ಒಳ ಮೀಸಲಾತಿಜಾರಿಗೆ ಪಕ್ಷಾತೀತ ಹೋರಾಟ ಅಗತ್ಯ

| Published : Apr 08 2025, 12:32 AM IST

ಸಾರಾಂಶ

ಒಳ ಮೀಸಲಾತಿಜಾರಿಯಾದರೆ ನಮ್ಮ ಮುಂದಿನ ಪೀಳಿಗೆಯವರು ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಲಾಭ ಪಡೆಯಲು ಸಾಧ್ಯವಾಗುತ್ತದೆಂದರು.

ರಾಯಬಾಗ: ಒಳ ಮೀಸಲಾತಿಜಾರಿಗಾಗಿ ಸಮುದಾಯದ ಎಲ್ಲ ಮುಖಂಡರು ಒಂದಾಗಿ ಪಕ್ಷಾತೀತ, ಜಾತ್ಯಾತೀತವಾಗಿ ಹೋರಾಟ ಮಾಡಲು ಕೈಜೋಡಿಸಬೇಕೆಂದು ಶಾಸಕ ಡಿ.ಎಂ.ಐಹೊಳೆ ಕರೆ ನೀಡಿದರು.

ಪಟ್ಟಣದ ಬಾಬು ಜಗಜೀವನರಾಂ ಭವನದಲ್ಲಿ ಸಮಾಜಕಲ್ಯಾಣ ಇಲಾಖೆ ಮತ್ತು ತಾಲೂಕು ಆಡಳಿತದಿಂದ ನಡೆದ ಡಾ.ಬಾಬು ಜಗಜೀವನರಾಂ 118ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಳ ಮೀಸಲಾತಿಜಾರಿಯಾದರೆ ನಮ್ಮ ಮುಂದಿನ ಪೀಳಿಗೆಯವರು ರಾಜಕೀಯ, ಆರ್ಥಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಲಾಭ ಪಡೆಯಲು ಸಾಧ್ಯವಾಗುತ್ತದೆಂದರು. ಪಟ್ಟಣದಲ್ಲಿ ಸುಸಜ್ಜಿತವಾಗಿ ಬಾಬು ಜಗಜೀವನರಾಂ ಭವನ ನಿರ್ಮಿಸಿದ್ದು, ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಬೇಕೆಂದರು. ಉಪನ್ಯಾಸಕರಾಗಿ ಆಗಮಿಸಿದ್ದ ಶಿಕ್ಷಕ ವೀರಣ್ಣಾ ಮಡಿವಾಳರ ಡಾ.ಬಾಬು ಜಗಜೀವನರಾಂ ಜೀವನ ಕುರಿತು ಮತ್ತು ಒಳ ಮೀಸಲಾತಿ ಹೋರಾಟದ ಬಗ್ಗೆ ವಿಸೃತ್ತವಾಗಿ ಮಾತನಾಡಿದರು. ತಹಸೀಲ್ದಾರ್‌ ಎಸ್.ಆರ್.ಮುಂಜೆ, ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿ.ಎಸ್.ಚಂದರಗಿ, ರಾಮಣ್ಣ ಮಹಾರಾಜರು, ಹಿರಿಯ ನಟಿ ಡಾ.ಪಂಕಜಾ, ತಾಲೂಕಾ ಅಧಿಕಾರಿಗಳಾದ ಡಾ.ಎಸ್.ಎಮ್.ಪಾಟೀಲ, ಶಿವಕುಮಾರ ಡಿ., ವಿನೋದ ಮಾವರಕರ, ಬಸವರಾಜಪ್ಪಆರ್., ಪರಮಾನಂದ ಮಂಗಸೂಳಿ, ಕಲ್ಪನಾ ಕಾಂಬಳೆ, ಭಾರತಿ ಕಾಂಬಳೆ, ಸುಭಾಷ ಭಜಂತ್ರಿ, ವಾಯ್.ಎಸ್.ಸನಮಾನಿ ಹಾಗೂ ಮುಖಂಡರಾದ ಬಸವರಾಜ ಸನದಿ, ರಾಜು ಮೈಶಾಳೆ, ಸುರೇಶ ಐಹೊಳೆ, ಮಹಾವೀರ ಐಹೊಳೆ, ಲಕ್ಕಪ್ಪ ಪೂಜಾರಿ, ಮಹಾಂತೇಶ ಐಹೊಳೆ, ಮಹೇಶ ಕರಮಡಿ ಸೇರಿದಂತೆಅನೇಕರುಇದ್ದರು. ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ವಿಠಲ ಚಂದರಗಿ ಸ್ವಾಗತಿಸಿದರು, ಶಿಕ್ಷಕ ಬಿ.ಎಲ್.ಘಂಟಿ ನಿರೂಪಿಸಿದರು.