ಸಾಲ ಮರುಪಾವತಿಗೆ ಬ್ಯಾಂಕಿನಿಂದ ನೋಟಿಸ್‌; ರೈತಸಂಘ ಗರಂ

| Published : Mar 23 2024, 01:02 AM IST / Updated: Mar 23 2024, 01:03 AM IST

ಸಾಲ ಮರುಪಾವತಿಗೆ ಬ್ಯಾಂಕಿನಿಂದ ನೋಟಿಸ್‌; ರೈತಸಂಘ ಗರಂ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿವ ನೀರು ಹಾಗೂ ಮೇವಿನ ಅಭಾವ ಸೃಷ್ಟಿಯಾಗಿದ್ದು, ಈ ಮದ್ಯೆ ಸಾಲ ವಸೂಲಾತಿಗೆ ಮುಂದಾದ ಖಾಸಗಿ ಬ್ಯಾಂಕ್‌ ಸಾಲ ಮರುಪಾವತಿಸುವಂತೆ ರೈತರಿಗೆ ನೋಟೀಸ್‌ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಮಸ್ಯೆ ಉಂಟಾದರೆ ರೈತ ಸಮೂಹ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವು ದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಎಚ್ಚರಿಕೆ ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಪಾವಗಡ ತಾಲೂಕಿನಲ್ಲಿ ಬರಗಾಲದ ಪರಿಸ್ಥಿತಿ ಎದುರಾಗಿದೆ. ಕುಡಿವ ನೀರು ಹಾಗೂ ಮೇವಿನ ಅಭಾವ ಸೃಷ್ಟಿಯಾಗಿದ್ದು, ಈ ಮದ್ಯೆ ಸಾಲ ವಸೂಲಾತಿಗೆ ಮುಂದಾದ ಖಾಸಗಿ ಬ್ಯಾಂಕ್‌ ಸಾಲ ಮರುಪಾವತಿಸುವಂತೆ ರೈತರಿಗೆ ನೋಟೀಸ್‌ ನೀಡುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ರೈತರಿಗೆ ಸಮಸ್ಯೆ ಉಂಟಾದರೆ ರೈತ ಸಮೂಹ ಲೋಕಸಭೆ ಚುನಾವಣೆಯಲ್ಲಿ ಮತದಾನ ಬಹಿಷ್ಕರಿಸುವುದಾಗಿ ತಾಲೂಕು ರೈತ ಸಂಘದ ಅಧ್ಯಕ್ಷ ಜಿ.ನರಸಿಂಹರೆಡ್ಡಿ ಎಚ್ಚರಿಕೆ ನೀಡಿದ್ದಾರೆ.ತಾಲೂಕು ರೈತ ಸಂಘದ ವತಿಯಿಂದ ಶುಕ್ರವಾರ ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಿ, ತಹಸೀಲ್ದಾರ್ ಸಂತೋಷ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದ ಬಳಿಕ ಮಾತನಾಡಿದರು.ತಾಲೂಕಿನಾದ್ಯಂತ ಬರವಿದ್ದು, ಜನತೆ ಅತ್ಯಂತ ಸಂಕಷ್ಟ ಸ್ಥಿತಿಯಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕೂಲಿಕಾರರಿಗೆ ಕೆಲಸವಿಲ್ಲದೇ ಗೊಳೆ ಹೋಗುವ ಸ್ಥಿತಿ ಎದುರಾಗಿದೆ. ಜೀವನಕ್ಕಾಗಿ ಇಲ್ಲಿ ಜನತೆ ಹೆಚ್ಚು ಹೈನುಗಾರಿಕೆ ಅ‍ವಲಂಬಿತರಾಗಿ ದ್ದಾರೆ. ಮೇವು ಕೂಡಾ ಸಿಗುತ್ತಿಲ್ಲ. ಮೇವು ಖರೀದಿ ಕೇಂದ್ರ ತೆರೆಯುವಲ್ಲಿ ಸರ್ಕಾರ ಮೀನಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಖಾಸಗಿ ಬ್ಯಾಂಕ್ ರೈತರ ಜತೆ ಜಲ್ಲಾಟವಾಡುತ್ತಿದ್ದು, ಸಾಲ ವಸೂಲಾತಿ ನೆಪದಲ್ಲಿ ರೈತರನ್ನು ಇಕ್ಕಟ್ಟಿಗೆ ಸಿಲುಕಿಸುತ್ತಿದೆ. ಬ್ಯಾಂಕ್ ಸಂಯಮದಿಂದ ವರ್ತಿಸಬೇಕು. ಇದೇ ರೀತಿ ಮುಂದುವರೆದರೆ ಮುಂದಿನ ದಿನದಲ್ಲಿ ರೈತ ಸಂಘದಿಂದ ಬ್ಯಾಂಕ್‌ ಬಳಿ ಉಗ್ರ ಹೋರಾಟಕ್ಕೆ ಅಣಿಯಾಗುವುದಾಗಿ ಎಚ್ಚರಿಸಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮನವಿ ಸ್ವೀಕರಿಸಿ ಮಾತನಾಡಿ, ಈಗಾಗಲೇ ಮೇವಿನ ವಿತರಣೆ ಕೇಂದ್ರ ತೆರೆಯಲು ಉದ್ದೇಶಿಸಿದ್ದು, ತಾಲೂಕಿನ ನಾಗಲಮಡಿಕೆ ಹೋಬಳಿ ಮತ್ತು ವೈ.ಎನ್ ಹೊಸಕೋಟೆ ಹೋಬಳಿಯ ಸೂಕ್ತ ಸ್ಥಳ ಗುರ್ತಿಸ ಲಾಗಿದೆ. ಇದೇ ರೀತಿ ಮೇವು ಖರೀದಿಗೆ ಈಗಾಗಲೇ ಟೆಂಡರ್ ಕರೆದಿದ್ದು, ಆ ಪ್ರಕ್ರಿಯೆ ಪೂರ್ಣಗೊಂಡಿದೆ. ಮೇವು ಸಾಗಾಣಿಕೆಗೆ ವರ್ಕ್ ಕಾರ್ಡ್ ಸಹ ವಿತರಿಸಲಾಗಿದೆ. ಯಾವುದೇ ರೀತಿಯ ಸಮಸ್ಯೆ ಉಂಟಾಗದ ರೀತಿಯಲ್ಲಿ ಕ್ರಮ ವಹಿಸಲು ಬದ್ಧರಾಗಿರುವುದಾಗಿ ಹೇಳಿದರು.ಗ್ರೇಡ್‌ 2 ತಹಸೀಲ್ದಾರ್ ನರಸಿಂಹಮೂರ್ತಿ, ತಾಲೂಕು ಪಶು ಸಂಗೋಪನೆ ಇಲಾಖೆ ಸಹಾಯಕ ನಿರ್ದೇಶಕ ಹೊರಕೇರಪ್ಪ, ರೈತ ಸಂಘದ ಕಾರ್ಯದರ್ಶಿ ಕೊಂಡನ್ನ, ಉಪಾಧ್ಯಕ್ಷ ಬಡನ್ನ, ಲಕ್ಷ್ಮೀನಾರಾಯಣ ಹಾಗೂ ಅನೇಕ ರೈತರು ಇದ್ದರು.