ಸಾರಾಂಶ
ಉತ್ತರ ಕರ್ನಾಟಕ ಆಚಾರ-ವಿಚಾರ, ಸಂಸ್ಕೃತಿಯಲ್ಲಿ ಹೆಸರುವಾಸಿಯಾಗಿದೆ. ಈ ಮಣ್ಣಿನ ಗುಣ ಎಲ್ಲರನ್ನೂ ಪ್ರೀತಿಸುವ ಮನೋಭಾವ ಹೊಂದಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆಯ ವಿನಯ ಗುರೂಜಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಕ್ಕೇರಿ
ಉತ್ತರ ಕರ್ನಾಟಕ ಆಚಾರ-ವಿಚಾರ, ಸಂಸ್ಕೃತಿಯಲ್ಲಿ ಹೆಸರುವಾಸಿಯಾಗಿದೆ. ಈ ಮಣ್ಣಿನ ಗುಣ ಎಲ್ಲರನ್ನೂ ಪ್ರೀತಿಸುವ ಮನೋಭಾವ ಹೊಂದಿದೆ ಎಂದು ಚಿಕ್ಕಮಗಳೂರು ಗೌರಿಗದ್ದೆಯ ವಿನಯ ಗುರೂಜಿ ಹೇಳಿದರು.ಹಿರೇಮಠದ ಗುರುಶಾಂತೇಶ್ವರ ಶಿಕ್ಷಣ ಸಮೂಹ ಸಂಸ್ಥೆಯಲ್ಲಿ ಶುಕ್ರವಾರ ನಡೆದ ಹುಕ್ಕೇರೀಶ್ವರ ಉತ್ಸವ-2025ರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಕನ್ನಡ ನಾಡಿನ ನಾಡು,ನುಡಿ, ನೆಲ,ಜಲ, ಭಾಷೆ,ಸಂಸ್ಕೃತಿ ಉಳಿಸಿ ಬೆಳೆಸುವಲ್ಲಿ ಉತ್ತರ ಕರ್ನಾಟಕದ ಕೊಡುಗೆ ಅಮೂಲ್ಯವಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶ್ರೀರಂಗಪಟ್ಟಣ ಚಂದ್ರವನ ಆಶ್ರಮ ಬೇಬಿಮಠದ ಡಾ.ತ್ರೀನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಮಕ್ಕಳಲ್ಲಿ ಒಳ್ಳೆಯ ಗುಣ, ಪ್ರಾಮಾಣಿಕತೆ ಬೆಳೆಯಬೇಕಾದರೆ ತಾಯಿಯ ಪಾತ್ರ ಹಿರಿದಾಗಿದೆ. ಪಾಲಕರ ನಡೆ,ನುಡಿ ನೋಡಿ ಬೆಳೆಯುವ ಮಕ್ಕಳು ಸಂಸ್ಕಾರವಂತರಾಗಬೇಕಾದರೆ ಹಿರಿಯರಲ್ಲಿ ಒಳ್ಳೆಯ ಸಂಸ್ಕಾರ ಇರಬೇಕು ಎಂದರು.ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮಕ್ಕಳು ದೇವರ ಸಮಾನ, ದೇವರಂತಹ ಮನಸ್ಸುಳ್ಳ ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಬೆಳೆಸಬೇಕಾಗಿದೆ. ವಿದ್ಯೆ ಸಂಬಳಕ್ಕಾದರೆ, ಸಂಸ್ಕಾರ ಉತ್ತಮ ಭವಿಷ್ಯಕ್ಕೆ ಅಗತ್ಯ ಎಂದು ಹೇಳಿದರು.
ಇದೇ ವೇಳೆ ವಾರ್ಷಿಕ ಕ್ರೀಡಾಕೂಟ ವಿಜೇತರಿಗೆ ಬಹುಮಾನ ಹಾಗೂ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮ ನಡೆಯಿತು. ಮಹಾವೀರ ಉದ್ಯೋಗ ಸಮೂಹ ಸಂಸ್ಥೆ ಉಪಾಧ್ಯಕ್ಷ ಪ್ರಜ್ವಲ ನಿಲಜಗಿ, ತಹಸೀಲ್ದಾರ ಮಂಜುಳಾ ನಾಯಕ, ಬಿಇಒ ಪ್ರಭಾವತಿ ಪಾಟೀಲ, ಬಿಸಿಯೂಟ ಅಧಿಕಾರಿ ಸವಿತಾ ಹಲಕಿ, ಕ್ಷೇತ್ರ ಸಮನ್ವಯಾಧಿಕಾರಿ ಎ.ಎಸ್. ಪದ್ಮನ್ನವರ, ನಿವೃತ್ತ ಪ್ರಾಚಾರ್ಯೆ ಸುಮಂಗಲಾ ಶಿಂತ್ರೆ, ಉಮೇಶ ಜಿನರಾಳಿ, ಸಂಪತ್‌ಕುಮಾರ ಶಾಸ್ತ್ರೀ, ಎಸ್.ಬಿ. ಜಿನರಾಳಿ, ಎಸ್.ಎಸ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.