ಸಾರಾಂಶ
ಹನೂರು: ಕುಡಿಯುವ ನೀರಿನ ಸಂಗ್ರಹಣೆ ಹಾಗೂ ಓವರ್ ಹೆಡ್ ಟ್ಯಾಂಕ್‌ಗಳ ಶುಚಿತ್ವ ಕಾಪಾಡುವ ಮೂಲಕ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಶಾಸಕ ಎಂ.ಆರ್. ಮಂಜುನಾಥ್ ತಾಕೀತು ಮಾಡಿದರು.
ಹನೂರು: ಕುಡಿಯುವ ನೀರಿನ ಸಂಗ್ರಹಣೆ ಹಾಗೂ ಓವರ್ ಹೆಡ್ ಟ್ಯಾಂಕ್‌ಗಳ ಶುಚಿತ್ವ ಕಾಪಾಡುವ ಮೂಲಕ ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವಂತೆ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗೆ ಶಾಸಕ ಎಂ.ಆರ್. ಮಂಜುನಾಥ್ ತಾಕೀತು ಮಾಡಿದರು.
ಪಟ್ಟಣದ ಲೋಕೋಪಯೋಗಿ ವಸತಿ ಗೃಹ ಸಮೀಪದ ಓವರ್ ಹೆಡ್ ಟ್ಯಾಂಕ್, ಪಶು ಆಸ್ಪತ್ರೆ ಬಳಿಯ ಓವರ್ ಹೆಡ್ ಟ್ಯಾಂಕ್, ಹುಲುಸು ಗುಡ್ಡೆ ಕಾವೇರಿ ಕುಡಿಯುವ ನೀರಿನ ಬೃಹತ್ ನೀರಿನ ಸಂಗ್ರಹಣ ಟ್ಯಾಂಕ್‌ಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಟ್ಟಣದ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಜಲ ಸಂಗ್ರಹಣೆ ಮತ್ತು ಸರಬರಾಜು ಟ್ಯಾಂಕ್‌ಗಳ ಶುಚಿತ್ವಕ್ಕೆ ಎರಡು ಮೂರು ದಿನಗಳಲ್ಲಿ ಕ್ರಮ ವಹಿಸಬೇಕು. ಟ್ಯಾಂಕ್‌ಗಳ ಒಳ ಮತ್ತು ಹೊರಗಡೆ ಅಶುಚಿತ್ವ ತಾಂಡವವಾಡದಂತೆ ಎಚ್ಚರಿಕೆ ವಹಿಸಬೇಕು. ನೀರು ಸರಬರಾಜು ಮಾಡುವ ಗೇಟ್‌ವಾಲ್‌ಗಳು ಭೂಮಿಯ ತಳ ಮಟ್ಟದಲ್ಲಿ ಇರುವುದರಿಂದ ಮಳೆ ಹಾಗೂ ಕೊಳಚೆ ನೀರು ಕುಡಿಯುವ ನೀರಿಗೆ ಸೇರುವ ಅಪಾಯವಿರುವುದರಿಂದ ಭೂಮಿಯ ಮೇಲ್ಮಟ್ಟದಲ್ಲಿ ಗೇಟ್‌ವಾಲ್‌ಗಳು ಇರುವಂತೆ ಕ್ರಮ ಕೈಗೊಳ್ಳಬೇಕೆಂದು ಪಟ್ಟಣ ಪಂಚಾಯತಿ ಮುಖ್ಯ ಅಧಿಕಾರಿ ಅಶೋಕ್ ಅವರಿಗೆ ಖಡಕ್ ಸೂಚನೆ ನೀಡಿದ್ದಾರೆ.ಈ ಸಂದರ್ಭದಲ್ಲಿ ಪಪಂ ಮುಖ್ಯಾಧಿಕಾರಿ ಅಶೋಕ್, ಉಪಾಧ್ಯಕ್ಷ ಆನಂದ ಕುಮಾರ್, ಸದಸ್ಯ ಸೋಮಣ್ಣ ಮುಖಂಡರಾದ ಸತೀಶ್, ರಾಜುಗೌಡ, ಮಾದೇವ್, ವಿಜಯ್ ಕುಮಾರ್, ಅಮೀನ್ ಇನ್ನಿತರರು ಇದ್ದರು.