ಪಂಚ ಗ್ಯಾರಂಟಿ ಯೋಜನೆ ಪರಿಣಾಮಕಾರಿ ಅನುಷ್ಠಾನಕ್ಕೆ ಸೂಚನೆ

| Published : Oct 09 2024, 01:31 AM IST

ಸಾರಾಂಶ

ರಾಜ್ಯದ ಬಡ ಜನತೆಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ೫ ಗ್ಯಾರಂಟಿ ಯೊಜನೆಗಳನ್ನು ಸಮರ್ಪಕವಾಗಿ, ಹಾಗೂ ತ್ವರಿತವಾಗಿ ಜನತೆಗೆ ತಲುಪಿಸುವುದರೊಂದಿಗೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಹಿರೇಕೆರೂರು: ರಾಜ್ಯದ ಬಡ ಜನತೆಗೆ ಅನಕೂಲ ಕಲ್ಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ೫ ಗ್ಯಾರಂಟಿ ಯೊಜನೆಗಳನ್ನು ಸಮರ್ಪಕವಾಗಿ, ಹಾಗೂ ತ್ವರಿತವಾಗಿ ಜನತೆಗೆ ತಲುಪಿಸುವುದರೊಂದಿಗೆ ಇನ್ನು ಹೆಚ್ಚು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಯು.ಬಿ. ಬಣಕಾರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಪಟ್ಟಣದ ತಾಪಂ ಸಭಾಭವನದಲ್ಲಿ ನಡೆದ ಹಿರೇಕೆರೂರು ಹಾಗೂ ರಟ್ಟೀಹಳ್ಳಿ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೊಳಿಸಿರುವ ಗೃಹಲಕ್ಷ್ಮೀ, ಗೃಹಜ್ಯೋತಿ, ಯುವನಿಧಿ, ಶಕ್ತಿಯೋಜನೆ ಹಾಗೂ ಅನ್ನಭಾಗ್ಯ ಯೋಜನೆಗಳು ರಾಜ್ಯದ ಬಡ ಜನತೆಗೆ ಅನಕೂಲ ಮಾಡುವ ಹಾಗೂ ಅವರ ಸಮಸ್ಯೆಗಳನ್ನು ಪರಿಹರಿಸುವ ಕಾರ್ಯಕ್ರಮಗಳಾಗಿವೆ. ಸರ್ಕಾರ ಈ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುವ ಜತೆಗೆ ಸಮರ್ಪಕ ಅನುಷ್ಠಾನ ಹಾಗೂ ತ್ವರಿತವಾಗಿ ಜನತೆಗೆ ಮುಟ್ಟಿಸಲು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ರಚನೆ ಮಾಡಿದೆ. ಸಮಿತಿ ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯತತ್ಪರತೆಯಿಂದ ಕಾರ್ಯನಿರ್ವಹಿಸಿ ಬಡ ಜನತೆಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ನೀಡುವ ಗುರಿ ನಿಮ್ಮದಾಗಬೇಕು. ಐದು ಗ್ಯಾರಂಟಿ ಯೋಜನೆಗಳ ಮೂಲಕ ಹಿರೇಕೆರೂರು ವಿಧಾನಸಭಾ ಕ್ಷೇತ್ರದಲ್ಲಿ ₹೮೧.೯೧ ಕೋಟಿ ವ್ಯಯಿಸಲಿದ್ದು, ಕ್ಷೇತ್ರದ ಬಡ ಜನತೆಗ ಅನಕೂಲವಾಗಿದೆ ಎಂದರು.

ಅವಳಿ ತಾಲೂಕಿನ ಎಲ್ಲ ಬಸ್ ನಿಲ್ದಾಣಗಳಲ್ಲಿ ಸ್ವಚ್ಛತೆಗೆ ಆಧ್ಯತೆ ನೀಡಬೇಕು. ಸ್ವಚ್ಛತಾ ನಿರ್ವಹಣೆಗೆ ಸಂಬಂಧಿಸಿದಂತೆ ಮೇಲಧಿಕಾರಿಗಳ ಗಮನಕ್ಕೆ ತಂದು ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳಬೇಕು ಮತ್ತು ಹೊಸ ಬಸ್ ಮಾರ್ಗಗಳನ್ನು ಆರಂಭಿಸಲು ಯೋಜನೆ ರೂಪಿಸಬೇಕು ಎಂದು ಶಾಸಕರು ಸಾರಿಗೆ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಮಲ್ಲಿಕಾರ್ಜುನ ಬುರಡೀಕಟ್ಟಿ ಮಾತನಾಡಿ, ರಾಜ್ಯ ಸರ್ಕಾರ ಜಾರಿಗೊಳಿಸಿರುವ ಪಂಚ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪುವಂತೆ ಎಲ್ಲ ಅಧಿಕಾರಿಗಳು ಶ್ರಮಿಸಬೇಕು. ಸರ್ಕಾರದ ಉದ್ದೇಶ ಈಡೇರಿಸುವ ಕಾರ್ಯ ಮಾಡಬೇಕು ಎಂದರು.

ರಟ್ಟೀಹಳ್ಳಿ ತಹಸೀಲ್ದಾರ್ ಕೆ. ಗುರುಬಸವರಾಜ, ಇಒ ಲಕ್ಷ್ಮೀಕಾಂತ ಬೊಮ್ಮಣ್ಣನವರ, ಗ್ರೇಡ್-೨ ತಹಸೀಲ್ದಾರ್ ಶಿವನಗೌಡ ಸಿದ್ದನಗೌಡ್ರ, ಸಮಿತಿ ಸದಸ್ಯರಾದ ಪ್ರಭು ನಡುವಿನಮನಿ, ಸಂತೋಷ ಸುಳಗನ್ನಿ, ಕುಮಾರ ಪಾಟೀಲ, ಸುನೀತಾ ಕೊಡ್ಲೇರ, ರೂಪಾ ಮಾಸೂರ, ಶಿದ್ಧಲಿಂಗೇಶ್ವರ ತಂಬಾಕದ, ಸಾಸೀರ್‌ಖಾನ್ ಬಡಗಿ, ಕುಮಾರ ಪೂಜಾರ, ವೀರಭದ್ರಪ್ಪ ಬನ್ನಿಹಟ್ಟಿ, ಷಣ್ಮುಖಯ್ಯ ಮಳಿಮಠ, ದತ್ತಾತ್ರೇಯ ರಾಯ್ಕರ್, ಸರ್ಫರಾಜ ಮಾಸೂರ, ತಾಪಂ ಸಹಾಯಕ ನಿರ್ದೇಶಕ ನಾಗರಾಜಪ್ಪ ಹಡಗಲಿ, ಸಿಡಿಪಿಒ ಜಯಶ್ರೀ ಪಾಟೀಲ, ವಾಯವ್ಯ ಸಾರಿಗೆ ಘಟಕ ವ್ಯವಸ್ಥಾಪಕ ಮಂಜುನಾಥ ಹಡಪದ, ಉದ್ಯೋಗ ಅಧಿಕಾರಿ ಚೈತನ್ಯ ಮೊಹಿತೆ ಹಾಗೂ ಗ್ಯಾರಂಟಿ ಯೋಜನೆಗೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಇದ್ದರು.