ಸಾರಾಂಶ
- ಆಲ್ ಇಂಡಿಯಾ ಬಂಜಾರಾ ಸೇವಾ ಸಂಘದಿಂದ ಪ್ರತಿಭಟನೆ: ಸರ್ಕಾರಕ್ಕೆ ಮನವಿ
- ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ವಿರೋಧ------
ಕನ್ನಡಪ್ರಭ ವಾರ್ತೆ ಯಾದಗಿರಿರಾಜ್ಯ ಸರ್ಕಾರವು ಸೂಕ್ತ ಅಧ್ಯಯನ ಇಲ್ಲದೆ ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಜಾರಿಗೊಳಿಸಲು ನಡೆಸುತ್ತಿರುವುದು ಸರಿಯಲ್ಲ ಎಂದು ವಿರೋಧಿಸಿರುವ ಆಲ್ ಇಂಡಿಯಾ ಬಂಜಾರ ಸೇವಾ ಸಂಘವು, ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿತು.
ಸಂಘದ ಜಿಲ್ಲಾಧ್ಯಕ್ಷ ಅಂಬರೇಶ್ವರ ರಾಠೋಡ ಮಾತನಾಡಿ, ಮೀಸಲಾತಿ ವರ್ಗೀಕರಣ, ರಾಜ್ಯದಲ್ಲಿ ಇರುವ ಎಲ್ಲ ಸಮುದಾಯಗಳ ಸರಿಯಾದ ಅಧ್ಯಯನ ಇಲ್ಲದೆ ಮತ್ತು ವೈಜ್ಞಾನಿಕವಾಗಿ ದತ್ತಾಂಶವನ್ನು ಸಂಗ್ರಹಿಸದೆ ತರಾತುರಿಯಲ್ಲಿ ಮಾಡಕೂಡದು.ವೈಜ್ಞಾನಿಕವಾಗಿ ಸಂಗ್ರಹಿಸಿದ ದತ್ತಾಂಶದ ಆಧಾರದಲ್ಲೇ ಪರಿಶಿಷ್ಟರ ಹಿಂದುಳಿದಿರುವಿಕೆಯನ್ನು ಗುರುತಿಸಬೇಕು. ಪರಿಶಿಷ್ಟರ ಜಾತಿ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗತಿಗಳು, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಆಧರಿಸಿಯೇ ಒಳಮಿಸಲು ಹಂಚಿಕೆ ನಿರ್ಧಾರ ಕೈಗೆತ್ತಿಕೊಳ್ಳಬೇಕು ಎಂದರು.
ಬಂಜಾರಾ ಸಮುದಾಯದ ಜನರ ಶಿಕ್ಷಣ ಮತ್ತು ಉದ್ಯೋಗದಲ್ಲಿ ದೊರಕಿರುವ ಅವಕಾಶಗಳು, ಆರ್ಥಿಕ ಸ್ಥಿತಿಗಳು, ರಾಜಕೀಯ ಸ್ಥಾನಮಾನ ಮತ್ತು ಸಾಮಾಜಿಕ ವ್ಯವಸ್ಥೆಯ ನಿಖರ ಅಂಕಿ ಅಂಶಗಳನ್ನು ಒಳಗೊಂಡ ದತ್ತಾಂಶವನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. 2011ರ ನಂತರ ಜನಗಣತಿ ನಡೆದಿರುವುದಿಲ್ಲ. ಜನಸಂಖ್ಯಾ ಮಾಹಿತಿ ಇಲ್ಲದೆ ಮತ್ತು ಜಾತಿ ಜನಗಣತಿ ಆಗದೆ ಒಳಮೀಸಲಾತಿ ಮತ್ತು ವರ್ಗೀಕರಣದ ವಿಚಾರ ಅಥವಾ ಪ್ರಯತ್ನ ಸಮಂಜಸವಾಗಿರುವುದಿಲ್ಲ. ಈ ತಪ್ಪನ್ನು ರಾಜ್ಯ ಸರ್ಕಾರ ಮಾಡಬಾರದು ಎಂದರು.ಬಂಜಾರಾ ಸಮುದಾಯವು ರಾಜ್ಯದಲ್ಲಿ ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ದುರ್ಬಲ ಸಮುದಾಯ ಆಗಿದ್ದು, ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳನ್ನೊಳಗೊಂಡ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಹುತೇಕ ಹೆಚ್ಚಾಗಿರುವ ಬಂಜಾರಾ ಜನರ ಪರಿಸ್ಥಿತಿ ಇನ್ನೂ ಹೀನಾಯ ಸ್ಥಿತಿಯಲ್ಲಿದೆ.
ಈ ಭಾಗದ ಬಂಜಾರ ಜನಾಂಗದ ಒಳತಿಗಾಗಿ ಕಲ್ಯಾಣ ಕರ್ನಾಟಕ ಭಾಗಕ್ಕೆ ಪ್ರತ್ಯೇಕ ಕರ್ನಾಟಕ ತಾಂಡಾ ನಿಗಮ ಸ್ಥಾಪಿಸಬೇಕು ಮತ್ತು ಈಗಾಗಲೇ ಇರುವ ತಾಂಡಾ ನಿಗಮಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.ಈ ಸಂದರ್ಭದಲ್ಲಿ ಯುವ ಘಟಕ ಜಿಲ್ಲಾಧ್ಯಕ್ಷ ರವಿ ಕೆ.ಮುದ್ನಾಳ, ರಾಮು ರಾಠೋಡ್, ಮೇಘನಾಥ ಚವ್ಹಾಣ, ಸುಭಾಷ್ ರಾಠೋಡ್, ಬಂಗಾರು, ರಾಠೋಡ, ಜಯರಾಮ ರಾಠೋಡ, ಶಂಕರ ರಾಠೋಡ, ಯಂಕಪ್ಪ ರಾಠೋಡ ವಡಗೇರಾ, ತಿರುಪತಿ ಚವ್ಹಾಣ, ವಿಜಯ ಜಾದವ್, ಗೋಪಾಲ ಚವ್ಹಾಣ, ಕಿಸನ್ ಗುರುಮಠಕಲ್, ಸರವರ್ ಚವ್ಹಾಣ, ಹಿರಾಸಿಂಗ್ ಪವಾರ್, ಕಾಶಿನಾಥ ರಾಠೋಡ, ಬಸವರಾಜ ಮುದ್ನಾಳ, ನಾಗಪ್ಪ ಬೆನಕಲ್, ಹಣಮಂತ ವಲ್ಯಾಪುರೆ, ರಾಜು ಮುಂಡರಗಿ, ಕಿಶನ್ ನಾಯಕ, ಮಿಥುನ ರಾಠೋಡ, ಸಂತೋಷ ಚಾಮನಳ್ಳಿ ಕಂಚೋಳ್ಳಿ ತಾಂಡಾ, ರಾಜು ಕಂಚಗಳ್ಳಿ ತಾಂಡಾ, ಮಹೊನ ಲಿಂಗೇರಿ ತಾಂಡಾ, ಗೌಬ್ಯರ್ಯಾ ನಾಯಕ , ಆನಂದ ಡಾಬಾ, ಆಟೋ ಚಾಲಕ ಜಿಲ್ಲಾಧ್ಯಕ್ಷ ಲಕ್ಷ್ಮಣ, ರಾಜು ನಾಯಕ ಮುಂಡರಗಿ ತಾಂಡಾ, ಸೋಮು, ಮೋಹನ ಸೌದಾಗರ ತಾಂಡಾ, ಉಮಾರ್ ಹೋರುಂಚಿ ತಾಂಡಾ, ಗೋವಿಂದ ವಡ್ನಳ್ಳಿ ತಾಂಡಾ, ಭೀಮಾ ಮುಂಡರಗಿ ತಾಂಡ, ಲಕ್ಷ್ಮಣ ಗಾಂದಿ ನಗರ ತಾಂಡಾ ಸೇರಿದಂತೆ ಸಮಾಜದ ಮುಖಂಡರು ಇದ್ದರು.
-------25ವೈಡಿಆರ್1: ಪರಿಶಿಷ್ಟ ಜಾತಿಗಳಲ್ಲಿ ಮೀಸಲಾತಿ ಜಾರಿಗೊಳಿಸಲು ನಡೆಸುತ್ತಿರುವುದು ಸರಿಯಲ್ಲ ಎಂದು ವಿರೋಧಿಸಿರುವ ಆಲ್ ಇಂಡಿಯಾ ಬಂಜಾರ ಸೇವಾ ಸಂಘವು, ಜಿಲ್ಲಾಧಿಕಾರಿ ಕಚೇರಿಯೆದುರು ಪ್ರತಿಭಟನೆ ನಡೆಸಿತು.