ರಾಣಿಬೆನ್ನೂರು ನಗರಸಭೆ ವಾರ್ಡ್ 22ರ ಚುನಾವಣೆಗೆ 6 ಜನರಿಂದ ನಾಮಪತ್ರ ಸಲ್ಲಿಕೆ

| Published : Dec 16 2023, 02:00 AM IST

ರಾಣಿಬೆನ್ನೂರು ನಗರಸಭೆ ವಾರ್ಡ್ 22ರ ಚುನಾವಣೆಗೆ 6 ಜನರಿಂದ ನಾಮಪತ್ರ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ರಾಣಿಬೆನ್ನೂರು ನಗರದ ವಾರ್ಡ್ ನಂ. 22ರ ತೆರವಾದ ಸ್ಥಾನಕ್ಕೆ ಡಿ. 27ರಂದು ಚುನಾವಣೆ ನಡೆಯಲಿದ್ದು, ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಡಿ. 15ರಂದು ಆರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಈ ವಾರ್ಡ್‌ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ನಡುವ ತುರುಸಿನ ಸ್ಪರ್ಧೆ ಏರ್ಪಡಿಸುವ ಸಾಧ್ಯತೆ ಇದೆ. ಈ ಹಿಂದೆ ಈ ಕ್ಷೇತ್ರ ಪ್ರತಿನಿಧಿಸಿದ್ದ ಬಿಜೆಪಿ ಸದಸ್ಯೆ ಉಷಾ ಚಿನ್ನಿಕಟ್ಟಿ ನಿಧನರಾಗಿದ್ದಾರೆ.

ರಾಣಿಬೆನ್ನೂರು: ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ (ಹಿಂದುಳಿದ ಪ್ರವರ್ಗ 2ಎ ಮಹಿಳೆ ಮೀಸಲು) ಡಿ. 27ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಶುಕ್ರವಾರ 6 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.

ನಾಮಪತ್ರ ಸಲ್ಲಿಸಿದವರ ವಿವರ: ತ್ರಿವೇಣಿ ನಾರಾಯಣಸಾ ಪವಾರ (ಬಿಜೆಪಿ), ಸುರೇಖಾ ಅಣ್ಣಪ್ಪ ಕಂಬಳಿ, ಸುಧಾ ರಾಜು ಗೊಂದಕರ (ಕಾಂಗ್ರೆಸ್), ಸಂಗೀತಾ ಅಶೋಕ ಮಡಿವಾಳರ (ಜೆಡಿಎಸ್), ರೇಖಾ ಯುವರಾಜ ಬಾರಾಟಕ್ಕೆ, ಕವಿತಾ ಶ್ರೀನಿವಾಸ ಹುಟ್ಟಿ (ಪಕ್ಷೇತರ).

ಮೆರವಣಿಗೆಯಲ್ಲಿ ಆಗಮಿಸಿ ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ: ಸ್ಥಳೀಯ ನಗರಸಭೆ ವಾರ್ಡ್ 22ಕ್ಕೆ ಡಿ. 27ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿ ತ್ರಿವೇಣಿ ಪವಾರ ಶುಕ್ರವಾರ ಮೆರವಣಿಗೆ ಮೂಲಕ ತಾಲೂಕು ಆಡಳಿತ ಸೌಧಕ್ಕೆ ತೆರಳಿ ತಮ್ಮ ನಾಮಪತ್ರ ಸಲ್ಲಿಸಿದರು.ನಗರದ ಸ್ಟೇಷನ್ ರಸ್ತೆಯ ಬಿಜೆಪಿ ಕಚೇರಿಯಿಂದ ದ್ವಿಚಕ್ರ ವಾಹನಗಳ ಮೂಲಕ ಮೆರವಣಿಗೆಯಲ್ಲಿ ಹೊರಟು ಎಂ.ಜಿ. ರಸ್ತೆ, ದುರ್ಗಾ ಸರ್ಕಲ್, ಕುರುಬಗೇರಿ ಕ್ರಾಸ್, ಹಳೆ ಪಿ.ಬಿ. ರಸ್ತೆ ಮಾರ್ಗವಾಗಿ ತಾಲೂಕು ಆಡಳಿತ ಸೌಧಕ್ಕೆ ಬಂದು ಸೇರಿದರು.ಪಕ್ಷದ ಜಿಲ್ಲಾಧ್ಯಕ್ಷ ಸಿದ್ಧರಾಜ ಕಲಕೋಟಿ, ಮಾಜಿ ಶಾಸಕ ಅರುಣಕುಮಾರ ಪೂಜಾರ, ನಗರ ಘಟಕದ ಅಧ್ಯಕ್ಷ ದೀಪಕ ಹರಪನಹಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷ ಬಸವರಾಜ ಕೇಲಗಾರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರೂಪಾ ಬಾಕಳೆ, ಯುವ ಘಟಕದ ಜಿಲ್ಲಾಧ್ಯಕ್ಷ ಪವನಕುಮಾರ ಮಲ್ಲಾಡದ, ವಾಕರಸಾ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಬಸವರಾಜ ಕೇಲಗಾರ, ಅರಣ್ಯ ಕೈಗಾರಿಕೆ ನಿಗಮದ ಮಾಜಿ ಸದಸ್ಯೆ ಭಾರತಿ ಜಂಬಗಿ, ಎಸ್.ಎಸ್. ರಾಮಲಿಂಗಣ್ಣನವರ, ಕೆ. ಶಿವಲಿಂಗಪ್ಪ, ಜಿ.ಜಿ. ಹೊಟ್ಟಿಗೌಡ್ರ, ಎ.ಬಿ. ಪಾಟೀಲ, ಬಸವರಾಜ ಪಾಟೀಲ, ಪರಮೇಶ ಗೂಳಣ್ಣನವರ, ನಾರಾಯಣಸಾ ಪವಾರ, ಸೋಮಣ್ಣ ಗೌಡಶಿವಣ್ಣನವರ, ಮೃತ್ಯುಂಜಯ ಪಾಟೀಲ, ರಮೇಶ ಗುತ್ತಲ, ಅನಿಲ ಸಿದ್ದಾಳಿ, ಚೋಳಪ್ಪ ಕಸವಾಳ, ಗೀತಾ ಜಂಬಗಿ, ಪಕ್ಷದ ನಗರಸಭಾ ಸದಸ್ಯರು, ಪದಾಧಿಕಾರಿಗಳು, ಕಾರ್ಯಕರ್ತರು ಮೆರವಣಿಗೆಯಲ್ಲಿದ್ದರು.