ಸಾರಾಂಶ
ಬಾದಾಮಿ: ಕಳೆದ ನಾಲ್ಕು ಬಾರಿ ಸಂಸದರಾಗಿರುವ ಪಿ.ಸಿ.ಗದ್ದಿಗೌಡರ 20 ವರ್ಷಗಳ ಕಾಲ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಿಲ್ಲ. ಸಂಸದರ ಕೊಡುಗೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ನಾಗರಾಜ ಎಸ್.ಮನ್ನಿಕೇರಿ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಬಾದಾಮಿಕಳೆದ ನಾಲ್ಕು ಬಾರಿ ಸಂಸದರಾಗಿರುವ ಪಿ.ಸಿ.ಗದ್ದಿಗೌಡರ 20 ವರ್ಷಗಳ ಕಾಲ ಕ್ಷೇತ್ರಕ್ಕೆ ಯಾವುದೇ ಕೆಲಸ ಮಾಡಿಲ್ಲ. ಸಂಸದರ ಕೊಡುಗೆ ಶೂನ್ಯ ಎಂದು ಜಿಲ್ಲಾ ಕಾಂಗ್ರೆಸ್ ಎಸ್ಸಿ ಘಟಕದ ಅಧ್ಯಕ್ಷ ನಾಗರಾಜ ಎಸ್.ಮನ್ನಿಕೇರಿ ಆರೋಪಿಸಿದರು.
ನಗರದ ಕಾನಿಪ ಭವನದಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅವರು ಕ್ಷೇತ್ರದ ಪರ ಸದನದಲ್ಲಿ ಧ್ವನಿ ಎತ್ತಿಲ್ಲ. ಜನರ, ಕಾರ್ಮಿಕರ, ರೈತರ ಬಳಿ ಹೋಗಿ ಸಮಸ್ಯೆ ಕೇಳಿಲ್ಲ. ಜನರ ಪರಿಸ್ಥಿತಿ ಆಲಿಸಿಲ್ಲ. ದಲಿತರು, ಎಸ್ಸಿಗಳಿಗೆ ಸೌಲಭ್ಯಗಳನ್ನು ಬಂದ್ ಮಾಡಿರಿ ಎಂದು ಅಣ್ಣಾಸಾಹೇಬ ಜೊಲ್ಲೆ, ಸಿ.ಪಿ.ಯೋಗೇಶ್ವರ ಪತ್ರ ಬರೆದರು. ಬಿಜೆಪಿ ಸರ್ಕಾರ ಎಸ್ಸಿ,ಎಸ್ಟಿ ವಿದ್ಯಾರ್ಥಿ ವೇತನ, ಸಬ್ಸಿಡಿ ಬಂದ್ ಮಾಡಿದರು. ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದ್ದರೂ ಕೇಂದ್ರದ ಯೋಜನೆಗಳನ್ನು ಬಾದಾಮಿ ತಾಲೂಕು ಮತ್ತು ಬಾಗಲಕೋಟೆ ಜಿಲ್ಲೆಗೆ ತರಬಹುದಾಗಿತ್ತು. ಆದರೂ, ಏನೂ ತಂದಿಲ್ಲ. ಬಿಜೆಪಿ ಪ್ರಣಾಳಿಕೆಯಲ್ಲಿ ಶೇ.75 ರಷ್ಟು ಸುಳ್ಳುಗಳಿವೆ ಎಂದು ದೂರಿದರು.ಕೇಂದ್ರದ ವಿರುದ್ಧ ರೈತರು ಪ್ರತಿಭಟನೆ ಮಾಡಿದರೆ ಅದನ್ನು ಹತ್ತಿಕ್ಕಿದರು. ಬಾಗಲಕೋಟೆಗೆ ಯಾವುದೇ ಕೈಗಾರಿಕೆ ತಂದಿಲ್ಲ. ಕುಡಚಿ ರೈಲ್ವೆ ಯೋಜನೆ ಅನುಷ್ಠಾನದಲ್ಲಿ ಸಂಸದರ ಕೊಡುಗೆ ಏನೂ ಇಲ್ಲ. ಪ್ರಧಾನಿ ಮೋದಿ ಪದೇ ಪದೇ ಚುನಾವಣೆ ಪ್ರಚಾರಕ್ಕೆ ರಾಜ್ಯಕ್ಕೆ ಬರ್ತಾರೆ. ರಾಜ್ಯಕ್ಕೆ ಬರಬೇಕಾದ ತೆರಿಗೆ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡ ವೈ.ವೈ.ತಿಮ್ಮಾಪೂರ ಮಾತನಾಡಿ, ಕಾಂಗ್ರೆಸ್ ಐದು ಗ್ಯಾರಂಟಿ ಯೋಜನೆ ಜಾರಿ ಮಾಡಿದೆ. ಅದರಂತೆ ಲೋಕಸಭಾ ಚುನಾವಣೆ ಸಂಬಂಧ ಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಯುವ ನ್ಯಾಯ, ಮಹಿಳಾ ನ್ಯಾಯ, ರೈತ ನ್ಯಾಯ, ಶ್ರಮಿಕ ನ್ಯಾಯ, ಪಾಲುದಾರಿಕೆ ನ್ಯಾಯ ಗ್ಯಾರಂಟಿಗಳನ್ನು ಕೇಂದ್ರದಲ್ಲಿ ಇಂಡಿಯಾ ಮೈತ್ರಿ ಕೂಟ ಸರ್ಕಾರ ಅಧಿಕಾರಕ್ಕೆ ಬಂದರೆ ಜಾರಿ ಮಾಡಲಾಗುತ್ತದೆ ಎಂದರು.ಎಸ್ಸಿ ಘಟಕದ ಅಧ್ಯಕ್ಷ ಚಂದ್ರಕಾಂತ ಯಾವಗಲ್, ತಾಲೂಕ ಕಾಂಗ್ರೆಸ್ ಕಾರ್ಯಾಧ್ಯಕ್ಷ ಪ್ರವೀಣಕುಮಾರ ಜ್ಯೋತಿ, ಮುಖಂಡರಾದ ಶಿವಾನಂದ ಕೊಪ್ಪದ, ಹನಮಂತ ಕಾತರಕಿ, ಜಮೀರ ಗಲಿಗಲಿ, ದಾದಾಪೀರ ವನಹಳ್ಳಿ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))