ಗುರುಭವನ ಭರವಸೆ ಅಲ್ಲ, ನನ್ನ ಗ್ಯಾರಂಟಿ: ಶಾಸಕ

| Published : Aug 09 2024, 12:30 AM IST

ಸಾರಾಂಶ

ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ನೀಡಿದ್ದು, ಶಾಸಕರ ಅನುದಾನ, ವಿಧಾನಪರಿಷತ್ ಸದಸ್ಯರ ಅನುದಾನ, ಪುರಸಭೆ ಯೋಜನಾ ಪ್ರಾಧಿಕಾರ, ತಾಲೂಕು ಪಂಚಾಯಿತಿ ಅನುದಾನದ, ಜೊತೆಗೆ ಶಿಕ್ಷಕರ ಸದನದಿಂದ ಬರುವ ಕಲ್ಯಾಣ ನಿಧಿ ಬಳಸಿ ಕಟ್ಟಡ ನಿರ್ಮಿಸಲಾಗುವುದು.

ಕನ್ನಡಪ್ರಭ ವಾರ್ತೆ ಮಾಲೂರು

ಇನ್ನೊಂದು ವರ್ಷದಲ್ಲಿ ಪಟ್ಟಣದಲ್ಲಿ ಗುರು ಭವನ ನಿರ್ಮಿಸಲಾಗುವುದು. ಇದು ಭರವಸೆ ಅಲ್ಲ ಇದು ನನ್ನ ಗ್ಯಾರಂಟಿ ಎಂದು ಶಾಸಕ ಕೆ.ವೈ.ನಂಜೇಗೌಡ ಹೇಳಿದರು.

ಅವರು ಇಲ್ಲಿನ ಮಾರುತಿ ಬಡಾವಣೆಯಲ್ಲಿರುವ ಶಿಕ್ಷಣ ಇಲಾಖೆಯ ನಿವೇಶನದಲ್ಲಿ ನಿಮಿಸಲಾಗುತ್ತಿರುವ ಗುರುಭವನ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

₹೨.೨೫ ಕೋಟಿ ವೆಚ್ಚದ ಯೋಜನೆ

ಪ್ರಸ್ತುತ ಶಾಸಕರ ಅನುದಾನದಡಿ ೨೫ ಲಕ್ಷ ರೂಗಳನ್ನು ಗುರುಭವನ ಕಾಮಗಾರಿಗೆ ನೀಡಲಾಗುವುದು ಎಂದರು. ಕಳೆದ ಆರು ವರ್ಷಗಳಿಂದ ಸ್ಥಗಿತಗೊಂಡಿದ್ದ ಕಾಮಗಾರಿಗೆ ಚಾಲನೆ ನೀಡಿದ್ದು, ಶಾಸಕರ ಅನುದಾನ, ವಿಧಾನಪರಿಷತ್ ಸದಸ್ಯರ ಅನುದಾನ, ಪುರಸಭೆ ಯೋಜನಾ ಪ್ರಾಧಿಕಾರ, ತಾಲೂಕು ಪಂಚಾಯಿತಿ ಅನುದಾನದ, ಜೊತೆಗೆ ಶಿಕ್ಷಕರ ಸದನದಿಂದ ಬರುವ ಕಲ್ಯಾಣ ನಿಧಿ ಅನುದಾನ, ಸಂಘ ಸಂಸ್ಥೆಗಳು, ಸರ್ಕಾರಿ ನೌಕರರ ಶಿಕ್ಷಕರ ಒಂದು ದಿನದ ವೇತನ ವಂತಿಕೆಯನ್ನು ಬಳಸಿಕೊಂಡು ಸುಮಾರು ೨.೨೫ ಕೋಟಿ ವೆಚ್ಚದಲ್ಲಿ ಸುಸಜ್ಜಿತ ಗುರುಭವನ ಕಟ್ಟಡ ಕಾಮಗಾರಿಯನ್ನು ನಿರ್ಮಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಯೋಜನಾ ಪ್ರಾಧಿಕಾರ ಅಧ್ಯಕ್ಷ ನಹೀಂ ಉಲ್ಲಾ ಖಾನ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಹನುಮಂತಪ್ಪ, ಪುರಸಭಾ ಸದಸ್ಯರಾದ ಆರ್.ವೆಂಕಟೇಶ್, ಭಾರತೀ ಶಂಕರಪ್ಪ, ಜಾಕೀರ್ ಖಾನ್, ಇಮ್ತಿಯಾಜ್ ಖಾನ್, ತಹಶೀಲ್ದಾರ್ ಕೆ ರಮೇಶ್, ತಾಪಂ ಇಒ ವಿ ಕೃಷ್ಣಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂಜಿ ಮಧುಸೂದನ್, ಎಚ್.ಎಂ.ವಿಜಯನರಸಿಂಹ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿ ಮುನೇಗೌಡ, ಮಾಜಿ ಅಧ್ಯಕ್ಷ ಆಂಜಿನಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಗುರುಭವನ ಸಮಿತಿ ಅಧ್ಯಕ್ಷ ಎಚ್.ಎಸ್.ಚಂದ್ರಕಲಾ, ಇನ್ನಿತರರು ಹಾಜರಿದ್ದರು.