Northeast Teachers' Constituency Election: Record 86.97% Voter Turnout
-ಚುನಾವಣಾಧಿಕಾರಿ ಜಹೀರಾ ನಸೀಂ ಮಾಹಿತಿ । ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತ ಮುಕ್ತಾಯ
----ಕನ್ನಡಪ್ರಭ ವಾರ್ತೆ ಕಲಬುರಗಿ
ಕರ್ನಾಟಕ ವಿಧಾನ ಪರಿಷತ್ ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆ ಶಾಂತಿಯುತವಾಗಿ ಮುಕ್ತಾಯಗೊಂಡಿದೆ ಎಂದು ಚುನಾವಣಾಧಿಕಾರಿ ಜಹೀರಾ ನಸೀಂ ತಿಳಿಸಿದ್ದಾರೆ.ಶಿಕ್ಷಕ ಮತದಾರರು ಅತ್ಯಂತ ಉತ್ಸಾಹದಿಂದ ಭಾಗವಹಿಸುವ ಮೂಲಕ ಈ ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದಾರೆ.
ಅಂತಿಮ ಚುನಾವಣಾ ಅಂಕಿಅಂಶಗಳ ಪ್ರಕಾರ, ಒಟ್ಟು 34,784 ನೋಂದಾಯಿತ ಮತದಾರರಲ್ಲಿ 30,250 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದು, ಕ್ಷೇತ್ರದಲ್ಲಿ ಭರ್ಜರಿ 86.97% ರಷ್ಟು ಮತದಾನ ದಾಖಲಾಗಿದೆ.ಪುರುಷ ಮತದಾರರು 89.86% (18,008 ಮತಗಳು) ಮತದಾನ ಮಾಡುವ ಮೂಲಕ ಮುಂಚೂಣಿಯಲ್ಲಿದ್ದರೆ, ಮಹಿಳಾ ಮತದಾರರು 83.03% (12,242 ಮತಗಳು) ಪ್ರಮಾಣದಲ್ಲಿ ಮತದಾನ ಮಾಡಿದ್ದಾರೆ.
ಕಲಬುರಗಿ: ಒಟ್ಟು 10,652 ಮತದಾರರ ಪೈಕಿ 8,988 ಮತದಾರರು (ಪುರುಷರು: 5,002, ಮಹಿಳೆಯರು: 3,986) ಮತದಾನ ಮಾಡಿದ್ದಾರೆ.ಬೀದರ್: ಒಟ್ಟು 7,038 ಮತದಾರರ ಪೈಕಿ 6,086 ಮತದಾರರು (ಪುರುಷರು: 3,408, ಮಹಿಳೆಯರು: 2,678) ಹಕ್ಕು ಚಲಾಯಿಸಿದ್ದಾರೆ.
ರಾಯಚೂರು: ಒಟ್ಟು 5,402 ಮತದಾರರ ಪೈಕಿ 4,648 ಮತದಾರರು (ಪುರುಷರು: 2,787, ಮಹಿಳೆಯರು: 1,861) ಮತದಾನ ಮಾಡಿದ್ದಾರೆ.ಬಳ್ಳಾರಿ: ಒಟ್ಟು 3,393 ಮತದಾರರಲ್ಲಿ 2,935 ಮತಗಳು (ಪುರುಷರು: 1,615, ಮಹಿಳೆಯರು: 1,320) ಚಲಾಯಿತಗೊಂಡಿವೆ.
ವಿಜಯನಗರ: ಒಟ್ಟು 3,326 ಮತದಾರರಲ್ಲಿ 3,029 ಮತಗಳು (ಪುರುಷರು: 2,030, ಮಹಿಳೆಯರು: 999) ದಾಖಲಾಗಿವೆ.ಕೊಪ್ಪಳ: ಒಟ್ಟು 2,714 ಮತದಾರರಲ್ಲಿ 2,513 ಮತದಾರರು (ಪುರುಷರು: 1,732, ಮಹಿಳೆಯರು: 781) ಮತ ಚಲಾಯಿಸಿದ್ದಾರೆ.
ಯಾದಗಿರಿ: ಒಟ್ಟು 2,259 ಮತದಾರರಲ್ಲಿ 2,051 ಮತಗಳು (ಪುರುಷರು: 1,434, ಮಹಿಳೆಯರು: 617) ದಾಖಲಾಗಿವೆ.ಚುನಾವಣಾ ಪ್ರಕ್ರಿಯೆಯನ್ನು ಶಾಂತಿಯುತವಾಗಿ ಹಾಗೂ ಸುಸೂತ್ರವಾಗಿ ನಡೆಸಿಕೊಡಲು ಸಹಕರಿಸಿದ ಎಲ್ಲಾ ಶಿಕ್ಷಕ ಮತದಾರರು, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳಿಗೆ ಪ್ರಾದೇಶಿಕ ಆಯುಕ್ತರು ಧನ್ಯವಾದ ತಿಳಿಸಿದ್ದಾರೆ.
