ಸಾರಾಂಶ
ಸೂಲಿಬೆಲೆ: ವಿದ್ಯಾರ್ಥಿಗಳು ಎಚ್ಚರದಿಂದ ಅಧ್ಯಯನ ಮಾಡಬೇಕು. ಇಂದಿನ ಸಾಮಾಜಿಕ ಜಾಲತಾಣದಲ್ಲಿ ಸಿಗುವ ಎಲ್ಲಾಮಾಹಿತಿಯೂ ಸತ್ಯವಲ್ಲ. ಆದ್ದರಿಂದ ವಿದ್ಯಾರ್ಥಿಗಳು ಕೂಲಂಕುಷವಾಗಿ ಪರಿಶೀಲಿಸಬೇಕು ಎಂದು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ ಜಂಟಿ ಮುಖ್ಯಸ್ಥ ಡಾ.ಬಿ.ಎಸ್.ಶಿವರಾಮ್ ಹೇಳಿದರು.

ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಉನ್ನತ ವ್ಯಾಸಂಗದಲ್ಲಿ ಶಿಕ್ಷಣದ ಅವಲಂಬಿಕೆ ಹಾಗೂ ಮಾರ್ಗದರ್ಶನ ವಿಚಾರವಾಗಿ ಹಮ್ಮಿಕೊಂಡಿದ್ದ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ವಿಜ್ಞಾನದತ್ತ ಹೆಚ್ಚಿನ ಒಲವು ಬೆಳೆಸಿಕೊಳ್ಳಬೇಕು. ದೇಶದ ಅಭಿವೃದ್ಧಿ ದೃಷ್ಠಿಯಿಂದ ನೂತನ ಅವಿಷ್ಕಾರಗಳಿಗೆ ನಾಂದಿ ಹಾಡಬೇಕು ಎಂದು ಹೇಳಿದರು.ಕಾಲೇಜು ಅಭಿವೃದ್ದಿ ಸಮಿತಿ ಉಪಾಧ್ಯಕ್ಷ ಬಿ.ಎನ್.ಗೋಪಾಲಗೌಡ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಗ್ರಂಥಾಲಯಗಳು ಪ್ರಮುಖ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಓದಿನತ್ತ ಚಿತ್ತ ಹರಿಸಬೇಕು. ಜ್ಞಾನ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಪ್ರೋ;ಕೆ.ಮೋಹನ್‌ಕುಮಾರ್, ನೋಡಲ್ ಅಧಿಕಾರಿ ಡಾ.ನಾಗೇಶ್, ಮುಖ್ಯ ಅತಿಥಿಗಳಾಗಿ ಪಿಯು ಕಾಲೇಜು ಪ್ರಾಚಾರ್ಯ ಸುಬ್ರಮಣಿ, ಉಪನ್ಯಾಸಕರಾದ ಡಾ.ಸಂಗೀತಾ, ಡಾ.ನರಸಪ್ಪ, ಡಾ.ವೆಂಕಟರಮಣಪ್ಪ, ಡಾ.ಕಲ್ಪನಾ, ಎಸ್.ವಿ.ಗಿರೀಶ್, ಕೃಷ್ಣಪ್ಪ ಇತರರಿದ್ದರು.