ಸಾರಾಂಶ
ಬಾಗಲಕೋಟೆ: ನನ್ನ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ, ಹೀಗಾಗಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವ ಆಗಲ್ಲ, ಅವನ್ಯಾವನೋ ಕಂಪ್ಲೆಂಟ್ ಮಾಡಿದವನನ್ನು ಹುಡುಕಾಡುತ್ತಿದ್ದೇವೆ, ಅವನೆಲ್ಲಿದ್ದಾನೋ ಗೊತ್ತಿಲ್ಲ, ಅವನು ನಮಗೆ ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನಾದರೂ ವರ್ಗಾವಣೆ ಮಾಡಿದರೆ ತಾನೆ ಭ್ರಷ್ಟಾಚಾರ ಆಗುತ್ತೆ? ವರ್ಗಾವಣೆ ಆದ ತಕ್ಷಣ ಭ್ರಷ್ಟಾಚಾರವೇ ಆಗಿರುತ್ತದೆಯೇ? ಯಾರೋ ಆಗದೇ ಇರುವವರು ಇಂತದ್ದೆಲ್ಲ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ನನ್ನ ಇಲಾಖೆಯಲ್ಲಿ ಯಾವುದೇ ವರ್ಗಾವಣೆ ಮಾಡಿಲ್ಲ, ಹೀಗಾಗಿ ಭ್ರಷ್ಟಾಚಾರದ ಪ್ರಶ್ನೆಯೇ ಉದ್ಭವ ಆಗಲ್ಲ, ಅವನ್ಯಾವನೋ ಕಂಪ್ಲೆಂಟ್ ಮಾಡಿದವನನ್ನು ಹುಡುಕಾಡುತ್ತಿದ್ದೇವೆ, ಅವನೆಲ್ಲಿದ್ದಾನೋ ಗೊತ್ತಿಲ್ಲ, ಅವನು ನಮಗೆ ಸಿಗುತ್ತಿಲ್ಲ ಎಂದು ಅಬಕಾರಿ ಸಚಿವ ಆರ್. ಬಿ. ತಿಮ್ಮಾಪುರ ಹೇಳಿದ್ದಾರೆ.ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೇನಾದರೂ ವರ್ಗಾವಣೆ ಮಾಡಿದರೆ ತಾನೆ ಭ್ರಷ್ಟಾಚಾರ ಆಗುತ್ತೆ? ವರ್ಗಾವಣೆ ಆದ ತಕ್ಷಣ ಭ್ರಷ್ಟಾಚಾರವೇ ಆಗಿರುತ್ತದೆಯೇ? ಯಾರೋ ಆಗದೇ ಇರುವವರು ಇಂತದ್ದೆಲ್ಲ ಮಾಡ್ತಾರೆ ಎಂದು ಸ್ಪಷ್ಟನೆ ನೀಡಿದರು.
ನಮಗೆ ಎಲ್ಲ ದೇವರು ಒಂದೇ: ಕಾಂಗ್ರೆಸ್ ನವರಿಗೆ ರಾಮ, ರಹೀಮ ಎಲ್ಲರೂ ಅಷ್ಟೆ. ಕಾಳವ್ವ, ಕಂಟೆವ್ವ, ಹನುಮಂತ ದೇವರು, ಬಸವಣ್ಣ, ಸದಾಶಿವ ಎಲ್ಲರೂ ಹಿಂದು ಆರಾಧಿಸುವ ದೇವರು. ಇವರಲ್ಲಿ ರಾಮನೂ ಒಬ್ಬ. ನಾವು ಎಲ್ಲಾ ದೇವರಿಗೂ ಕೊಡುವಷ್ಟೇ ರಾಮನಿಗೂ ಗೌರವ ಕೊಡುತ್ತೇವೆ ಎಂದು ಹೇಳಿದ್ದಾರೆ.ಬಿಜೆಪಿಗರು ರಾಮ ಅಂದರೆ ಬಿಜೆಪಿ ಅನ್ನೋ ರೀತಿ ಮಾಡುತ್ತಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಯಿಸಿದ ಅವರು, ನಿರ್ಧಾರ ಅವರದ್ದೇ ಇರುತ್ತೆ. ನಾವು ರಾಮನ ವಿರೋಧಿಗಳ ಎಂದು ಯಾರಾದರೂ ಕಾಂಗ್ರೆಸ್ ನವರು ಹೇಳಿದ್ದೀವಾ ?. ಅಲ್ಪಸಂಖ್ಯಾತರ ಪರ ಎಂದು ಹೇಳುತ್ತಾರೆ. ನಾವು ಹಿಂದುಗಳ ಪರವಾಗಿಲ್ಲ, ಅಲ್ಪಸಂಖ್ಯಾತರ ಪರ ಅಂತ ಹೇಳಿದ್ದೀವಾ ? ನಾವು ಹಿಂದುಗಳು, ಎಲ್ಲಾ ಧರ್ಮವನ್ನು ಪ್ರೀತಿಸುತ್ತೇವೆ. ಎಲ್ಲಾ ದೇವರಿಗೂ ಭಕ್ತಿ ಭಾವದಿಂದ ನಡೆದುಕೊಳ್ಳುತ್ತೇವೆ ಎಂದರು.
ಬಬಲಾದಿ ಸದಾಶಿವ ನನ್ನ ಮನೆ ದೇವರು. ನಾ ಎಲ್ಲಾ ದೇವರಿಗಿಂತ ಹೆಚ್ಚಿಗೆ ಬಬಲಾದಿ ಸದಾಶಿವನಿಗೆ ನಡೆದುಕೊಳ್ಳುತ್ತೇನೆ. ನನ್ನ ಗೆಳೆಯ ಪಾಂಡುರಂಗ ವಿಠ್ಠಲಗೆ ನಡೆದುಕೊಳ್ಳುತ್ತಾನೆ. ನೀರು ಕುಡಿಬೇಕಾದರೂ ವಿಠ್ಠಲಗೆ ನಮಸ್ಕಾರ ಮಾಡಿಯೇ ಕುಡಿಯುತ್ತಾರೆ. ಇವರು (ಬಿಜೆಪಿ) ರಾಮನೊಬ್ಬನೇ ದೇವರು, ಬಿಜೆಪಿಗರೇ ರಾಮ ಮಂದಿರ ಕಟ್ಟಿದರು ಅನ್ನೋ ರೀತಿಯಲ್ಲಿ ಮಾತನಾಡುತ್ತಿದ್ದಾರೆ. ಬಿಜೆಪಿಯವರಿಗಷ್ಟೇ ರಾಮ ಸೀಮಿತವಲ್ಲ. ಎಲ್ಲರಿಗೂ ರಾಮ ಬೇಕು ಎಂದರು.