ಸಾರಾಂಶ
ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲಾಧಿಕಾರಿ ಎಂ.ಆರ್.ರವಿ ಗುರುವಾರ ನಗರದ ವಿವಿಧೆಡೆಗೆ ದಿಢೀರ್ ಭೇಟಿ ನೀಡಿ ಕಸದ ಸಮಸ್ಯೆ, ಪಾದಚಾರಿ ಮಾರ್ಗದಲ್ಲಿ ಅಂಗಡಿ ಮಾಲೀಕರು ಒತ್ತುವರಿ ವೀಕ್ಷಿಸಿ ತೆರವುಗೊಳಿಸುವಂತೆ ನಗರಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದರು.ನಗರದ ಟೇಕಲ್ ಮುಖ್ಯರಸ್ತೆ, ಬಂಗಾರಪೇಟೆ ಮುಖ್ಯರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ರಸ್ತೆ ಬದಿಗಳಲ್ಲಿರುವ ಕಸದ ರಾಶಿ ಕಂಡು ನಗರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರು.ಸಿಸಿ ಕ್ಯಾಮೆರಾ ಅಳವಡಿಸಿ
ಆಗ ಅಧಿಕಾರಿಗಳು, ನಾವು ಒಂದು ಕಡೆಯಿಂದ ಸ್ವಚ್ಛತೆ ಮಾಡಿಕೊಂಡು ಬರುತ್ತೇವೆ, ಆದರೆ ಸಾರ್ವಜನಿಕರು ಪ್ಲಾಸ್ಟಿಕ್ ಕವರ್‌ಗಳಲ್ಲಿ ಕಸ ತುಂಬಿಕೊಂಡು ರಸ್ತೆಬದಿಯಲ್ಲಿ ಬಿಸಾಡಿ ಹೋಗುತ್ತಾರೆ ಎಂದರು. ಅದಕ್ಕೆ ಜಿಲ್ಲಾಧಿಕಾರಿಯು ಎಲ್ಲೆಲ್ಲಿ ಸಾರ್ವಜನಿಕರು ಕಸ ತಂದು ಹಾಕುತ್ತಾರೆ ಅಲ್ಲೆಲ್ಲಾ ಸಿಸಿ ಕ್ಯಾಮೆರಾ ಅಳವಡಿಸಬೇಕೆಂದು ನಗರಸಭೆ ಆಯುಕ್ತ ಪ್ರಸಾದ್‌ಗೆ ಸೂಚನೆ ನೀಡಿದರು.ಎಲ್ಲೆಂದರಲ್ಲಿ ಕಸ ಸುರಿಯದಂತೆ ಪ್ರಚಾರ ಮಾಡಿ. ಆದ್ಯಾಗೂ ಕಸವನ್ನು ರಸ್ತೆಬದಿಯಲ್ಲಿ ಕಸ ತಂದು ಹಾಕುವ ಸಾರ್ವಜನಿಕರ ಮೇಲೆ ಕಾನೂನು ರೀತ್ಯಾ ಕ್ರಮಕೈಗೊಳ್ಳಿ ಎಂದು ಹೇಳಿದರು.ರಸ್ತೆ ಬದಿ ಬಸ್ಸು ನಿಲ್ಲಿಸಬೇಡಿಟೇಕಲ್ ರಸ್ತೆಯ ಬದಿಯಲ್ಲಿ ಖಾಸಗಿ ಕಂಪನಿಯ ಕಾರ್ಮಿಕರನ್ನು ಕರೆದುಕೊಂಡು ಹೋಗುವ ವಾಹನಗಳನ್ನು ನಿಲ್ಲಿಸಿರುವುದನ್ನು ಕಂಡು ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲವೇ ಎಂದು ಪ್ರಶ್ನಿಸಿದರು. ಅದರಲ್ಲೂ ಈ ರಸ್ತೆಯಲ್ಲಿ ಶಾಲೆಯಿರುವುದರಿಂದ ಮಕ್ಕಳಿಗೂ ತೊಂದರೆ ಆಗುವುದರೊಂದಿಗೆ ಅಪಘಾತಗಳಾಗುವ ಸಂಭವವಿರುತ್ತದೆ. ಕಾರ್ಮಿಕನ್ನು ಕರೆದುಕೊಂಡು ಹೋಗುವ ವೇಳೆಗೆ ಬರಬೇಕೇ ಹೊರತು ಅದಕ್ಕೂ ಮೊದಲು ರಸ್ತೆ ಬದಿಯಲ್ಲಿ ಬಸ್ಸುಗಳನ್ನು ನಿಲ್ಲಿಸಿ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದರೆ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಟೇಕಲ್ ರಸ್ತೆಯಲ್ಲಿರುವ ಅಂಗಡಿ ಮಾಲೀಕರು ಸಾರ್ವಜನಿಕರು ಓಡಾಡುವ ಪಾದಚಾರಿ ಮಾರ್ಗದ ಮೇಲೆ ಸರಕುಸರಂಜಾಮು ಇಟ್ಟಿಕೊಂಡಿರುವುದನ್ನು ಕಂಡ ಜಿಲ್ಲಾಧಿಕಾರಿ ಕೆಂಡಾಮಂಡಲರಾದರು. ನಾವು ಸಾರ್ವಜನಿಕರು ಓಡಾಡುವುದಕ್ಕೆ ಪಾದಚಾರಿ ಮಾರ್ಗ ನಿರ್ಮಿಸಿರುವುದು ನೀವುಗಳು ನಿಮ್ಮ ವಸ್ತುಗಳನ್ನು ಇಟ್ಟು ಮಾರ್ಗ ಒತ್ತುವರಿ ಮಾಡಿಕೊಂಡರೆ ಸಾರ್ವಜನಿಕರು ಓಡಾಡುವುದು ಎಲ್ಲಿ ಎಂದು ಜಿಲ್ಲಾಧಿಕಾರಿಗಳು ಪ್ರಶ್ನಿಸಿದರು.
ಅಂಗಡಿ ಮಾಲೀಕರಿಗೆ ಎಚ್ಚರಿಕೆಫುಟ್ಪಾತ್ ಒತ್ತುವರಿಯನ್ನು ಕೂಡಲೇ ತೆರವುಗೊಳಿಸಬೇಕು. ಪಾದಚಾರಿ ಮಾರ್ಗದಲ್ಲಿ ಒಂದು ವಸ್ತುವೂ ಕಾಣಿಸಬಾರದು. ಕಾನೂನು ಮೀರಿದರೆ ಅಂತಹ ಅಂಗಡಿಗಳ ಲೈಸೆನ್ಸ್ ರದ್ದುಪಡಿಸಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡಿದರು.ಕೆಲ ಪೌರಕಾರ್ಮಿಕರು ಯಾವುದೇ ರಕ್ಷಾ ಕವಚಗಳನ್ನು ಧರಿಸದೇ ಕಸ ತೆರವು ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿಯು ತಮ್ಮ ಆರೋಗ್ಯ ದೃಷ್ಟಿಯಿಂದ ರಕ್ಷಾಕವಚಗಳನ್ನು ಸರ್ಕಾರದಿಂದ ನೀಡಿದ್ದು, ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಸೂಚಿಸಿದರು.ಎಸ್‌ಎನ್‌ಆರ್ ಆಸ್ಪತ್ರೆ ಮಾರ್ಗದ ಹೋಟೆಲ್‌ಗಳ ಮಾಲೀಕರಿಗೆ ಸ್ವಚ್ಛತೆ ಕಾಪಾಡಿಕೊಳ್ಳದಿದ್ದರೆ ತೆರವುಗೊಳಿಸುವ ಎಚ್ಚರಿಕೆ ನೀಡಿದರು.