ರಕಾಂತ ಫುಲೇಕರ, ಸತ್ಯನಾರಾಯಣ, ಸತೀಶ ಸ್ವಾಮಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.