ಗಂಗಾವತಿಯಿಂದ ಸ್ಪರ್ಧಿಸುವ ಕುರಿತು ಈಗಲೇ ಹೇಳಲ್ಲ: ಸಂಗಣ್ಣ ಕರಡಿ

| Published : May 13 2025, 11:46 PM IST

ಗಂಗಾವತಿಯಿಂದ ಸ್ಪರ್ಧಿಸುವ ಕುರಿತು ಈಗಲೇ ಹೇಳಲ್ಲ: ಸಂಗಣ್ಣ ಕರಡಿ
Share this Article
  • FB
  • TW
  • Linkdin
  • Email

ಸಾರಾಂಶ

2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇತ್ತು. ಇದೀಗ ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದರೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಕುರಿತು ಇಂದು ಹೇಳಲು ಸಾಧ್ಯವಿಲ್ಲ.

ಕೊಪ್ಪಳ:

ಗಂಗಾವತಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯೇ ಘೋಷಣೆಯಾಗಿಲ್ಲ, ಹೀಗಾಗಿ ಈಗಲೇ ಅಲ್ಲಿ ಸ್ಪರ್ಧಿಸುವ ಕುರಿತು ಈಗಲೇ ಏನನ್ನೂ ಹೇಳಲಾರೆ ಎಂದು ಮಾಜಿ ಸಂಸದ ಸಂಗಣ್ಣ ಕರಡಿ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2028ರ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಯಕೆ ಇತ್ತು. ಇದೀಗ ಗಂಗಾವತಿ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾದರೆ ಸ್ಪರ್ಧಿಸಬೇಕೋ, ಬೇಡವೋ ಎಂಬ ಕುರಿತು ಇಂದು ಹೇಳಲು ಸಾಧ್ಯವಿಲ್ಲ ಎಂದರು.

ನನ್ನ ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ನಾನು ಯಾವುದೇ ಷರತ್ತು ವಿಧಿಸದೆ ಕಾಂಗ್ರೆಸ್‌ ಸೇರ್ಪಡೆಯಾಗಿದ್ದೇನೆ ಎಂದ ಅವರು, ಉಪಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದರು.

ಸ್ಪರ್ಧಿಸುವುದು ಖಚಿತ:

2028ರಂದು ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುವುದು ಖಚಿತ. ಆದರೆ, ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಹೇಳುವುದಿಲ್ಲ ಎಂದರು.ಅಭ್ಯರ್ಥಿ ಆಯ್ಕೆ ಹೈಕಮಾಂಡ್‌ಗೆ ಬಿಟ್ಟಿದ್ದು-ರಾಘವೇಂದ್ರ

ಗಂಗಾವತಿ ವಿಧಾನಸಭಾ ಕ್ಷೇತ್ರಕ್ಕೆ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಬೇಕೆಂದು ಹೈಕಮಾಂಡ್‌ ನಿರ್ಧರಿಸುತ್ತದೆ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.

ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ತಂದೆ ಸುದೀರ್ಘ 40 ವರ್ಷಗಳ ಸೇವೆ ಮತ್ತು ಹಿರಿತನವನ್ನು ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಬಳಕೆ ಮಾಡಿಕೊಳ್ಳುತ್ತದೆ ಮತ್ತು ಈ ಕುರಿತು ತೀರ್ಮಾನಿಸುತ್ತದೆ ಎಂದರು.

ಯಾರು ಸ್ಪರ್ಧಿಸಿದರೆ ಸೂಕ್ತ ಎನ್ನುವುದನ್ನು ನಾನೊಬ್ಬನೇ ಹೇಳಲು ಸಾಧ್ಯವಿಲ್ಲ. ಹೈಕಮಾಂಡ್ ಈ ದಿಸೆಯಲ್ಲಿ ತೀರ್ಮಾನಿಸುತ್ತದೆ. ಗಾಲಿ ಜನಾರ್ದನರೆಡ್ಡಿ ಅವರ ಪತ್ನಿ ಸಭೆ ಮಾಡಿದ್ದರೆ ಆ ಕುರಿತು ಅವರೇ ಉತ್ತರಿಸುತ್ತಾರೆ, ನಾನೇಕೆ ಉತ್ತರಿಸಲಿ ಎಂದರು. ಅಲ್ಲಿ ಕಾಂಗ್ರೆಸ್ ಬಲಿಷ್ಠವಾಗಿದ್ದು, ಪಕ್ಷದ ನಾಯಕರು ಯಾರನ್ನು ಕಣಕ್ಕೆ ಇಳಿಸಬೇಕು ಎಂದು ತೀರ್ಮಾನಿಸುತ್ತಾರೆ ಎಂದರು.