ಪದವೀಧರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ.6 ಕಡೆಯ ದಿನ
KannadaprabhaNewsNetwork | Published : Oct 26 2023, 01:00 AM IST
ಪದವೀಧರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ.6 ಕಡೆಯ ದಿನ
ಸಾರಾಂಶ
ಪದವೀಧರ ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಲು ನ.6 ಕಡೆಯ ದಿನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು ನ. 6 ಕಡೆ ದಿನಾಂಕವಾಗಿದೆ ಎಂದು ತಹಸೀಲ್ದಾರ್ ಕಚೇರಿ ಪ್ರಕಟಣೆ ತಿಳಿಸಿದೆ. ನವೆಂಬರ್ 2020 ರ ಹಿಂದೆ ಪದವಿ ಪಡೆದ ಪದವೀಧರರು ಹಾಗೂ ಈ ಹಿಂದೆ ಪದವೀಧರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿನ ನೋಂದಾಯಿತ ಮತದಾರರು ಹೊಸದಾಗಿ ನಮೂನೆ-18 ರಲ್ಲಿ ಭಾವ ಚಿತ್ರದೊಂದಿಗೆ ಪದವಿ ಪ್ರಮಾಣ ಪತ್ರ ಅಥವಾ ಪದವಿ ಪೂರ್ವ ಅಂಕಪಟ್ಟಿಯನ್ನು ಗೆಜೆಟೆಡ್ ಅಧಿಕಾರಿಯಿಂದ ಧೃಢೀಕರಿಸಿ ಅರ್ಜಿಯನ್ನು ಅವರ ಸಾಮಾನ್ಯ ವಾಸಸ್ಥಳದ ಅಂದರೆ ಆಹಾರ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಪ್ರತಿಯನ್ನು ಸ್ವಯಂ ಧೃಢೀಕರಿಸಿ ತಹಸೀಲ್ದಾರ್ ಕಚೇರಿಗೆ ಖುದ್ದು ಸಲ್ಲಿಸಿ ಮತದಾರರ ಪಟ್ಟಿಗೆ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ನೋಂದಾಯಿಸಲು 2023 ನವೆಂಬರ್ ಗಿಂತ ಹಿಂದಿನ 6 ವರ್ಷಗಳು ಅಂದರೆ ನವೆಂಬರ್ 2017 ರಿಂದ 2023 ರ ವರೆಗಿನ ಶಿಕ್ಷಕರು ಕನಿಷ್ಟ 3 ವರ್ಷ ಭೋದನಾ ವೃತ್ತಿಯಲ್ಲಿ ತೊಡಗಿರುವ ಹಾಗೂ ಪ್ರೌಢ ಶಾಲಾ ಶಿಕ್ಷಕ ವೃತ್ತಗಿಂತ ಕಡಿಮೆ ಇಲ್ಲದ ಅರ್ಹರಿಗೆ ಅವಕಾಶವಿದ್ದು, ನಮೂನೆ 19ರಲ್ಲಿ ಅರ್ಜಿಯನ್ನು ಅವರ ಸಾಮಾನ್ಯ ವಾಸ ಸ್ಥಳ ಅಂದರೆ ಆಹಾರ ಪಡಿತರ ಚೀಟಿ, ಮತದಾರರ ಗುರುತಿನ ಚೀಟಿ ಅಥವಾ ಆಧಾರ್ ಕಾರ್ಡ್ ಪ್ರತಿ ಯನ್ನು ಸ್ವಯಂ ಧೃಢೀಕರಿಸಿ ತಹಸೀಲ್ದಾರ್ ಅವರ ಕಚೇರಿಗೆ ಖುದ್ದು ಸಲ್ಲಿಸಿ ಶಿಕ್ಷಕರ ಕ್ಷೇತ್ರದ ಮತದಾರರ ಪಟ್ಟಿಗೆ ಹೆಸರನ್ನು ನೋಂದಣಿ ಮಾಡಿಕೊಳ್ಳುವುದು. ನಮೂನೆ-18 ಹಾಗೂ ನಮೂನೆ-19 ರ ಅರ್ಜಿಗಳು ತಾಲ್ಲೂಕು ಕಚೇರಿಯಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.