ಪಕ್ಷೇತರ ಅಭ್ಯರ್ಥಿಗಳೇ ಕ್ರಿಯಾಶೀಲರು

| Published : May 25 2024, 12:54 AM IST / Updated: May 25 2024, 12:55 AM IST

ಸಾರಾಂಶ

ದಾಬಸ್‌ಪೇಟೆ: ಬೆಂಗಳೂರು ಪದವೀಧರ ಕ್ಷೇತ್ರದ ಹಿಂದಿನ ಚುನಾವಣೆಯಲ್ಲಿ ಗೆದ್ದು ಮನೆ ಸೇರಿದ ಬಿಜೆಪಿಯ ಅ.ದೇವೇಗೌಡರು, ಚುನಾವಣೆ ಘೋಷಣೆ ಬಳಿಕ ಕ್ಷೇತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ಗಿಫ್ಟ್ ಹಂಚುವುದರಲ್ಲಿ ನಿರತರಾಗಿದ್ದಾರೆ. ನಾನು ಮತದಾರರ ಬಳಿಗೆ ತೆರಳಿದ್ದೇನೆ ಎಂದು ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ವಿರೋಧಿ ಅಭ್ಯರ್ಥಿಗಳನ್ನು ಲೇವಡಿ ಮಾಡಿ, ತಮ್ಮ ಉಮೇದುವಾರಿಕೆಯನ್ನು ಸಮರ್ಥಿಸಿಕೊಂಡರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಪದವೀಧರ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳು ಆಮಿಷಗಳಗಳನ್ನೊಡ್ಡಿ ಮತ ಪಡೆದು ವಿಧಾನ ಪರಿಷತ್‌ ಪ್ರವೇಶಿಸುವ ತವಕದಲ್ಲಿದ್ದಾರೆ. ಆದರೆ ಪಕ್ಷೇತರ ಅಭ್ಯರ್ಥಿಯಾದ ನಾನು ಪದವೀಧರರ ಸಂಕಷ್ಟಗಳಿಗೆ ಸದಾ ಸ್ಪಂದಿಸುತ್ತಿದ್ದು, ಈ ಬಾರಿ ನನ್ನ ಆಯ್ಕೆ ಶತಸಿದ್ಧ. ನಾನು ಗೆದ್ದು ಮಲಗಿದ್ದೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಆಂಜಿನಪ್ಪ ಹಾಗೂ ಪವಾಡ ಭಂಜಕ, ಚಿಂತಕ ಹುಲಿಕಲ್ ನಟರಾಜು ನನ್ನ ಪರ ಮತಪ್ರಚಾರ ನಡೆಸುತ್ತಿರುವುದು, ಕಾರ್ಯಕರ್ತರಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದರು.

ನನ್ನ ವಿರೋಧಿ ಅಭ್ಯರ್ಥಿಗಳು ಗಿಫ್ಟ್ ನೀಡಿ ಪದವೀಧರರ ನೈತಿಕತೆ ಕೆಣಕಿದ್ದಾರೆ. ಎರಡು ರಾಷ್ಟ್ರೀಯ ಪಕ್ಷಗಳು ಕಳೆದ ಎರಡು ದಶಕಗಳಿಂದ ಪದವೀಧರರ ಸಮಸ್ಯೆಗೆ ಸ್ಪಂದಿಸಿಲ್ಲ, ಪದವೀಧರರಿಗೆ ಗುಂಡು-ತುಂಡು ಸಂಸ್ಕೃತಿ ಪರಿಚಯಿಸುತ್ತಿರುವವರಿಗೆ ಮತದಾರರು ತಕ್ಕ ಬುದ್ಧಿ ಕಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತ ನೀರುಗಲ್ಲು ಶಿವಕುಮಾರ್, ಸ್ಪರ್ಧಾ ಚೇತನ ಅಕಾಡೆಮಿಯ ಆನಂದ್, ಮಾಜಿ ಸೈನಿಕ ಭೀಮಲೇಶ್ ಮತ್ತಿತರರಿದ್ದರು. ಪೋಟೋ 7 :

ದಾಬಸ್‌ಪೇಟೆಯಲ್ಲಿ ಬೆಂಗಳೂರು ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಆರ್.ಎಸ್. ಉದಯ್ ಸಿಂಗ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.