ನಿಲ್ಲದ ಸಾರಿಗೆ ಬಸ್‌: ಆಟೋ ಏರಿದ ಶಾಲೆ ಮಕ್ಕಳು!

| Published : May 30 2024, 12:50 AM IST

ನಿಲ್ಲದ ಸಾರಿಗೆ ಬಸ್‌: ಆಟೋ ಏರಿದ ಶಾಲೆ ಮಕ್ಕಳು!
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಶಿಂಡನಪುರ ಗೇಟ್‌ (ಗುಂಡ್ಲುಪೇಟೆ-ಚಾಮರಾಜನಗರ ಜಿಲ್ಲಾ ರಸ್ತೆ) ನಲ್ಲಿ ಸಾರಿಗೆ ಬಸ್‌ಗಳು ನಿಲ್ಲಿಸದೆ ತೆರಳುವ ಕಾರಣ ವಿದ್ಯಾರ್ಥಿಗಳು ಆಟೋದಲ್ಲಿ ಶಾಲಾ, ಕಾಲೇಜಿಗೆ ತೆರುಳುತ್ತಿರುವ ಪ್ರಸಂಗ ಬುಧವಾರ ಬೆಳಗ್ಗೆ ನಡೆದಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆತಾಲೂಕಿನ ಶಿಂಡನಪುರ ಗೇಟ್‌ (ಗುಂಡ್ಲುಪೇಟೆ-ಚಾಮರಾಜನಗರ ಜಿಲ್ಲಾ ರಸ್ತೆ) ನಲ್ಲಿ ಸಾರಿಗೆ ಬಸ್‌ಗಳು ನಿಲ್ಲಿಸದೆ ತೆರಳುವ ಕಾರಣ ವಿದ್ಯಾರ್ಥಿಗಳು ಆಟೋದಲ್ಲಿ ಶಾಲಾ, ಕಾಲೇಜಿಗೆ ತೆರುಳುತ್ತಿರುವ ಪ್ರಸಂಗ ಬುಧವಾರ ಬೆಳಗ್ಗೆ ನಡೆದಿದೆ.

ಚಾಮರಾಜನಗರ-ಗುಂಡ್ಲುಪೇಟೆ ಜಿಲ್ಲಾ ರಸ್ತೆಯಲ್ಲಿ ಬುಧವಾರ ಬೆಳಗ್ಗೆ ಸಂಚರಿಸುತ್ತಿದ್ದ ಎಕ್ಸ್‌ಪ್ರೆಸ್‌ ಬಸ್‌ ಶಿಂಡನಪುರ ಗೇಟ್‌ ಬಳಿ ನಿಲ್ಲಿಸದೆ ಹಾಗೂ ಸಾರಿಗೆ ಬಸ್‌ಗಳು ಖಾಲಿಯಿದ್ದರೂ ನಿಲ್ಲಿಸದೆ ಹೋಗಿವೆ ಎಂದು ಗ್ರಾಮದ ಮಾಧು ಆರೋಪಿಸಿದ್ದಾರೆ. ಸಾರಿಗೆ ಬಸ್‌ಗಳು ಗ್ರಾಮದ ಗೇಟ್‌ ಮುಂದೆಯೇ ಹೋದರೂ ನಿಲ್ಲದ ಕಾರಣ ಶಾಲಾ, ಕಾಲೇಜಿಗೆ ವಿಳಂಬವಾಗುತ್ತಿದೆ ಎಂದು ವಿದ್ಯಾರ್ಥಿಗಳು ಹಣ ನೀಡಿ ಆಟೋದಲ್ಲಿ ಹೋಗಿದ್ದಾರೆ.

ಗ್ರಾಮದ ಮಾಧು ಕನ್ನಡಪ್ರಭದೊಂದಿಗೆ ಮಾತನಾಡಿ, ಬಸ್‌ಗಳು ಶಿಂಡನಪುರ ಗೇಟ್‌ ಬಳಿ ನಿಲ್ಲದ ಬಗ್ಗೆ ಕ್ಷೇತ್ರದ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಗಮನಕ್ಕೆ ತಂದಾಗ ಬಸ್‌ ನಿಲ್ಲಿಸುವಂತೆ ಹೇಳುತ್ತೇನೆ ಎಂದು ಭರವಸೆ ನೀಡಿದ್ದಾರೆ ಎಂದರು.

ಗುಂಡ್ಲುಪೇಟೆ-ಚಾಮರಾಜನಗರ ರಸ್ತೆಯಲ್ಲಿ ಬರುವ ಎಲ್ಲಾ ಗ್ರಾಮಗಳ ಹಾಗೂ ಗೇಟ್‌ಗಳಲ್ಲಿ ಸಾರಿಗೆ ಬಸ್‌ ನಿಲ್ಲಿಸಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳ ಕರೆದುಕೊಂಡು ಬರುವಂತೆ ಸಾರಿಗೆ ಘಟಕ ವ್ಯವಸ್ಥಾಪಕರನ್ನು ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

ತಡೆರಹಿತ ಬಸ್‌ಗಳು ನಿಲ್ಲಿಸದೆ ಬಂದಿವೆ. ನಾಳೆಯಿಂದ ಎಲ್ಲಾ ಬಸ್‌ಗಳು ನಿಲ್ಲಿಸುವಂತೆ ಸೂಚನೆ ನೀಡಲಾಗುವುದು. ಓರ್ವ ಟ್ರಾಫಿಕ್‌ ಕಂಟ್ರೋಲರ್‌ನ್ನು ನೇಮಿಸಲಾಗುವುದು.

-ಮಧು, ಘಟಕ ವ್ಯವಸ್ಥಾಪಕ (ಪ್ರಭಾರ)