ಹಾರೋಹಳ್ಳಿ ಕಸಾಯಿಖಾನೆ ವಿರುದ್ಧ ಪಕ್ಷಾತೀತ ಹೋರಾಟ

| Published : Oct 15 2023, 12:45 AM IST

ಹಾರೋಹಳ್ಳಿ ಕಸಾಯಿಖಾನೆ ವಿರುದ್ಧ ಪಕ್ಷಾತೀತ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಕನಕಪುರ: ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಇರುವ ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಸ್ಥಾಪಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹಾರೋಹಳ್ಳಿ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಗೌಡ ಎಚ್ಚರಿಕೆ ನೀಡಿದರು.
ಕನಕಪುರ: ಏಷ್ಯಾ ಖಂಡದಲ್ಲಿ ಎರಡನೇ ಅತಿ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆ ಇರುವ ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಸ್ಥಾಪಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಹಾರೋಹಳ್ಳಿ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಗೌಡ ಎಚ್ಚರಿಕೆ ನೀಡಿದರು. ಹಾರೋಹಳ್ಳಿ ಹಿತ ರಕ್ಷಣಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಕೂಗಳತೆ ದೂರದಲ್ಲಿರುವ ಹಾರೋಹಳ್ಳಿ ಕೈಗಾರಿಕಾ ಕ್ಷೇತ್ರ ಬೃಹದಾಕಾರವಾಗಿ ಬೆಳೆಯುತ್ತದೆ. ಇಲ್ಲಿ ಬಿಬಿಎಂಪಿ ಕಸಾಯಿಖಾನೆ ಸ್ಥಾಪಿಸಲು ಸಿದ್ಧತೆ ನಡೆಸಿದೆ. ಇಲ್ಲಿ ಕಸಾಯಿಖಾನೆ ಸ್ಥಾಪನೆಯಾದರೆ ಮುಂದೊಂದು ದಿನ ತಾಲೂಕಿನ ಜನರಿಗೆ ಹಾಗೂ ತಾಲೂಕಿನ ಅಭಿವೃದ್ಧಿಗೆ ಅದು ಶಾಪವಾಗಿ ಪರಿಣಮಿಸಲಿದೆ. ಜಲಮೂಲ ಮಲಿನವಾಗಲಿದೆ, ಕಸಾಯಿ ಖಾನೆ ಎಂಬ ಅನಿಷ್ಠ ಇಲ್ಲಿ ಸ್ಥಾಪನೆ ಮಾಡಲು ಬಿಡಬಾರದು. ಹಾಗಾಗಿ ಪಕ್ಷಾತೀತವಾಗಿ ಪ್ರತಿಯೊಬ್ಬರೂ ಇದರ ವಿರುದ್ಧ ಧ್ವನಿ ಎತ್ತುವಂತೆ ಮನವಿ ಮಾಡಿದರು. ಮುಖಂಡ ಮಲ್ಲಪ್ಪ, ನಾಗರಾಜು ಮಾತನಾಡಿ, ಕಸಾಯಿ ಖಾನೆ ವಿರುದ್ಧ ನಮ್ಮ ಹೋರಾಟ ಹೊಸದೇನಲ್ಲ. ಈ ಹಿಂದೆಯೂ ಬಿಬಿಎಂಪಿಯಿಂದ ಹಾರೋಹಳ್ಳಿಯಲ್ಲಿ ಕಸಾಯಿ ಖಾನೆ ನಿರ್ಮಾಣ ಮಾಡಲು ಹೊರಟಿದ್ದರು. ಅದರ ವಿರುದ್ಧ ಹೋರಾಟ ಮಾಡಿದ ಪರಿಣಾಮ ನಮ್ಮಗಳ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಇಂದಿಗೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದೇವೆ. ಈ ಮೊದಲು ದೇವನಹಳ್ಳಿಯಲ್ಲಿ ನಿರ್ಮಿಸಲು ಹೊರಟಿದ್ದರು. ಅಲ್ಲಿ ವಿರೋಧ ವ್ಯಕ್ತವಾಯಿತು. ಆನಂತರ ಆನೇಕಲ್, ಚನ್ನಪಟ್ಟಣ ತಾಲೂಕಿನಲ್ಲಿ ಭಾರಿ ವಿರೋಧ ವ್ಯಕ್ತವಾದ ನಂತರ ಹಾರೋಹಳ್ಳಿಗೆ ಸ್ಥಳಾಂತರ ಮಾಡಿದ್ದು ಅಂದು ಪಕ್ಷಾತೀತ ವಾಗಿ ಒಂದು ಸಮಿತಿ ರಚಿಸಿಕೊಂಡು ಹೋರಾಟ ಮಾಡಿ ಹಾರೋಹಳ್ಳಿಯನ್ನು ಬಂದ್ ಮಾಡಿ ಬೃಹತ್ ಪ್ರತಿಭಟನೆ ಮಾಡಿದ ಪರಿಣಾಮ ಕಸಾಯಿಖಾನೆ ನಿಮಿ್ಸಲು ಯೋಜನೆ ಕೈ ಬಿಟ್ಟಿದ್ದರು, ಈಗ ಹೋರಾಟ ಮತ್ತೊಮ್ಮೆ ಆಗಬೇಕಿದೆ ಎಂದರು. ನಿರ್ಜನ ಪ್ರದೇಶದಲ್ಲಿ ಕಸಾಯಿ ಖಾನೆ ನಿರ್ಮಾಣ ಮಾಡಬೇಕು ಎಂಬ ಮಾನದಂಡಗಳಿದ್ದರೂ ಅದನ್ನು ಉಲ್ಲಂಘಿಸಿ ಬೆಳೆಯುತ್ತಿರುವ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಸಾಯಿಖಾನೆ ನಿರ್ಮಾಣ ಮಾಡಲು ಹೊರಟಿರುವುದು ಸರಿಯಲ್ಲ ಇಲ್ಲಿ ಕಸಾಯಿ ಖಾನೆ ನಿರ್ಮಾಣವಾದರೆ ಪ್ರತಿನಿತ್ಯ ಸಾವಿರಾರು ಪ್ರಾಣಿಗಳನ್ನು ಒದೆ ಮಾಡಿ ಜನಸಾಮಾನ್ಯರು ವಾಸಿಸಲು ಯೋಗ್ಯ ವಲ್ಲದ ವಾತಾವರಣ ನಿರ್ಮಾಣವಾಗಲಿದೆ. ಸ್ವಾನಗಳ ಉಪಟಳ ಹೆಚ್ಚಾಗಲಿದೆ. ಇದರಿಂದ ಜನರ ನೆಮ್ಮದಿಗೆ ಧಕ್ಕೆಯಾಗಲಿದೆ ಅದಕ್ಕೆ ನಾವು ಅವಕಾಶ ಕೊಡುವುದಿಲ್ಲ ಎಂದರು. ನಾವು ಯಾವುದೇ ಧರ್ಮ ಮತ್ತು ಮಾಂಸಾಹಾರಿಗಳ ವಿರೋಧಿಗಳಲ್ಲ ಕಸಾಯಿ ಖಾನೆಯಿಂದ ಇಲ್ಲಿನಮಾಂಸದ ವ್ಯಾಪಾರಿಗಳ ವ್ಯಾಪಾರಕ್ಕೂ ತೊಂದರೆ ಆಗಿರುವುದರಿಂದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ,ಹಾಗೂ ಸಂಸದರು, ಶಾಸಕರು ವಿರೋಧ ಪಕ್ಷದ ನಾಯಕರು ಮಾಜಿ ಶಾಸಕರು ಬಿಬಿಎಂಪಿ ಆಡಳಿತ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳಿಗೆ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿ ಗಡುವು ನೀಡಿ ಸ್ಥಳಾಂತರ ಮಾಡದಿದ್ದರೆ ಉಗ್ರ ಹೋರಾಟ ಅನಿವಾರ್ಯವಾಗಲಿದೆ ಈ ಹಿಂದೆ ಹೋರಾಟಕ್ಕೆ ಬೆಂಬಲ ಕೊಟ್ಟಂತೆ ತಾಲೂಕಿನ ಜನರು, ವ್ಯಾಪಾರಿಗಳು ಪಕ್ಷಾತೀತವಾಗಿ ಈ ಹೋರಾಟಕ್ಕೆ ಬೆಂಬಲ ಕೊಡಬೇಕು ಎಂದು ಮನವಿ ಮಾಡಿದರು. ಕೆ ಕೆ ಪಿ ಸುದ್ದಿ 01: ಹಾರೋಹಳ್ಳಿ ಖಾಸಾಯಿಖಾನೆ ವಿರುದ್ಧ ಪಕ್ಷಾತೀತವಾಗಿ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಹಾರೋಹಳ್ಳಿ ನಾಗರಿಕರ ಹಿತರಕ್ಷಣಾ ಸಮಿತಿ ಅಧ್ಯಕ್ಷ ಗೌತಮ್ ಗೌಡ ಮನವಿ ಮಾಡಿದರು.