ಈಗ ನ್ಯಾಯಾಲಯಗಳು ಎಲ್ಲಿವೆ?, ನ್ಯಾಯಾಲಯ ಇಲ್ಲಿದೆ....!

| Published : Nov 11 2024, 12:51 AM IST

ಸಾರಾಂಶ

ಈಗ ನ್ಯಾಯಾಲಯಗಳು ಎಲ್ಲಿವೆ? ಎಂದು ಕಕ್ಷಿದಾರರು ಹುಡುಕಾಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪರಿಣಾಮ ಈಗ ಯಾವ ನ್ಯಾಯಾಲಯಗಳು ಎಲ್ಲಿವೆ? ಎಂಬ ನಾಮಫಲಕ ಹಾಕಲಾಗಿದೆ. ಮೈಸೂರಿನಲ್ಲಿ ಒಟ್ಟು 43 ನ್ಯಾಯಾಲಯಗಳಿವೆ. ಚಾಮರಾಜಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡವಿದೆ.ಈ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 23 ನ್ಯಾಯಾಲಯಗಳಿವೆ.

ಕನ್ನಡಪ್ರಭ ವಾರ್ತೆ ಮೈಸೂರು

ಈಗ ನ್ಯಾಯಾಲಯಗಳು ಎಲ್ಲಿವೆ? ಎಂದು ಕಕ್ಷಿದಾರರು ಹುಡುಕಾಡುವ ಪರಿಸ್ಥಿತಿ ಇಲ್ಲ. ಏಕೆಂದರೆ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಪರಿಣಾಮ ಈಗ ಯಾವ ನ್ಯಾಯಾಲಯಗಳು ಎಲ್ಲಿವೆ? ಎಂಬ ನಾಮಫಲಕ ಹಾಕಲಾಗಿದೆ.

ಮೈಸೂರಿನಲ್ಲಿ ಒಟ್ಟು 43 ನ್ಯಾಯಾಲಯಗಳಿವೆ. ಚಾಮರಾಜಪುರಂ ನ ಕೃಷ್ಣರಾಜ ಬೂಲ್ ವಾರ್ಡ್ ರಸ್ತೆಯಲ್ಲಿ ನ್ಯಾಯಾಲಯಗಳ ಪಾರಂಪರಿಕ ಕಟ್ಟಡವಿದೆ.ಈ ಪಾರಂಪರಿಕ ನ್ಯಾಯಾಲಯಗಳ ಆವರಣದಲ್ಲಿ ಒಟ್ಟು 23 ನ್ಯಾಯಾಲಯಗಳಿವೆ.

ಅವುಗಳೆಂದರೆ...

*ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಗಳು (8)

*ಪೋಕ್ಸೋ ವಿಶೇಷ ನ್ಯಾಯಾಲಯ (1)

*ಲಘು ವ್ಯವಹಾರಗಳ ನ್ಯಾಯಾಲಯಗಳು (2)

*ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ (11)

(ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯವೂ ಸೇರಿದಂತೆ ಒಂದನೇ ಹೆಚ್ಚುವರಿಯಿಂದ 10ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯಗಳು)

*ಕಾರ್ಮಿಕ ನ್ಯಾಯಾಲಯ (1)

ಜಯನಗರದ ಮಳಲವಾಡಿಯಲ್ಲಿ ನಿರ್ಮಾಣವಾಗಿರುವ ನೂತನ ನ್ಯಾಯಾಲಯಗಳ ಸಂಕೀರ್ಣದಲ್ಲಿ ಒಟ್ಟು 20 ನ್ಯಾಯಾಲಯಗಳಿವೆ.

ಅವುಗಳೆಂದರೆ...

*ಕೌಟುಂಬಿಕ ನ್ಯಾಯಾಲಯ(4)

*ಹಿರಿಯ ಸಿವಿಲ್ ಜಡ್ಜ್ ಮತ್ತು ಸಿಜೆಎಂ ನ್ಯಾಯಾಲಯ(4)

*ಹಿರಿಯ ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ (4)

*ಸಿವಿಲ್ ಜಡ್ಜ್ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ(3)

(11ರಿಂದ 13ನೇ ಹೆಚ್ಚುವರಿ ಸಿವಿಲ್ ಜಡ್ಜ್ ನ್ಯಾಯಾಲಯ)

*ಜೆ ಎಂ ಎಫ್ ಸಿ 2ನೇ ನ್ಯಾಯಲಯ(1)

*ಜೆ ಎಂ ಎಫ್ ಸಿ 3ನೇ ನ್ಯಾಯಾಲಯ(1)

*ಜೆ ಎಂ ಎಫ್ ಸಿ 4ನೇ ನ್ಯಾಯಾಲಯ(1)

*ಜೆ ಎಂ ಎಫ್ ಸಿ 5ನೇ ನ್ಯಾಯಾಲಯ (1)

*ಔದ್ಯಮಿಕ ನ್ಯಾಯಾಧೀಕರಣ(1)

ಆದರೆ, ಯಾವ ಯಾವ ನ್ಯಾಯಾಲಯಗಳು ಎಲ್ಲೆಲ್ಲಿವೆ ಎಂಬ ಮಾಹಿತಿ ಇರದೆ ಸಾರ್ವಜನಿಕರು ಪರದಾಡುತ್ತಿರುವ ವಿಚಾರವಾಗಿ ''ಕನ್ನಡಪ್ರಭ''ದಲ್ಲಿ ವರದಿಯಾಗಿತ್ತು. ಇದರ ಪರಿಣಾಮವಾಗಿ ಶನಿವಾರ ಮೈಸೂರಿನ ಮಳಲವಾಡಿಯಲ್ಲಿರುವ ನೂತನ ನ್ಯಾಯಾಲಯಗಳ ಪ್ರವೇಶ ದ್ವಾರದ ಬಳಿ ಯಾವ ನ್ಯಾಯಾಲಯ ಎಲ್ಲಿದೆ ಎಂಬ ವಿವರವುಳ್ಳ ಫಲಕವನ್ನು ಕರ್ನಾಟಕದ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಮೈಸೂರು ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶರಾದ ಶಂಕರ್ ಗಣಪತಿ ಪಂಡಿತ್ ಅವರು ಅನಾವರಣಗೊಳಿಸಿದರು. ಅವರೊಂದಿಗೆ ಮೈಸೂರಿನ ಪ್ರಧಾನ ಜಿಲ್ಲಾ ನ್ಯಾಯಾಧೀಶರಾದ ರವೀಂದ್ರ ಹೆಗಡೆ ಹಾಗೂ ಎಲ್ಲಾ ನ್ಯಾಯಾಧೀಶರು ಹಾಗೂ ವಕೀಲರ ಸಂಘದ ಪದಾಧಿಕಾರಿಗಳು ಹಾಜರಿದ್ದರು.

ಇದರೊಂದಿಗೆ ಮಳಲವಾಡಿಯ ನೂತನ ನ್ಯಾಯಾಲಯಗಳ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಉದ್ಘಾಟಿಸಲಾಯಿತು.ಫಲಕದಲ್ಲಿ ಯಾವ ನ್ಯಾಯಾಲಯ ಎಲ್ಲಿದೆ ಎಂಬ ವಿವರದೊಂದಿಗೆ ಕ್ಯೂ ಆರ್ ಕೋಡ್ ಕೂಡ ನೀಡಿರುವುದರಿಂದ ನ್ಯಾಯಾಲಯವನ್ನು ಹುಡುಕಿಕೊಂಡು ಬರುವ ಸಾರ್ವಜನಿಕರು,ಪೊಲೀಸರು, ವಕೀಲರು ಹಾಗೂ ಅಧಿಕಾರಿಗಳಿಗೆ ಅನುಕೂಲವಾಗಿದೆ. ನ್ಯಾಯಾಲಯದ ಆವರಣದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ತೆರೆಯಬೇಕೆಂಬ ನಮ್ಮ ಬೇಡಿಕೆ ಈಡೇರಿದುದು ಸಂತಸ ತಂದಿದೆ.

-ಪಿ.ಜೆ. ರಾಘವೇಂದ್ರ, ನ್ಯಾಯವಾದಿ, ಮೈಸೂರು