ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಡೆಂಘೀ ಮಹಾಮಾರಿ ರಾಜ್ಯದಲ್ಲಿ ಕಾಡುತ್ತಿದೆ. ರಾಜ್ಯದಲ್ಲಿ 7,125 ಡೆಂಘೀ ಕೇಸ್ ಪತ್ತೆಯಾಗಿ ಓರ್ವ ವೈದ್ಯ, ಏಳು ಜನರನ್ನು ಕಳೆದುಕೊಂಡರೂ ವಿಜಯಪುರದಲ್ಲಿ ಯಾವುದೇ ತರಹದ ತಯಾರಿ ಹಾಗೂ ಫಾಗಿಂಗ್ ಸಿಂಪಡಿಸುವಿಕೆ, ನೀರು ನಿಲ್ಲುವ ತೆಗ್ಗುಗಳನ್ನು ಮುಚ್ಚುವುದು ಕಂಡು ಬರುತ್ತಿಲ್ಲ ಎಂದು ವ್ಯಾಪಾರ ಮತ್ತು ವಾಣಿಜ್ಯ ಪ್ರಕೋಷ್ಠ ಬಿಜೆಪಿ ರಾಜ್ಯ ಸಂಚಾಲಕ ವಿಜಯಕುಮಾರ ಕುಡಿಗನೂರ ದೂರಿದ್ದಾರೆ.ಜಿಲ್ಲಾ ಆಸ್ಪತ್ರೆ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಸಂಪೂರ್ಣ ವೈಫಲ್ಯತೆ ಕಂಡು ಬರುತ್ತಿದೆ. ರಾಜ್ಯ ಸರ್ಕಾರ ಡೆಂಘೀ ಗ್ಯಾರಂಟಿಯನ್ನು ಕೊಡುವುದರಲ್ಲಿ ಮುಂದಾದ ಆರೋಗ್ಯ ಮಂತ್ರಿಗಳು ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಸಚಿವ ಭಗಿರತಿ ಬೈರತಿ ಸುರೇಶ್, ಪೌರಾಡಳಿತ ಸಚಿವ ರಹೀಮ್ ಖಾನ್ ಇವರೆಲ್ಲರೂ ರಾಜೀನಾಮೆ ಕೊಡುವ ಪರಿಸ್ಥಿತಿ ಬರಬಹುದು. ಇನ್ನಾದರೂ ತಾವು ಎಚ್ಚರ ವಹಿಸಬೇಕು ಎಂದು ಎಚ್ಚರಿಕೆ ನೀಡಿದರು.ಜಿಲ್ಲೆಗೆ ಒಂದು ಪರೀಕ್ಷಾ ಕೇಂದ್ರ ಸಾಲೋದಿಲ್ಲ. ತಾಲೂಕು ಮಟ್ಟದಲ್ಲಿಯೂ ಸಹಿತ ಎಲಿಸಾ ಪರೀಕ್ಷೆ ಮಾಡುವ ವ್ಯವಸ್ಥೆ ತಕ್ಷಣದಿಂದಲೇ ಪ್ರಾರಂಭಿಸಬೇಕು. ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷೆಗೆ ₹500 ಸ್ವೀಕರಿಸುತ್ತಿದ್ದಾರೆ. ಬಿಪಿಎಲ್ ಕಾರ್ಡ್‌ದಾರಿಗೆ ಉಚಿತ ವ್ಯವಸ್ಥೆ ಕಡ್ಡಾಯವಾಗಿ ಮಾಡಬೇಕು. ಪ್ರೈವೇಟ್ ಹಾಸ್ಪಿಟಲ್‌ಗಳಲ್ಲಿಯೂ ಸಹಿತ ಬಿಪಿಎಲ್ ಕಾರ್ಡ್‌ದಾರರಿಗೆ ಉಚಿತ ಪರೀಕ್ಷೆ ಮಾಡಿಸುವ ವ್ಯವಸ್ಥೆ ಮಾಡಬೇಕು. ಬಿಳಿರಕ್ತ ಕಣಗಳ ಪರೀಕ್ಷೆ ಮಾಡುವ ವ್ಯವಸ್ಥೆಯ ತಾಲೂಕು ಕೇಂದ್ರಗಳಲ್ಲಿ ಇಲ್ಲ ಎಂದು ಪ್ರಕಟಣೆಯಲ್ಲಿ ದೂರಿದ್ದಾರೆ.