ಸಾರಾಂಶ
ಸಿಎಂ ಆಗಬೇಕಾದರೆ ರಾಜ್ಯದಲಿ ಮೇಜರಿಟಿ ಶಾಸಕರು ಗೆಲ್ಲಬೇಕು, ಮೇಜಾರಿಟಿ ಬಂದ ಮೇಲೆ ಆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ,
ಕೋಲಾರ:ಸ್ವಾಮೀಜಿಗಳಿಂದ ಸಿಎಂಗಳು ಆಗುವುದಾದರೆ ಎಲೆಕ್ಷನ್ ಪ್ರಶ್ನೆಯೇ ಉದ್ಭವವಾಗುವುದಿಲ್ಲ ಸಿಎಂ ಆಗಬೇಕಾದರೆ ಮೇಜರಿಟಿ ಬರಬೇಕು ಎಂದು ಸಚಿವ ಶರಣಬಸಪ್ಪ ದರ್ಶನಾಪುರ ಹೇಳಿದರು.ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮೇಜಾರಿಟಿ ಬಂದ ಮೇಲೆ ಆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ, ಮಠಾಧೀಶರು ಸಿಎಂ ಮಾಡುವುದಕ್ಕೆ ಆಗಲ್ಲ ಎಂದು ಡಿಕೆಶಿ ಸಿಎಂ ಆಗಲಿ ಎಂಬ ಸ್ವಾಮೀಜಿಗಳು, ಮಠಾಧೀಶರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.ಸಿಎಂ ಆಗಬೇಕಾದರೆ ರಾಜ್ಯದಲಿ ಮೇಜರಿಟಿ ಶಾಸಕರು ಗೆಲ್ಲಬೇಕು, ಮೇಜಾರಿಟಿ ಬಂದ ಮೇಲೆ ಆ ಪಕ್ಷದ ಹೈಕಮಾಂಡ್ ನಿರ್ಧಾರ ಮಾಡುತ್ತೆ, ಮಠಾಧೀಶರು ಸಿಎಂ ಮಾಡುವುದಕ್ಕೆ ಆಗಲ್ಲ. ಪಕ್ಷದ ಶಾಸಕರು ಮತ್ತು ಹೈಕಮಾಂಡ್ ನಿರ್ಧಾರ ಮಾಡಿದವರು ಸಿಎಂ ಆಗುತ್ತಾರೆ, ಪಕ್ಷದ 138 ಶಾಸಕರು ಡಿಸಿಎಂ ಮತ್ತು ಸಿಎಂ ಪರವಿದ್ದೇವೆ ಎಂದರು.
ಎಲ್ಲರಿಗೂ ಆಸೆ ಇರುತ್ತೆ ಮೊದಲು ಎಂಎಲ್‌ಎ ಆಗಬೇಕು, ಸಚಿವರಾಗಬೇಕು, ನಂತರ ಸಿಎಂ, ಪಿಎಂ ಆಗಬೇಕು ಅಂತಾ, ಸಿಎಂ ಆಗುವುದು ಒಬ್ಬರೇ, ಪಿಎಂ ಆಗುವುದು ಒಬ್ಬರೇ ಆಗಬೇಕು ಎನ್ನುವುದು ತಪ್ಪಲ್ಲ, ಆಸೆ ಇರಬೇಕು ದುರಾಸೆ ಇರಬಾರದು ಎಂದು ಹೇಳಿದರು.ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಕುರಿತು ಮಾತನಾಡಿದ ಅವರು, ಅನಿವಾರ್ಯ ಸಂದರ್ಭದಲ್ಲಿ ಎರಡರೆಡು ಹುದ್ದೆಗಳನ್ನು ನಿಭಾಯಿಸಿದ ಉದಾಹರಣೆ ಇದೆ. ನಮ್ಮ ಅಭಿಪ್ರಾಯ ಹೇಳಿರುತ್ತೇವೆ, ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತೆ ಸದ್ಯ ಸಿಎಂ ಮತ್ತು ಅಧ್ಯಕ್ಷರ ಬದಲಾವಣೆ ಪ್ರಸ್ತಾಪವಿಲ್ಲ ಎಂದು ಹೇಳಿದರು.ಕುಮಾರಸ್ವಾಮಿ ಸಿಎಂ ಆಗಿದ್ದಾಗ ಯಾರು ಸೂಪರ್ ಸಿಎಂ ಫಸ್ಟ್ ಅವರು ಉತ್ತರ ಕೊಡಲಿ, ನಾನು ಅಲ್ಲಿಂದಲೇ ಬಂದವನು ಎಂದು ಎಚ್‌ಡಿಕೆಗೆ ಟಾಂಗ್ ನೀಡಿದರು. ಸುರ್ಜೆವಾಲ್ ನಮ್ಮನ್ನು ಕರೆದಿಲ್ಲ, ಇದು ಪ್ರತಿಪಕ್ಷದಲ್ಲೂ ಕರೆಯುವ ವಾಡಿಕೆ ಇದೆ ಎಂದರು.