ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲ್ಲ: ಮಂಕಾಳ ವೈದ್ಯ

| Published : Jan 07 2025, 12:32 AM IST

ಸಾರಾಂಶ

ಐಟಿಐ ಕಾಲೇಜು ಕಟ್ಟಡಕ್ಕಾಗಿ ಅನುದಾನ ಕೂಡ ಮಂಜೂರಿಸಿ ಅಂದೂ ಕೂಡ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಭಟ್ಕಳಕ್ಕೆ ಆಗಮಿಸಿ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು ಎಂದು ಸಚಿವ ಮಂಕಾಳ ವೈದ್ಯ ತಿಳಿಸಿದರು.

ಭಟ್ಕಳ: ತಾಲೂಕಿನ ಜಾಲಿಯಲ್ಲಿ ₹5.5 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಸರ್ಕಾರಿ ಐಟಿಐ ಕಾಲೇಜಿನ ಕಟ್ಟಡವನ್ನು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಅವರು, 2007ರಲ್ಲಿ ಮಂಜೂರಿಯಾದ ಐಟಿಐ ಕಾಲೇಜು ಬಾಡಿಗೆ ಕಟ್ಟಡದಲ್ಲಿ ಇರುವುದನ್ನು ಮನಗಂಡು 2017ರಲ್ಲಿ ಹೆಬಳೆಯಲ್ಲಿ 5.36 ಎಕರೆ ಜಾಗ ಮಂಜೂರಿಸಿ ಶಿಕ್ಷಣ ಸಂಸ್ಥೆಗಳಿಗಾಗಿ ಮೀಸಲಿರಿಸಲಾಗಿತ್ತು. ಐಟಿಐ ಕಾಲೇಜು ಕಟ್ಟಡಕ್ಕಾಗಿ ಅನುದಾನ ಕೂಡ ಮಂಜೂರಿಸಿ ಅಂದೂ ಕೂಡ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ಭಟ್ಕಳಕ್ಕೆ ಆಗಮಿಸಿ ಕಟ್ಟಡಕ್ಕೆ ಅಡಿಗಲ್ಲು ಹಾಕಿದ್ದರು. ಆದರೆ ಇಂದು ಹೆಬಳೆಯಿಂದ ಜಾಲಿಯ ಈ ಸ್ಥಳಕ್ಕೆ ಐಟಿಐ ಕಾಲೇಜು ಕಟ್ಟಡ ವರ್ಗಾವಣೆಯಾಗಿದೆಯೇ ಹೊರತು ಅಂದು ನಾನು ಮಂಜೂರಿಸಿಕೊಂಡು ಬಂದ ಅನುದಾನದಿಂದಲೇ ಕಟ್ಟಡ ನಿರ್ಮಿಸಲಾಗಿದೆ. ಇದಕ್ಕೆ ದಾಖಲೆ ಬೇಕಾದರೂ ಕೊಡಲು ಸಿದ್ಧ ಎಂದ ಅವರು, ಅಭಿವೃದ್ಧಿ ವಿಚಾರದಲ್ಲಿ ನಾನೆಂದೂ ರಾಜಕೀಯ ಮಾಡಲಾರೆ ಎಂದರು.

ಜಿಲ್ಲಾ ಗ್ಯಾರಂಟಿ ಸಮತಿಯ ಅಧ್ಯಕ್ಷ ಸತೀಶ ನಾಯ್ಕ, ಪಂ.ರಾ. ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಭಿಯಂತರ ರಾಮು ಪಿ. ಗುನಗಿ, ಸಹಾಯಕ ಕಾರ್ಯನಿರ್ವಾಹಕ ಮಲ್ಲಪ್ಪ ಮಡಿವಾಳ, ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ರಾಜು ನಾಯ್ಕ, ಕ್ಷೇತ್ರ ಶಿಕ್ಷಣಾಧಿಕಾರಿ ವೆಂಕಟೇಶ ನಾಯಕ, ಜಂಟಿ ನಿರ್ದೇಶಕ ಬಸವರಾಜ ಹಿರೇಮಠ, ಜಿಲ್ಲಾ ಕೌಶಲ್ಯಾಧಿಕಾರಿ ಟಿ.ಪಿ. ನಾಯ್ಕ, ಐಟಿಐ ಕಾಲೇಜಿನ ಪ್ರಾಂಶುಪಾಲ ಗಂಗಾಧರಪ್ಪ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ಎನ್. ನಾಯ್ಕ, ಜಾಲಿ ಪಟ್ಟಣ ಪಂಚಾಯಿತಿ ಸದಸ್ಯರಾದ ನಾಗರಾಜ ನಾಯ್ಕ, ರಮೇಶ ನಾಯ್ಕ, ರಮೇಶ ಗೊಂಡ, ದಯಾನಂದ ನಾಯ್ಕ, ಈಶ್ವರ ಮೊಗೇರ, ಶಾಹಿನಾ ಶೇಖ, ಶಮೀಮ ಬಾನು, ಫಾತಿಮಾ ಮುಂತಾದವರು ಉಪಸ್ಥಿತರಿದ್ದರು. ಡಿ.ಆರ್. ಲೂಗಾದಿ ಪ್ರಾರ್ಥಿಸಿದರು. ಪ್ರಾಂಶುಪಾಲ ಗಂಗಾಧರಪ್ಪ ವರದಿ ವಾಚಿಸಿದರು. ಶಿಕ್ಷಕ ನಾರಾಯಣ ನಾಯ್ಕ ಸ್ವಾಗತಿಸಿ, ನಿರೂಪಿಸಿದರು.ಇಂದು ಅಯ್ಯಪ್ಪ ಸ್ವಾಮಿಯ ಮಹಾಪೂಜೆ

ಶಿರಸಿ: ಬನವಾಸಿಯ ವರದಾ ಚೌಡೇಶ್ವರಿ ದೇವಸ್ಥಾನದ ಪಕ್ಕದಲ್ಲಿರುವ ತತ್ವಮಸಿ ಅಯ್ಯಪ್ಪ ಸ್ವಾಮಿ ಸೇವಾ ಸನ್ನಿಧಿಯಲ್ಲಿ ಜ. ೭ರಂದು ಮಧ್ಯಾಹ್ನ ೧೨ ಗಂಟೆಗೆ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಎಂದು ಗುರುಸ್ವಾಮಿ ಪರಶುರಾಮ ಜೋಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.ಬೆಳಗ್ಗೆ ಗಣಹೋಮ, ಭಜನೆ ಕುಂಭಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಮಧ್ಯಾಹ್ನ ೧೨.೩೦ರಿಂದ ೩.೩೦ರ ವರೆಗೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಜ. ೮ರಂದು ಮಾಲಾಧಾರಿ ಸ್ವಾಮಿಗಳ ಇರುಮುಡಿ ಕಟ್ಟುವ ಕಾರ್ಯಕ್ರಮ ನಡೆಯಲಿದೆ. ಬಳಿಕ ಶಬರಿಮಲೆ ಯಾತ್ರೆಗೆ ಹೊರಡಲಿದ್ದಾರೆ.