ಸಾಧನೆಗೆ ಯಾವುದೇ ಅಸಾಧ್ಯವೆನ್ನುವುದಿಲ್ಲ: ಬಸಣ್ಣವರ

| Published : Aug 26 2024, 01:42 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಜಮಖಂಡಿ ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ, ಸಾಧಿಸುವ ಛಲವಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.2023-24 ನೇ ಸಾಲಿನಲ್ಲಿ ನ್ಯಾಷನಲ್‌ ಮೇನ್ಸ್‌ ಕಂ ಮೆರಿಟ್‌ ಸ್ಕಾಲರಶಿಪ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮಖಂಡಿ ತಾಲೂಕಿನ 64 ಮಕ್ಕಳಿಗೆ ಶನಿವಾರ ಸಾಯಿ ಸಂಕಲ್ಪ ವಿದ್ಯಾಸಂಸ್ಥೆ ಮಧುರಖಂಡಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಕನ್ನಡಪ್ರಭ ವಾರ್ತೆ ಜಮಖಂಡಿ

ಸಾಧನೆಗೆ ಅಸಾಧ್ಯವಾದದ್ದು ಯಾವುದು ಇಲ್ಲ. ಆದರೆ, ಸಾಧಿಸುವ ಛಲವಿರಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎ.ಕೆ.ಬಸಣ್ಣವರ ಹೇಳಿದರು.2023-24 ನೇ ಸಾಲಿನಲ್ಲಿ ನ್ಯಾಷನಲ್‌ ಮೇನ್ಸ್‌ ಕಂ ಮೆರಿಟ್‌ ಸ್ಕಾಲರಶಿಪ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಜಮಖಂಡಿ ತಾಲೂಕಿನ 64 ಮಕ್ಕಳಿಗೆ ಶನಿವಾರ ಸಾಯಿ ಸಂಕಲ್ಪ ವಿದ್ಯಾಸಂಸ್ಥೆ ಮಧುರಖಂಡಿಯಲ್ಲಿ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು. ಜೀವನದಲ್ಲಿ ಸಾಧನೆಯ ಪ್ರಥಮ ಹೆಜ್ಜೆ ಇಡುವುದು ಮುಖ್ಯವಾಗಿರುತ್ತದೆ. ನಿಮ್ಮ ಪಾಲಿನ ನಿಜವಾದ ನಾಯಕರು ನಿಮ್ಮ ತಂದೆ ತಾಯಿ, ಹಾಗೂ ಶಿಕ್ಷಕರು ಅವರ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಎನ್‌ಎಂಎಂಎಸ್‌ ಪರೀಕ್ಷೆಗಳಲ್ಲಿ ಉತ್ತೀರ್ಣರಾದ ಮಕ್ಕಳಿಗೆ ಪ್ರತಿ ತಿಂಗಳು ₹ 1000 ನಂತೆ 4 ವರ್ಷಗಳ ವರೆಗೆ ಸರ್ಕಾರದಿಂದ ವಿದ್ಯಾರ್ಥಿ ವೇತನ ದೊರೆಯುತ್ತದೆ. ಬಾಗಲಕೋಟ ಜಿಲ್ಲೆಯಿಂದ 8450 ಮಕ್ಕಳು ಎನ್‌ಎಂಎಂಎಸ್‌ ಪರೀಕ್ಷೆಗೆ ಬರೆದಿದ್ದರು. ಅದರಲ್ಲಿ ಜಮಖಂಡಿ ತಾಲೂಕಿನಿಂದ 2188 ಮಕ್ಕಳು ಪರೀಕ್ಷೆಗೆ ಹಾಜರಾಗಿದ್ದು, ಬಾಗಲಕೋಟ ಜಿಲ್ಲೆಯಲ್ಲಿ 186 ಮಕ್ಕಳು ಪರೀಕ್ಷೆಯಲ್ಲಿ ಉತ್ತಿರ್ಣರಾಗಿದ್ದಾರೆ. ಅದರಲ್ಲಿ ಜಮಖಂಡಿ ಶೈಕ್ಷಣಿಕ ತಾಲೂಕಿನಿಂದ 121 ಮಕ್ಕಳು ಉತ್ತಿರ್ಣರಾಗಿದ್ದಾರೆ. ವಿದ್ಯಾರ್ಥಿಗಳ ಸಾಧನೆ ತಾಲೂಕಿಗೆ ಹೆಮ್ಮೆಯ ವಿಷಯವಾಗಿದೆ ಎಂದರು.ಎಂ.ಎಂ.ಮೂಡಲಗಿ ಅವರು ಅಧ್ಯಕ್ಷತೆ ವಹಿಸಿದ್ದು, ಸಾಧಕರಿಗೆ ಸನ್ಮಾನ ಮಾಡುವ ಸೌಭಾಗ್ಯ ನಮ್ಮ ಶಾಲೆಗೆ ಸಿಕ್ಕಿದು ನಮಗೆ ತುಂಬಾ ಸಂತೋಷವಾಗಿದೆ ಎಂದರು.

ಅತಿಥಿಗಳಾಗಿ ಕೆಎಸ್‌ಪಿಎಸ್‌ಟಿಎ ಬಾಗಲಕೋಟ ಜಿಲ್ಲಾ ಅಧ್ಯಕ್ಷ ಬಾಗೇನವರ್ ಮಾತನಾಡಿದರು. ರಮೇಶ ಅವಟಿ ಬಿಆರ್‌ಪಿ, ಸಮೀನಾ ಕೌಸರ್ ಸೌದಾಗರ ನೋಡಲ್ ಅಧಿಕಾರಿಗಳು, ಪ್ರೌಢ ಸಹ ಶಿಕ್ಷಕರ ಸಂಘದ ಅಧ್ಯಕ್ಷ ನರಸಿಂಹ ಕಳ್ಳೊಳ್ಳಿ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಂಘ ಅಧ್ಯಕ್ಷ ಭೂಷಣ ಪತ್ತಾರ, ಶಿವು ಯಾದವಾಡ ಬಿಆರ್‌ಪಿ ಹಾಗೂ ವಿವಿಧ ಶಾಲೆಗಳ ಮುಖ್ಯೋಪಾಧ್ಯಾಯರು, ಪಾಲಕರು, ಮಕ್ಕಳು ಉಪಸ್ಥಿತರಿದ್ದರು. ಶಿವು ಯಾದವಾಡ ನಿರೂಪಿಸಿದರು.