ಸಾರಾಂಶ
ಕನ್ನಡಪ್ರಭ ವಾರ್ತೆ ಕಲಬುರಗಿ
ಈಶಾನ್ಯ ಪದವೀಧರ ಕ್ಷೇತ್ರದ ಮತದಾರರ ಅಂತಿಮ ಪಟ್ಟಿಯನ್ನು ಶನಿವಾರ ಪ್ರಕಟಗೊಂಡಿದ್ದು, ಕ್ಷೇತ್ರದ ವ್ಯಾಪ್ತಿಯ ಕಲಬುರಗಿ ಜಿಲ್ಲೆಯಲ್ಲಿ 21,990 ಪುರುಷರು, 15,272 ಮಹಿಳೆಯರು ಹಾಗೂ ಇತರೆ 5 ಸೇರಿ ಒಟ್ಟಾರೆ 37,267 ಜನ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸಿಕೊಂಡಿದ್ದಾರೆ ಎಂದು ಕಲಬುರಗಿ ಜಿಲ್ಲಾಧಿಕಾರಿ ಮತ್ತು ಕ್ಷೇತ್ರದ ಸಹಾಯಕ ಮತದಾರರ ನೋಂದಣಾಧಿಕಾರಿಗಳಾಗಿರುವ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.ಕಳೆದ ನವೆಂಬರ್ 23ಕ್ಕೆ ಪ್ರಕಟಿಸಿದ ಕರಡು ಪಟ್ಟಿಯಲ್ಲಿ 21,197 ಪುರುಷರು, 14,644 ಮಹಿಳೆಯರು ಹಾಗೂ ಇತರೆ 5 ಸೇರಿ ಒಟ್ಟಾರೆ 35,846 ಜನ ಮತದಾರರಿದ್ದರು. ಇದರಲ್ಲಿ ಎರಡೆರಡು ಕಡೆ ಹೆಸರು ನೋಂದಣಿ ಮಾಡಿಕೊಂಡ 690 ಪುರುಷರು, 404 ಮಹಿಳೆಯರು ಸೇರಿದಂತೆ ಒಟ್ಟು 1,094 ಮಂದಿ ಹೆಸರನ್ನು ತೆಗೆದು ಹಾಕಲಾಯಿತು. ನಿರಂತರ ಪ್ರಕ್ರಿಯೆಯಲ್ಲಿ ಒಟ್ಟು 2,515 ಮತದಾರರರು ಹೆಸರು ಸೇರ್ಪಡೆ ಮಾಡಿಕೊಂಡ ಪರಿಣಾಮ ಜಿಲ್ಲೆಯ ಅಂತಿಮ ಮತದಾರರ ಪಟ್ಟಿಯಲ್ಲಿ ಒಟ್ಟಾರೆ 37,267 ಜನ ಸೇರಿದ್ದಾರೆ .
ತಾಲೂಕವಾರು ಮತದಾರರ ವಿವರ:ಅಂತಿಮ ಮತದಾರರ ಪಟ್ಟಿ ಪಟ್ಟಿಯಂತೆ ಅಫಜಲಪೂರದಲ್ಲಿ 1,571 ಪುರುಷ, 597 ಮಹಿಳೆ ಸೇರಿ 2,168, ಆಳಂದದಲ್ಲಿ 1,257 ಪುರುಷ, 482 ಮಹಿಳೆ ಸೇರಿ 1,739, ಚಿಂಚೋಳಿಯಲ್ಲ್ಲಿ 1,272 ಪುರುಷ, 860 ಮಹಿಳೆ ಸೇರಿ 2,132, ಚಿತ್ತಾಪುರದಲ್ಲಿ 2,322 ಪುರುಷ, 1,440 ಮಹಿಳೆ ಸೇರಿ 3,762, ಶಹಾಬಾದನಲ್ಲಿ 1,393 ಪುರುಷ, 759 ಮಹಿಳೆ ಸೇರಿ 2,152, ಕಲಬುರಗಿ ನಗರದಲ್ಲಿ 1,657 ಪುರುಷ, 1,103 ಮಹಿಳೆ ಸೇರಿ 2,760, ಕಲಬುರಗಿ ಗ್ರಾಮೀಣದಲ್ಲಿ 7,088 ಪುರುಷ, 7,241 ಮಹಿಳೆ, ಇತರೆ-3 ಸೇರಿ 14,332. ಕಮಲಾಪೂರದಲ್ಲಿ 2,230 ಪುರುಷ, 1,045 ಮಹಿಳೆ ಸೇರಿ 3,275, ಜೇವರ್ಗಿಯಲ್ಲಿ 1,157 ಪುರುಷ, 649 ಮಹಿಳೆ, ಇತರೆ-2 ಸೇರಿ 1,808, ಯಡ್ರಾಮಿಯಲ್ಲಿ 587 ಪುರುಷ, 286 ಮಹಿಳೆ ಸೇರಿ 873, ಸೇಡಂನಲ್ಲಿ 461 ಪುರುಷ, 474 ಮಹಿಳೆ ಸೇರಿ 935 ಹಾಗೂ ಕಾಳಗಿಯಲ್ಲಿ 995 ಪುರುಷ, 336 ಮಹಿಳೆ ಸೇರಿ 1,331 ಜನ ಮತದಾರರ ಅಂತಿಮ ಮತದಾರರ ಪಟ್ಟಿಯಲ್ಲಿದ್ದಾರೆ ಎಂದು ಡಿ.ಸಿ. ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಹೆಸರು ನೋಂದಾಯಿಸುವಂತೆ ಡಿಸಿ ಮನವಿ: ಮತದಾರರ ನೋಂದಣಿ ನಿರಂತರ ಪ್ರಕ್ರಿಯೆಯಾಗಿರುವುದರಿಂದ ಜ.1 2023ಕ್ಕಿಂತ 3 ವರ್ಷಗಳ ಪೂರ್ವದಲ್ಲಿ ಅಂದರೆ 01.11.2020 ಕ್ಕಿಂತಲೂ ಪೂರ್ವದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದ ಅರ್ಹ ಮತದಾರರು ಕ್ಷೇತ್ರದ ಚುನಾವಣೆ ಘೋಷಣೆಯಾಗಿ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕದವರೆಗೂ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆಮಾಡಿಕೊಳ್ಳಲು ಅವಕಾಶವಿದೆ. ಪದವೀಧರ ಮತದಾರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮನವಿ ಮಾಡಿದ್ದಾರೆ.