ಸಾರಾಂಶ
ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳುವವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಸವಣೂರು: ಶಿಗ್ಗಾಂವಿ ಸವಣೂರು ಕ್ಷೇತ್ರದಲ್ಲಿ ಆರಂಭವಾಗಿರುವ ಅಭಿವೃದ್ಧಿ ಕೆಲಸಗಳು ಪೂರ್ಣಗೊಳ್ಳುವವರೆಗೂ ವಿರಮಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ತಾಲೂಕಿನ ಹುರಳಿಕುಪ್ಪಿ, ಮೆಳ್ಳಾಗಟ್ಟಿ, ಮೆಳ್ಳಾಗಟ್ಡಿ ಪ್ಲಾಟ್, ತೋಂಡೂರ, ಹೊಸಳ್ಳಿ, ತಳ್ಳಿಹಳ್ಳಿ ಮತದಾರರಿಗೆ ಹಾಗೂ ಸಾರ್ವಜನಿಕರಿಗೆ ಏರ್ಪಡಿಸಿದ ಧನ್ಯವಾದ ಯಾತ್ರೆಯಲ್ಲಿ ಪಾಲ್ಗೊಂಡು ಜನರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು. ಈಗ ನನಗೆ ವಿಧಾನಸಭೆಯಲ್ಲಿ ಶಾಸಕನಾಗಿ ಅಧಿಕಾರ ಇಲ್ಲದಿದ್ದರೂ, ನೀವು ಕೊಟ್ಟಿರುವ ಶಕ್ತಿಯಿಂದ ನಾನು ಮೊದಲು ಯಾವ ರೀತಿಕೆಲಸ ಮಾಡುತ್ತಿದ್ದೆ ಅದೇ ರೀತಿ ನಿಮ್ಮ ಕೆಲಸವನ್ನು ಮಾಡುತ್ತೇನೆ. ನೀವು ಯಾವುದೇ ರೀತಿಯ ಚಿಂತೆ ಮಾಡಬೇಡಿ ಎಂದು ಭರವಸೆ ನೀಡಿದರು. ಹುರುಳಿಕುಪ್ಪೆ ಪಿಎಚ್‌ಸಿಗೆ ನಾನು ಅನುಮತಿ ನೀಡಿದ್ದು ಆರೋಗ್ಯ ಸಚಿವರಿಗೆ ವೈದ್ಯರನ್ನು ನೀಡಿ ಉದ್ಘಾಟನೆ ಮಾಡುವಂತೆ ಮನವಿ ಮಾಡಿದ್ದೇನೆ. ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಅಡಿ ಸುಮಾರು 30 ಕೋಟಿ ವೆಚ್ಚದ ಕಾಮಗಾರಿ ಈಗ ಆರಂಭವಾಗಲಿದೆ. ನಿರಂತರವಾಗಿ ನಡೆಯುವ ಅಭಿವೃದ್ಧಿ ಕಾರ್ಯಗಳು ನಿಲ್ಲಬಾರದು ಎಂದು ನಾನು ಮಂಜೂರಾತಿ ನೀಡಿದ್ದೇನೆ. ಅವು ಪೂರ್ಣಗೊಳ್ಳುವವರೆಗೂ ನಾನು ವಿರಮಿಸುವುದಿಲ್ಲ ಎಂದು ಹೇಳಿದರು.