ಸಾರಾಂಶ
ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಪಟ್ಟಣದ ಬಸವ ನಗರದಲ್ಲಿನ ಶಿಥಿಲಾವಸ್ಥೆಯಲ್ಲಿರುವ ಖಾಸಗಿ ಕಟ್ಟಡದಲ್ಲಿರುವ ವಸತಿ ನಿಲಯಕ್ಕೆ ಹಾಗೂ ಬಿದರಕುಂದಿ ಆರ್.ಎಂ.ಎಸ್.ಎ ಶಾಲೆ ಹತ್ತಿರ ನೂತನವಾಗಿ ನಿರ್ಮಾಣಗೊಂಡಿರುವ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ಹಾಗೂ ಕರ್ನಾಟಕ ರಾಜ್ಯ ಸಾಬೂನು ಹಾಗೂ ಮಾರ್ಜಕ ನಿಗಮದ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಅವರು ಸೋಮವಾರ ದಿಢೀರ ಭೇಟಿ ನೀಡಿ ಪರಿಶೀಲಿಸಿದರು.ಕಳೇದ ಹಲವು ವರ್ಷಗಳಿಂದ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವುದಲ್ಲದೇ ಸಮರ್ಪಕ ಸೌಲಭ್ಯಗಳಿಲ್ಲದ ವಸತಿ ನಿಲಯದಲ್ಲಿ ನಾವು ಜೀವನ ಕಳೆಯುತ್ತಿದ್ದೇವೆ, ಈ ವಸತಿ ನಿಲಯದಲ್ಲಿ ಸುಮಾರು 120 ಜನ ವಿದ್ಯಾರ್ಥಿಗಳಿದ್ದೇವೆ. ಆದರೇ ಅದಕ್ಕೆ ತಕ್ಕಂತೆ ಕೊಠಡಿಗಳಿಲ್ಲ. ಒಟ್ಟು 4 ಕೊಠಡಿಗಳು 4 ಶೌಚಾಲಯಗಳು 4 ಬಾತ್‌ರೂಮ್ಗಳಿದ್ದು, ಒಂದೊಂದು ಕೊಠಡಿಯಲ್ಲಿ 20ರಿಂದ 30 ಜನ ವಿದ್ಯಾರ್ಥಿಗಳು ವಾಸ ಮಾಡುತ್ತಿದ್ದೇವೆ. ಕೆಲ ವಿದ್ಯಾರ್ಥಿಗಳು ಹೊರಗಡೆ ಬಾಡಿಗೆ ರೂಮ್ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. ಊಟಕ್ಕೆ ಮಾತ್ರ ಇಲ್ಲಿಗೆ ಬರುತ್ತಾರೆ, ವಸತಿ ನಿಲಯವಂತೂ ಈಗಲೋ ಆಗಲೋ ಬೀಳುವಂತಾಗಿದೆ, ಜೊತೆಗೆ ಮಳೆ ಬಂದರೆ ಸಂಪೂರ್ಣ ಸೋರುತ್ತದೆ ಇಂತಹ ಸಂಕಷ್ಟವಿದ್ದರೂ ಅಧಿಕಾರಿಗಳಿಂದ ಸಕಾರಾತ್ಮಕ ಸ್ಪಂದೆನೆ ಸಿಗುತ್ತಿಲ್ಲ. ಇದರಿಂದ ನಮ್ಮ ಶಿಕ್ಷಣಕ್ಕೆ ತೀವ್ರ ತೊಂದರೆ ಅನುಭವಿಸುವಂತಾಗಿದೆ. ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡುವ ಮೂಲಕ ನಮಗೆ ಅನೂಲಕ ಮಾಡಿಕೋಡಬೇಕು ಎಂದು ವಸತಿ ನಿಲಯದ ವಿದ್ಯಾರ್ಥಿಗಳು ಶಾಸಕರಲ್ಲಿ ಮನವಿ ಮಾಡಿಕೊಂಡರು.ವಿದ್ಯಾರ್ಥಿಗಳ ಮನವಿಗೆ ಸ್ಪಂದಿಸಿದ ಶಾಸಕರು, ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ತಮ್ಮ ತಂದೆ ತಾಯಿಯನ್ನುಬಿಟ್ಟು ವಿದ್ಯಾರ್ಜನೆಗಾಗಿ ಪಟ್ಟಣದ ವಸತಿ ನಿಲಯಕ್ಕೆ ಬಂದರೇ ವಿದ್ಯಾರ್ಥಿಗಳಿಗೆ ಅನಾನುಕೂಲ ಮಾಡಿದರೇ ಹೇಗೆ,? ವಿದ್ಯಾರ್ಥಿಗಳ ಭವಿಷ್ಯ ಹಾಳು ಮಾಡುವುದು ಸರಿಯಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. 2021ರಲ್ಲಿ ಶಂಕು ಸ್ಥಾಪನೆ ಗೊಂಡು ಕ್ರೈಸ್ಥ ಸಂಸ್ಥೆಯಯವರು 2023ರಲ್ಲಿ ಕಟ್ಟಡ ತಡವಾಗಿ ಮುಕ್ತಾಯಗೊಳಿಸಿದ್ದಾರೆ. ಜೊತೆಗೆ ನಮಗೆ ಸರ್ಕಾರದಿಂದ ಇನ್ನೂ ಬಾಕಿ ಹಣ ಪಾವತಿಸಿಲ್ಲ ಎನ್ನುವ ಕಾರಣಕ್ಕೆ ನಮ್ಮ ಇಲಾಖೆಗೆ ಕಟ್ಟಡ ಹಸ್ತಾಂತರ ಮಾಡಿಲ್ಲ ಎಂದು ಸಮಸ್ಯೆಯ ಕುರಿತು ತಾಲೂಕು ವಿಸ್ತಿರಣಾ ಅಧಿಕಾರಿ ಉಮೇಶ ಮಾಟೂರ ಅವರು ಶಾಸಕರ ಗಮನಕ್ಕೆ ತಂದರು.ಆಗ ಕ್ರೈಸ್ತ ಸಂಸ್ಥೆಯ ಎಂಜಿನಿಯರ್ ಬಸವರಾಜ ಹಾಗೂ ನಿರ್ದೇಶಕ ಜನಾರ್ಧನ ಅವರಿಗೆ ಶಾಸಕರು ದೂರವಾಣಿ ಮೂಲಕ ಮಾತನಾಡಿ ಆಗಲೇ ಹಣ ಮಂಜೂರಿ ಮಾಡಿಬೇಕಿತ್ತು. ನಾನು ಮುಖ್ಯಮಂತ್ರಿಗಳೋಂದಿಗೆ ಮಾತನಾಡಿ ಬಾಕಿ ಹಣವನ್ನು ಬಿಡುಗಡೆಗೊಳಿಸುತ್ತೇವೆ. ಆದರೇ ಶಾಲಾ ವಿದ್ಯಾರ್ಥಿಗಳಿಗೆ ಮತ್ತು ಅವರು ಶಿಕ್ಷಣಕ್ಕೆ ತೊಂದರೆಯಾಗಬಾರದು. ಹೊಸ ಕಟ್ಟಡದ ವಸತಿ ಶಾಲೆಗೆ ಸ್ಥಳಾಂತರ ಮಾಡುವ ಪ್ರಕ್ರಿಯೇ ಪ್ರಾರಂಭಿಸಬೇಕು. ಇಲ್ಲದಿದ್ದರೇ ಅನಾಹುತ ಸಂಭವಿಸಿದರೆ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ತಾಲೂಕ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ಶಿವಲೀಲಾ ಕೊಣ್ಣೂರ ಹಾಗೂ ಉಮೇಶ ಮಾಟೂರ ಅವರಿಗೆ ಎಚ್ಚರಿಸಿದರು. ಅಲ್ಲದೇ, ಶೀಘ್ರ ವಿದ್ಯಾರ್ಥಿಗಳಿಗ ಸೂಕ್ತ ವ್ಯವಸ್ಥೆ ಮಾಡುವಂತೆ ಸೂಚಿಸಿದರು.