ಸಾರಾಂಶ
ನಾಮಪತ್ರಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ 07 ನಾಮಪತ್ರಗಳನ್ನು ತಿರಸ್ಕರಿಸಿ, 34 ನಾಮಪತ್ರಗಳನ್ನು ಅಂಗೀಕರಿಸಲಾಗಿದೆ. ನಾಮಪತ್ರಗಳ ಪರಿಶೀಲನೆಯ ನಂತರ 26 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಕನ್ನಡಪ್ರಭ ವಾರ್ತೆ ಕಲಬುರಗಿ
ಈಶಾನ್ಯ ಪದವೀಧರ ಕ್ಷೇತ್ರ ಚುನಾವಣೆ ಹಿನ್ನೆಲೆ ಶುಕ್ರವಾರ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಮತ್ತು ಕ್ಷೇತ್ರದ ಸಾಮಾನ್ಯ ವೀಕ್ಷಕ ಮಹೇಶ್ವರ ರಾವ್ ಅವರ ಸಮಕ್ಷಮ ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಿತು. 7 ನಾಮಪತ್ರಗಳನ್ನು ತಿರಸ್ಕೃತ ಗೊಳಿಸಿ 34 ನಾಮಪತ್ರ ಅಂಗೀಕರಿಸಲಾಗಿದೆ.ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ ಚುನಾವಣಾಧಿಕಾರಿಗಳೂ ಆಗಿರುವ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಇವರು ಚುನಾವಣಾ ವೀಕ್ಷಕರಾಗರುವ ಮಹೇಶ್ವರರಾವ ಸಮ್ಮುಖದಲ್ಲಿ ನಡೆಸಿದರು.
ಈಶಾನ್ಯ ಪದವಿಧರ ಕ್ಷೇತ್ರಕ್ಕೆ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳ ಉಪಸ್ಥಿತಿಯಲ್ಲಿ ನಾಮಪತ್ರಗಳನ್ನು ಪರಿಶೀಲಿಸಲಾಯಿತು. ಒಟ್ಟಾರೆಯಾಗಿ 29 ಅಭ್ಯರ್ಥಿಗಳು 41 ನಾಮಪತ್ರಗಳನ್ನು ಸಲ್ಲಿಸಿದ್ದರು.ನಾಮಪತ್ರಗಳ ಪರಿಶೀಲನಾ ಪ್ರಕ್ರಿಯೆಯಲ್ಲಿ 07 ನಾಮಪತ್ರಗಳನ್ನು ತಿರಸ್ಕರಿಸಿ, 34 ನಾಮಪತ್ರಗಳನ್ನು ಅಂಗೀಕರಿಸಲಾಗಿದೆ. ನಾಮಪತ್ರಗಳ ಪರಿಶೀಲನೆಯ ನಂತರ 26 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ.
ಒಬ್ಬ ಅಭ್ಯರ್ಥಿಯನ್ನು ಭಾರತ ಚುನಾವಣಾ ಆಯೋಗವು ಅನರ್ಹಗೊಳಿಸಿರುವುದರಿಂದ ಹಾಗೂ ಇನ್ನಿಬ್ಬರ ನಾಮಪತ್ರಗಳನ್ನು ವಯೋಮಿತಿಯು ಮಾನದಂಡಕ್ಕೆ ಅನರ್ಹರಾದ್ದರಿಂದ ತಿರಸ್ಕರಿಸಲಾಗಿದೆ.