ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದು, ಮೊಬೈಲ್ ಬಳಕೆ ಮಾಡುವಲ್ಲೆ ಇವರ ಸಮಯ ಕಳೆದು ಹೋಗುತ್ತಿದೆ ಎಂದು ಪತ್ರಕರ್ತ ಮಂಜುನಾಥ ಗೌರಕ್ಕಳವರ ಹೇಳಿದರು.

ರಾಣಿಬೆನ್ನೂರು: ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಕೊರತೆ ಎದ್ದು ಕಾಣುತ್ತಿದ್ದು, ಮೊಬೈಲ್ ಬಳಕೆ ಮಾಡುವಲ್ಲೆ ಇವರ ಸಮಯ ಕಳೆದು ಹೋಗುತ್ತಿದೆ ಎಂದು ಪತ್ರಕರ್ತ ಮಂಜುನಾಥ ಗೌರಕ್ಕಳವರ ಹೇಳಿದರು.

ನಗರದ ಕರ್ನಾಟಕ ಸಂಘದ ಆಲೂರು ವೆಂಕಟರಾವ್ ರಂಗಮಂದಿರದಲ್ಲಿ ಏರ್ಪಡಿಸಿದ್ದ ನಾಡಹಬ್ಬ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಸ್ಥಳೀಯ ರಾಮಲಿಂಗೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಮಂಜುನಾಥ ಕೆರೂಡಿ ಮಾತನಾಡಿ, ಧಾರ್ಮಿಕ ಕೆಲಸಗಳ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳ ಉತ್ತರೋತ್ತರ ಅಭಿವೃದ್ಧಿ ಮಾಡಬೇಕು. ಅದಕ್ಕಾಗಿ ಯುವಜರಲ್ಲಿ ಧಾರ್ಮಿಕತೆಯ ಮಹತ್ವ ಬಿತ್ತಬೇಕಾಗಿರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ ಎಂದರು. ಕರ್ನಾಟಕ ಸಂಘದ ಅಧ್ಯಕ್ಷ ಸಂಜೀವ ಶಿರಹಟ್ಟಿ ಅಧ್ಯಕ್ಷತೆ ವಹಿಸಿದ್ದರು.

ರಾಜ್ಯ ಪ್ರಶಸ್ತಿ ಪುರಸ್ಕೃತ ದಾವಣಗೆರೆ ಬಸಾಪುರದ ಶಶಿಧರ ಬಸವ ಕಲಾಲೋಕ ತಂಡದವರು ಪ್ರಸ್ತುತ ಪಡಿಸಿದ ಜಾನಪದ ಸಂಜೆ ಪ್ರೇಕ್ಷಕರಿಗೆ ಮನರಂಜನೆಯ ಜೊತೆಗೆ ನೀತಿ ಬೋಧನೆಯನ್ನು ಮಾಡಿತು. ವಿಭಾ ಜೋಶಿ, ಶ್ರೀನಿಧಿ ಶಿರಹಟ್ಟಿ, ಶ್ರೀನಿವಾಸ ಏಕಬೋಟೆ. ಸಂಕಪ್ಪ ಮಾರನಾಳ, ಸತ್ಯನಾರಾಯಣ ವಿಶ್ವರೂಪ, ಸೀತಾರಾಂ ಕಣೇಕಲ್, ಸಂದೀಪ ರೂಪನಗುಡಿ, ಮಹೇಶ ನಾಡಿಗೇರ, ಚಿದಂಬರ ಜೋಶಿ, ವಿಜಯಕುಮಾರ ಜೋಶಿ ಮತ್ತಿತರರಿದ್ದರು.