ಸಾರಾಂಶ
ಕನ್ನಡಪ್ರಭ ವಾರ್ತೆ ಮಡಿಕೇರಿ
ಭಾಗಮಂಡಲದ ಜನರ ಹಲವು ವರ್ಷಗಳ ಬೇಡಿಕೆಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಸ್ಪಂದಿಸಿದ್ದು, ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಟೆಂಡರ್ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.ಭಾಗಮಂಡಲದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡುವ ಸಂದರ್ಭ ವಿದ್ಯುತ್ ಉಪಕೇಂದ್ರಕ್ಕಾಗಿ ಮೀಸಲಿಟ್ಟಿರುವ ಜಾಗವನ್ನು ಅವರು ಪರಿಶೀಲಿಸಿದರು.
ಪದಕಲ್ಲು ಗ್ರಾಮದಲ್ಲಿ 3 ಎಕರೆ ಪ್ರದೇಶದಲ್ಲಿ 66/11 ಕೆ.ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆಯಾಗಲಿದ್ದು, ಸ್ಥಳ ಪರಿಶೀಲಿಸಿದ ಶಾಸಕರು, ಟೆಂಡರ್ ಪ್ರಕ್ರಿಯೆಗೆ ಸೂಚನೆ ನೀಡಿದರು.ಶಾಸಕರ ಆಪ್ತ ಸಹಾಯಕರಾದ ನಿವೃತ್ತ ಅಧಿಕಾರಿ ಮುತ್ತಣ್ಣ ಹಾಗೂ ಕುಂದಚೇರಿ ಗ್ರಾ.ಪಂ. ಸದಸ್ಯ ಕೆ.ಯು.ಹಾರಿಸ್ ಪದಕಲ್ಲು ಯೋಜನೆ ಕುರಿತು ಮಾಹಿತಿ ನೀಡಿದರು.
ಸ್ವಿಚಿಂಗ್ ಸ್ಟೇಷನ್ ಸ್ಥಾಪನೆ ಮತ್ತು ಮುಖ್ಯ ವಿದ್ಯುತ್ ಮಾರ್ಗ ಕಾಮಗಾರಿ ಆಗುವಲ್ಲಿಯವರೆಗೆ ಸೋಲಾರ್ ಘಟಕ ನಿರ್ಮಾಣಗೊಳ್ಳಲಿದೆ. ಹಲವು ವರ್ಷಗಳ ಬೇಡಿಕೆ ಈಡೇರಿಸುತ್ತಿರುವ ಬಗ್ಗೆ ಗ್ರಾಮಸ್ಥರು ಶಾಸಕ ಪೊನ್ನಣ್ಣ ಅವರಿಗೆ ಕೃತಜ್ಞತೆ ಸಲ್ಲಿಸಿದರು.ಅಭಿವೃದ್ಧಿ ಕಾಮಗಾರಿ:
ಚೆಟ್ಟಿಮಾನಿ (ಕುಂದಚೇರಿ) ಪಂಚಾಯಿತಿ ವ್ಯಾಪ್ತಿಯ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಇದೇ ಸಂದರ್ಭ ಚಾಲನೆ ನೀಡಿದರು.ಕೋಪಟ್ಟಿ, ಸಿಂಗತ್ತೂರು, ಕುಂದಚೇರಿ ಮತ್ತು ಪದಕಲ್ಲು ಗ್ರಾಮದ 1.26 ಕೋಟಿ ರು. ವೆಚ್ಚದ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ಧಿಗೆ ಪದಕಲ್ಲು ಗ್ರಾಮದ ನವಗ್ರಾಮದಲ್ಲಿ (ನಂಗಾರು ರಸ್ತೆ) ಭೂಮಿಪೂಜೆ ನೆರವೇರಿಸಿದರು.
ನಂತರ ಪದಕಲ್ಲು 61/3ರ 85 ನಿವೇಶನ ವೀಕ್ಷಿಸಿ, ವಸತಿ ರಹಿತರ ಜೊತೆ ಚರ್ಚಿಸಿದರು. ತಕ್ಷಣ ಹಕ್ಕುಪತ್ರ ಮತ್ತು ಮನೆ ನಿರ್ಮಾಣಕ್ಕೆ ಸರ್ಕಾರದಿಂದ ಸಹಾಯಧನ ನೀಡುವುದಾಗಿ ಭರವಸೆ ನೀಡಿದರು.ನಂತರ ಜಲ್ ಜೀವನ್ ಮಿಷನ್ (ಜೆಜೆಎಂ) ನಡಿ ಕುಡಿಯುವ ನೀರಿನ ಕಾಮಗಾರಿಯನ್ನು ಪದಕಲ್ಲು ಗ್ರಾಮದ ನವಗ್ರಾಮದಲ್ಲಿ ಪರಿಶೀಲಿಸಿ ಗುತ್ತಿಗೆದಾರರಾದ ಈ.ಕೆ.ಖಾದರ್ ಹಾಗೂ ಈ.ಕೆ.ಅಬ್ದುಲ್ಲ ಅವರ ಜೊತೆ ಸಮಾಲೋಚನೆ ನಡೆಸಿದರು.
ಜೆಜೆಎಂ ಹಾಗೂ ಚೆಸ್ಕಾಂ ಅಧಿಕಾರಿಗಳ ಸಭೆ ನಡೆಸಿ ಕುಡಿಯುವ ನೀರಿನ ಮೋಟಾರ್ ಮತ್ತು ಘಟಕಕ್ಕೆ ವಿದ್ಯುತ್ ಸಂಪರ್ಕ ನೀಡುವುದಾಗಿ ಭರವಸೆ ನೀಡಿದರು.ಕುಂದಚೇರಿಯ ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಕಟ್ಟಡದ ಮುಂದುವರಿದ ಭಾಗಕ್ಕೆ ಅನುದಾನ ನೀಡುವಂತೆ ಮನವಿ ಸಲ್ಲಿಸಿದರು. ಕಟ್ಟಡ ಕಾಮಗಾರಿಗೆ ಅನುದಾನ ಒದಗಿಸಿಕೊಡುವ ಭರವಸೆ ನೀಡಿದ ಶಾಸಕರು, ಕಾಟಕೇರಿಯಿಂದ ಕರಿಕೆಗೆ ಸಾಗುವ ಹೆದ್ದಾರಿ ಮಾರ್ಗದ ಕಾಮಗಾರಿ ಕುರಿತು ಸಮಾಲೋಚನೆ ನಡೆಸಿದರು.
ಪ್ರಶಾಂತ್ ಕುಮಾರ್ ಪೂಜಾ ಕಾರ್ಯವನ್ನು ನಡೆಸಿಕೊಟ್ಟರು. ಗ್ರಾ.ಪಂ ಸದಸ್ಯ ಹ್ಯಾರಿಸ್ ಸ್ವಾಗತಿಸಿದರು.ಪಂಚಾಯಿತಿ ಅಧ್ಯಕ್ಷ ಪಿ.ಬಿ.ದಿನೇಶ್, ಉಪಾಧ್ಯಕ್ಷ ಎಚ್.ಸಿ.ಬೇಬಿ, ಸದಸ್ಯರಾದ ವಿಶು ಪ್ರವೀಣ್ ಕುಮಾರ್, ಡಿಸಿಸಿ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಬ್ಲಾಕ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಮುಖಂಡರಾದ ತೆನ್ನಿರಾ ಮೈನಾ, ಕೆದಂಬಾಡಿ ಸುರೇಂದ್ರ, ಕೆ.ಟಿ.ರಮೇಶ್, ಕೆ.ಎಂ.ಇಸ್ಮಾಯಿಲ್, ಮಂಗೇರಿರ ಜಗದೀಶ್, ಕೀರ್ತಿ ಉತ್ತಪ್ಪ, ಸಿ.ಎಸ್.ವೇಣುಗೋಪಾಲ್, ಮೂವನ ಶಿವರಾಮ್, ದೊಡ್ಡೇರ ರಘು, ನಾಗೇಂದ್ರ, ಕೆ.ಕೆ.ಹಂಸ, ಡಿ.ರಂಜಿತ್, ವಲಯ ಅಧ್ಯಕ್ಷ ಕೆ.ಎಂ.ಹರೀಶ್, ಗುತ್ತಿಗೆದಾರ ಸಿ.ಎಸ್.ರಶೀದ್, ನಮೀಕಾ ಕಿರಣ್, ಡಿಸಿಸಿ ಸದಸ್ಯರಾದ ಸುನಿಲ್ ಪತ್ರಾವೋ, ಲತೀಫ್, ವೆಂಕಟೇಶ್, ಸುರೇಶ್, ಗೌರಿ, ಕಿರಣ್ ಮಂಜು, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳಾದ ಸುಮೀತ ಗಂಗಮ್ಮ, ಎಂ.ಬಿ.ಕೆ.ಪುಷ್ಪ, ರುಪಾಶಿವಕುಮಾರ್, ಬೆಳ್ಳಿಪ್ಪಾಡಿ ಪುಟ್ಟ ಜಯಪ್ರಕಾಶ್, ಪಿ.ನವೀನ್, ಅಚ್ಚಪಂಡ ಸುಬ್ರಮಣಿ, ರೀನಾ ಸುರೇಶ್, ಯುವ ನಾಯಕರಾದ ತಮೀಮ್, ಸಿ.ಕೆ.ಫೈಸಲ್, ಕೆ.ಆರ್.ಪ್ರಶು, ಹಿರಿಯರಾದ ಕಡ್ಯದ ಗೋಪಾಲ್, ನಂಗಾರು ಗೋಪಾಲ್ (ವಿಜಯ) ಹಾಗೂ ಚೆಟ್ಟಿಮಾನಿ, ಚೇರಂಬಾಣೆ, ಭಾಗಮಂಡಲ ಗ್ರಾಮದ ಪ್ರಮುಖರು, ನವಗ್ರಾಮದ ಫಲಾನುಭವಿಗಳು ಹಾಜರಿದ್ದರು.