ಹೊಸ ಲೈಸೆನ್ಸ್‌ ಕೊಡ್ತೇವಂತಡಿಸಿಎಂ ಹೇಳಿಲ್ಲ: ಸಿದ್ದು

| Published : Oct 08 2023, 12:02 AM IST

ಹೊಸ ಲೈಸೆನ್ಸ್‌ ಕೊಡ್ತೇವಂತಡಿಸಿಎಂ ಹೇಳಿಲ್ಲ: ಸಿದ್ದು
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಬಾರ್‌ಗೆ ಲೈಸೆನ್ಸ್ ಕೊಡುವ ಯಾವ ವಿಚಾರ ಸದ್ಯ ಸರ್ಕಾರದ ಮುಂದೆ ಇಲ್ಲ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ. ಸದ್ಯಕ್ಕೆ ಆ ವಿಚಾರದಲ್ಲಿ ಯಾವುದೇ ಚರ್ಚೆಗಳು ಅನವಶ್ಯಕ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಕನ್ನಡಪ್ರಭ ವಾರ್ತೆ ಮೈಸೂರು ಹೊಸ ಬಾರ್‌ಗೆ ಲೈಸೆನ್ಸ್ ಕೊಡುವ ಯಾವ ವಿಚಾರವೂ ಸದ್ಯ ಸರ್ಕಾರದ ಮುಂದೆ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹೊಸ ಬಾರ್‌ಗಳಿಗೆ ಲೈಸೆನ್ಸ್‌ ಕೊಡುವ ನಿರ್ಧಾರವಂತೂ ಸರ್ಕಾರ ತೆಗೆದುಕೊಂಡಿಲ್ಲ ಎಂದರಲ್ಲದೆ, ಇನ್ನು ಈ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲೂ ಕೂಡ ಹೊಸ ಲೈಸೆನ್ಸ್ ಕೊಡುತ್ತೇವೆ ಎಂದು ಹೇಳಿಲ್ಲ ಎಂದೂ ಪ್ರತಿಪಾದಿಸಿದರು. ಸದ್ಯಕ್ಕೆ ಆ ವಿಚಾರದಲ್ಲಿ ಯಾವುದೇ ಚರ್ಚೆಗಳೂ ಅನವಶ್ಯ. ರಾಜ್ಯದ ಜನರ ಭಾವನೆಗಳನ್ನು ನಾವು ಕೇಳಬೇಕಿದೆ. ಹಾಗಾಗಿ ನಾನು ಸ್ಪಷ್ಟವಾಗಿ ಹೇಳುತ್ತಿ ದ್ದೇನೆ ಹೊಸ ಬಾರ್‌ಗೆ ಲೈಸೆನ್ಸ್ ನೀಡುವ ನಿರ್ಧಾರವಿಲ್ಲ ಎಂದು ಖಚಿತವಾಗಿ ಹೇಳಿದರು.