80 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾದರೂ ಪರವಾಗಿಲ್ಲ. ಕಳಪೆ ಕಾಮಗಾರಿಗೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ ಮಂತರ್ ಗೌಡ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ : 80 ಲಕ್ಷ ರು. ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ. ಕ್ಷೇತ್ರದಲ್ಲಿ ನಡೆಯುವ ಕಾಮಗಾರಿ ಅನುಷ್ಠಾನದಲ್ಲಿ ವಿಳಂಬವಾದರೂ ಪರವಾಗಿಲ್ಲ. ಕಳಪೆ ಕಾಮಗಾರಿಗೆ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಎಂದು ಮಡಿಕೇರಿ ಶಾಸಕ ಡಾ ಮಂತರ್ ಗೌಡ ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಮಡಿಕೇರಿ ನಗರದ ಸಂಪಿಗೆ ಕಟ್ಟೆಯಿಂದ ಮಹದೇವ ಪೇಟೆಯ ಮೂಲಕ ನಗರದ ವಿವಿಧ ಭಾಗಗಳಿಗೆ ಸಂಪರ್ಕ ನೀಡುವ ರಸ್ತೆಯಲ್ಲಿ 80 ಲಕ್ಷ ರು. ವೆಚ್ಚದ ಕಾಂಕ್ರೀಟ್ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದ ಮಂತರ್ ಗೌಡ ಅವರು ಸಿದ್ದರಾಮಯ್ಯ ನವರು ಮುಖ್ಯಮಂತ್ರಿಯಾಗಿದ್ದಾಗ ನೀಡಿದ್ದ ಶಾಸಕರ ಕ್ಷೇತ್ರಾಭಿವೃದ್ದಿ ಅನುದಾನ 50 ಕೋಟಿ ರು. ಗಳಲ್ಲಿ 3.5 ಕೋಟಿ ರು. ಗಳನ್ನು ಮಡಿಕೇರಿ ನಗರದ ರಸ್ತೆ ಕಾಮಗಾರಿಗಳಿಗೆ ನೀಡಿದ್ದು ಮುಂದೆ ಈಗಿನ ಮುಖ್ಯಮಂತ್ರಿಗಳಾದ ಡಿ.ಕೆ.ಶಿವಕುಮಾರ್ ಅವರು ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದ್ದು ,ಅದರಲ್ಲಿ ಮಡಿಕೇರಿ ನಗರದ ರಸ್ತೆ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುವುದಾಗಿ ಭರವಸೆ ನೀಡಿದರು.ಗುಣಮಟ್ಟದ ಕಾಮಗಾರಿ ನಡೆಸದಿದ್ದರೆ ಬಿಲ್ ಪಾವತಿ ತಡೆ ಹಿಡಿಯಲಾಗುವುದು ಎಂದು ತಿಳಿಸಿದರು. ಸ್ಥಳೀಯರು ಕಾಮಗಾರಿ ನಡೆಯುವಾಗ ವೀಕ್ಷಣೆ ಮಾಡಬೇಕು ಎಂದು ಮನವಿ ಮಾಡಿದರು.ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷರಾದ ತೆನ್ನಿರ ಮೈನಾ ಮಾತನಾಡಿ ಮಡಿಕೇರಿ ನಗರಕ್ಕೆ ಸೋಮವಾರಪೇಟೆ, ಹಾಸನ ಭಾಗದಿಂದ ಬರುವ ವಾಹನಗಳು ಬಳಕೆ ಮಾಡುವ ಈ ರಸ್ತೆ ಅನೇಕ ವರ್ಷಗಳಿಂದ ದುರಸ್ತಿಯಾಗದೇ ಇದ್ದು ರಸ್ತೆ ಪ್ರತಿಯೊಬ್ಬ ನಾಗರಿಕರು ಕೂಡ ದುರಸ್ತಿಯ ಬಯಕೆ ಹೊಂದಿದ್ದರು. ಜನರ ಆಶಯಗಳಿಗೆ ಪೂರಕವಾಗಿ ಶಾಸಕರು ಅನುದಾನ ಒದಗಿಸಿದ್ದು ಇದಕ್ಕಾಗಿ ಮಡಿಕೇರಿ ನಗರ ಮತ್ತು ಜಿಲ್ಲೆಯ ಸಮಸ್ತ ನಾಗರಿಕರ ಪರವಾಗಿ ಧನ್ಯವಾದಗಳನ್ನು ಡಾ ಮಂತರ್ ಗೌಡ ಅವರಿಗೆ ಅರ್ಪಿಸುವುದಾಗಿ ಹೇಳಿದರು.ಮಡಿಕೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಜೇಶ್ ಯಲ್ಲಪ್ಪ, ನಗರ ಸಭೆ ಅಧ್ಯಕ್ಷರಾದ ಕಲಾವತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಎ.ಹಂಸ, ನಗರ ಕಾಂಗ್ರೆಸ್ ಅಧ್ಯಕ್ಷರಾದ ಪ್ರಕಾಶ್ ಆಚಾರ್ಯ, ನಗರ ಸಭೆ ಇಂಜಿನಿಯರ್ ಹೇಮಂತ್, ಓಂಕಾರೇಶ್ವರ ದೇವಾಲಯ ಸಮಿತಿ ಅಧ್ಯಕ್ಷರಾದ ಚುಮ್ಮಿದೇವಯ್ಯ, ನಗರ ಸಭಾ ಸದಸ್ಯರಾದ ಕೆ.ಎಸ್.ರಮೇಶ್, ಅಪ್ಪಣ್ಣ, ಅರುಣ್ ಶೆಟ್ಟಿ, ಎಸ್.ಸಿ.ಸತೀಶ್, ಮನ್ಸೂರ್, ಸವಿತಾ ರಾಕೇಶ್, ಸಬಿತಾ, ಜಿ.ಸಿ.ಜಗದೀಶ್, ಮುದ್ದುರಾಜ್, ಪ್ರಚಾರ ಸಮಿತಿ ಅಧ್ಯಕ್ಷರಾದ ವಿ.ಜಿ.ಮೋಹನ್, ಕೆ.ಪಿ.ಸಿ.ಸಿ ಸದಸ್ಯ ಯಾಕುಬ್, ಕೋಚನ ಹರಿಪ್ರಸಾದ್, ವಸಂತ್ ಭಟ್, ಕವನ್ ಕೊತ್ತೋಳಿ, ಕಾಲೀದ್ ಹಾಕತ್ತೂರು, ಶರಣ್, ಕೆ.ಜೆ.ಪೀಟರ್, ರವೂಫ್, ಮುನೀರ್ ಮಾಚರ್, ರಿಯಾಸುದ್ದೀನ್, ಸುಬ್ರಮಣಿ ಮತ್ತಿತರರಿದ್ದರು.