ಉತ್ತರ ಕರ್ನಾಟಕ ಸೊಗಡಿನ ಚಲನಚಿತ್ರ ಉಡಾಳ

| Published : Nov 16 2025, 03:15 AM IST

ಉತ್ತರ ಕರ್ನಾಟಕ ಸೊಗಡಿನ ಚಲನಚಿತ್ರ ಉಡಾಳ
Share this Article
  • FB
  • TW
  • Linkdin
  • Email

ಸಾರಾಂಶ

ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಕಥೆಯೊಂದನ್ನು ಆರಿಸಿಕೊಂಡು ಉಡಾಳ ಚಲನಚಿತ್ರ ಮಾಡಲಾಗಿದೆ. ಒಂದೂವರೆ ವರ್ಷದಿಂದ ಶ್ರಮವಹಿಸಿ, 45 ದಿನಗಳಲ್ಲಿ ಶೂಟಿಂಗ್ ಮುಗಿಸಿ ಚಿತ್ರ ಸಿದ್ಧಪಡಿಸಲಾಗಿದೆ ಎಂದು ಉಡಾಳ ಚಿತ್ರದ ನಿರ್ದೇಶಕ ಅಮೋಲ‌ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಉತ್ತರ ಕರ್ನಾಟಕದ ಸೊಗಡನ್ನು ಹೊಂದಿರುವ ಕಥೆಯೊಂದನ್ನು ಆರಿಸಿಕೊಂಡು ಉಡಾಳ ಚಲನಚಿತ್ರ ಮಾಡಲಾಗಿದೆ. ಒಂದೂವರೆ ವರ್ಷದಿಂದ ಶ್ರಮವಹಿಸಿ, 45 ದಿನಗಳಲ್ಲಿ ಶೂಟಿಂಗ್ ಮುಗಿಸಿ ಚಿತ್ರ ಸಿದ್ಧಪಡಿಸಲಾಗಿದೆ ಎಂದು ಉಡಾಳ ಚಿತ್ರದ ನಿರ್ದೇಶಕ ಅಮೋಲ‌ ಪಾಟೀಲ ಹೇಳಿದರು.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ₹3.5 ಕೋಟಿ ಬಜೆಟ್ ಸಿನಿಮಾದಲ್ಲಿ ನಾಯಕನಾಗಿ ಪೃಥ್ವಿ ಶಾಮನೂರು, ನಾಯಕಿಯಾಗಿ ಹೃತಿಕಾ ಶ್ರೀನಿವಾಸ ಅಭಿನಯಿಸಿದ್ದಾರೆ. ವಿಲನ್ ಆಗಿ ಹರೀಶ ಹಿರಿಯೂರು, ಮಾಳು ನಿಪನಾಳ‌, ಪ್ರವೀಣಕುಮಾರ ಗಸ್ತಿ ಸೇರಿದಂತೆ ಅನೇಕ ಉತ್ತರ ಕರ್ನಾಟಕ ಕಲಾವಿದರಿದ್ದಾರೆ.‌ ವಿಜಯಪುರದವನಾದ ನಾನು ನಗರದ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾಕಮಾನ ಸೇರಿದಂತೆ ಬಹುತೇಕ ಕಡೆಗಳಲ್ಲಿ ಚಿತ್ರ ಶೂಟಿಂಗ್ ಮಾಡಲಾಗಿದೆ. ಚಿತ್ರದಲ್ಲಿನ ದೃಶ್ಯಗಳು ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿ ಎಂದು ಆಶಿಸುತ್ತೇನೆ.‌ ಶೂಟಿಂಗ್‌ಗೆ ಸಹಕರಿಸಿದ ಭಾರತೀಯ ಪುರಾತತ್ವ ಇಲಾಖೆ ಅಧಿಕಾರಿಗಳಿಗೆ, ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಹಾಗೂ ವಿಜಯಪುರದ ಜನತೆಗೆ ಚಿತ್ರ ತಂಡದಿಂದ ಧನ್ಯವಾದ ಅರ್ಪಿಸುತ್ತೇನೆ ಎಂದರು.

ನಟ ಪೃಥ್ವಿ ಶಾಮನೂರು ಮಾತನಾಡಿ, ಸಂಪೂರ್ಣವಾಗಿ ವಿಜಯಪುರದಲ್ಲೇ ಚಿತ್ರದ ಶೂಟಿಂಗ್ ಮಾಡಲಾಗಿದೆ. ನ.14ರಂದು ಚಿತ್ರ ಬಿಡುಗಡೆಯಾಗಿದ್ದು, ಎಲ್ಲರೂ ಸಂತಸದಿಂದ ಸಂಭ್ರಮಿಸಿದ್ದಾರೆ. ಉತ್ತರ ಕರ್ನಾಟಕದ ಅಭಿಲಾಷೆ, ಸೊಗಡು ಹೊಂದಿರುವ ಚಿತ್ರವಿದು ಎಂದರು.

ವಿಲನ್ ಪಾತ್ರಧಾರಿ ಹರೀಶ ಹಿರಿಯೂರ ಮಾತನಾಡಿ, ಕಾಮಿಡಿ ಕಿಲಾಡಿಯಲ್ಲಿ ಪಾತ್ರ ಮಾಡುವಾಗ ಯೋಗರಾಜ ಭಟ್ ಅವರು ಕರೆದು ನನಗೆ ಈ ಚಿತ್ರದಲ್ಲಿ ವಿಲನ್ ಪಾತ್ರ ಕೊಟ್ಟಿದ್ದಾರೆ. ಇಲ್ಲಿಯ ಜಾನಪದ ಕಲಾವಿದರೇ ಹಾಡಿರುವ ಚಿತ್ರದ ಮೂರ್ನಾಲ್ಕು ಹಾಡುಗಳು ಹಿಟ್ ಆಗಿವೆ ಎಂದರು.

ಸಹನಟ ಪ್ರವೀಣಕುಮಾರ ಗಸ್ತಿ ಮಾತನಾಡಿ, ಸ್ನೇಹಿತರ ಮಧ್ಯದಲ್ಲಿ ನಡೆದಿರುವ ಘಟನೆಯ ತಿರುಳುಗಳನ್ನು ತಂದು ಮಾಡಿರುವ ಉಡಾಳ ಚಿತ್ರ ಹುಡುಗುರ ಭಾವನೆಗಳಿಗೆ ತಕ್ಕಂತೆ ಮಾಡಲಾಗಿದೆ. ಈ ಚಿತ್ರದಲ್ಲಿ ರಿಯಾಲಿಟಿಯಾಗಿಯೇ ಪಾತ್ರಗಳ‌ ಅಭಿನಯವಿದೆ. ಸಂಬಂಧಗಳ ಹಾಗೂ ಸ್ನೇಹಗಳ ಮೌಲ್ಯವನ್ನು ಇದರಲ್ಲಿ ತಿಳಿಸಿಕೊಡಲಾಗಿದೆ. ನಟಿ ರೇಣುಕಾ ಗೋಪಿ,‌ ಚೇತನ, ಸಹ ನಿರ್ದೇಶಕ ವಿರೇಶ.ಪಿ.ಎಂ, ಪ್ರಕಾಶ.ಆರ್.ಕೆ ಮಾತನಾಡಿದರು.