ಈ ವೇದಿಕೆಗೆ ತೆರಳಿ ವಿಕಲಚೇತನ ಬಾಲಕ ಜೀವಿ ನಾಯಕ್ ಕೇಂದ್ರ ಸಚಿವರಲ್ಲಿ ಆಟವಾಡಲು ಜೀಪ್ ಕೊಡಿಸುವಂತೆ ಕೇಳಿದ್ದಾನೆ. ತಕ್ಷಣ ತಮ್ಮ ಆಪ್ತ ಸಿಬ್ಬಂದಿಗೆ ಸೂಚಿಸಿ ಎಲೆಕ್ಟ್ರಿಕ್ ಜೀಪ್ ತರಿಸಿದ ಕೇಂದ್ರ ಸಚಿವರು ಅದನ್ನು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬಾಲಕನಿಗೆ ಉಡುಗೊರೆಯಾಗಿ ನೀಡಿ ಬಾಲಕ ಆಸೆ ಪೂರೈಸಿ ಖುಷಿ ಪಡಿಸಿದರು.

ಮಂಡ್ಯ: ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪನೆ ಮಾಡಲು ಜಾಗಕ್ಕೆ ಕಾಯುತ್ತಿದ್ದೇನೆ ಹೊರತು ಯಾವುದೇ ರಾಜಕೀಯ ಮಾಡುತ್ತಿಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕಾರ್ಖಾನೆ ಸ್ಥಾಪನೆಗೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇನೆ. ನಾನು ರೈತರ ಫಲತ್ತಾದ ಭೂಮಿ ಕೊಡಿ ಎಂದು ಹೇಳಲ್ಲ. ಮಳೆಯಾಶ್ರಿತ ಪ್ರದೇಶದ ಭೂಮಿ ಕೇಳುತ್ತಿದ್ದೇನೆ. ನನ್ನ ಇಲಾಖೆಯಿಂದ ಕೆಲ ನಿರ್ಧಾರ ಮಾಡಿಕೊಂಡಿದ್ದೇನೆ. ಭೂಮಿ ಕೊಟ್ಟ ತಕ್ಷಣ ಕೆಲಸ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದರು.

ಡೀಸಿ, ಕೆಇಡಿಬಿ, ಕೈಗಾರಿಕಾ ಸಚಿವರ ಜತೆ ಮಾತಾಡಿದ್ದೇನೆ. ವಿಧಾನಸೌಧದಲ್ಲೂ ನಾನೇ ಸಭೆ ಮಾಡಿದ್ದೇನೆ. ಈ ವಿಚಾರದಲ್ಲಿ ರಾಜಕೀಯ ಇಲ್ಲ. ಕೆಲ ಕಾಂಗ್ರೆಸ್ ಶಾಸಕರು ಎದುರುಗಡೆ ಅಣ್ಣ ಎನ್ನುತ್ತಾರೆ. ನಿನ್ನ ಬಿಟ್ಟರೆ ಯಾರು ಇಲ್ಲ ಎನ್ನುತ್ತಾರೆ. ಹೇಳಿಕೆಗಳಲ್ಲಿ ಏನು ಮಾಡಿದ್ದೇನೆ ಎನ್ನುತ್ತಾರೆ. ಆ ವಿಚಾರದಲ್ಲಿ ರಾಜಕೀಯ ನಾನು ಬೆರಸಲ್ಲ ಎಂದರು.

ಜಿಲ್ಲೆಗೆ ಕಾರ್ಖಾನೆ ತರುವ ನನ್ನ ಬದ್ಧತೆ ವಿಫಲವಾಗಲ್ಲ. ಎಲ್ಲವನ್ನೂ ಕಾಲ ನಿರ್ಧಾರ ಮಾಡುತ್ತದೆ. ನನ್ನ ಮೇಲೆ ವಿಶ್ವಾಸವಿಟ್ಟಿರುವ ಯುವಕರು, ಜಿಲ್ಲೆಯ ಜನರ ಆಸೆ ಈಡೇರಿಸಲು ಭಗವಂತ ಶಕ್ತಿ ಕೊಡುತ್ತಾನೆ ಎಂದು ಹೇಳಿದರು.

--------------------ವಿಶೇಷಚೇತನ ಬಾಲಕನಿಗೆ ಎಲೆಕ್ಟ್ರಿಕ್ ಆಟವಾಡುವ ಜೀಪ್ ಕೊಡಿಸಿದ ಎಚ್ಡಿಕೆ

ಮಂಡ್ಯ: ವಿಕಲಚೇತನ ಬಾಲಕನಿಗೆ ಆಟವಾಡುವ ಎಲೆಕ್ಟ್ರಿಕ್ ಜೀಪ್ ಕೊಡಿಸಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪುಟ್ಟ ಬಾಲಕನ ಆಸೆಯನ್ನು ಪೂರೈಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್‌ಆರ್) ಅನುದಾನದಲ್ಲಿ ವಿಶೇಷ ಚೇತನರಿಗೆ ನೀಡುವ ವಿವಿಧ ಸಲಕರಣೆಗಳ ಕಾರ್ಯಕ್ರಮದಲ್ಲಿ ನಗರದ ಬೀಡಿ ಕಾಲೋನಿಯ ನಿವಾಸಿಗಳಾದ ಯೋಗೀಶ್ ಮತ್ತು ನಂದಿನಿ ದಂಪತಿ ಪುತ್ರ 8 ವರ್ಷದ ಜೀವಿತ್ ನಾಯಕ್ ಕೂಡ ಭಾಗವಹಿಸಿದ್ದರು.

ಈ ವೇದಿಕೆಗೆ ತೆರಳಿ ವಿಕಲಚೇತನ ಬಾಲಕ ಜೀವಿ ನಾಯಕ್ ಕೇಂದ್ರ ಸಚಿವರಲ್ಲಿ ಆಟವಾಡಲು ಜೀಪ್ ಕೊಡಿಸುವಂತೆ ಕೇಳಿದ್ದಾನೆ. ತಕ್ಷಣ ತಮ್ಮ ಆಪ್ತ ಸಿಬ್ಬಂದಿಗೆ ಸೂಚಿಸಿ ಎಲೆಕ್ಟ್ರಿಕ್ ಜೀಪ್ ತರಿಸಿದ ಕೇಂದ್ರ ಸಚಿವರು ಅದನ್ನು ಜಿಲ್ಲಾ ಪಂಚಾಯ್ತಿ ಕಚೇರಿಯಲ್ಲಿ ಬಾಲಕನಿಗೆ ಉಡುಗೊರೆಯಾಗಿ ನೀಡಿ ಬಾಲಕ ಆಸೆ ಪೂರೈಸಿ ಖುಷಿ ಪಡಿಸಿದರು.

ಬಾಲಕನ ಸಂತಸ ನೋಡಿ ಸ್ಥಳದಲ್ಲಿದ್ದ ತಾಯಿ ನಂದಿನಿ ಹಾಗೂ ಭಾಗವಹಿಸಿದ ಎಲ್ಲರೂ ಸಂತೋಷ ಪಟ್ಟರು. ಈ ವೇಳೆ ಎಚ್ಚರಿಕೆಯಿಂದ ಎಲೆಕ್ಟ್ರಿಕ್ ಜೀಪ್ ನೊಂದಿಗೆ ಆಟವಾಡುವಂತೆ ಎಚ್ಡಿಕೆ ಸಲಹೆ ನೀಡಿದರು.