ಸಾರಾಂಶ
ತಾಲೂಕಿನ ನೊಣವಿನಕೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರಮಟ್ಟದ ಎನ್‌ಕ್ಯೂಎಎಸ್‌ನಲ್ಲಿ ಅರ್ಹತೆ ಪಡೆದುಕೊಂಡಿದೆ
ಕನ್ನಡಪ್ರಭ ವಾರ್ತೆ ತಿಪಟೂರು
ತಾಲೂಕಿನ ನೊಣವಿನಕೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರಮಟ್ಟದ ಎನ್‌ಕ್ಯೂಎಎಸ್‌ನಲ್ಲಿ ಅರ್ಹತೆ ಪಡೆದುಕೊಂಡಿದೆ ಎಂದು ಡಾ. ಡಿ. ಚನ್ನಕೇಶವ್ ಹೇಳಿದರು.ತಾಲೂಕಿನ ನೊಣವಿನಕೆರೆಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎನ್‌ಕ್ಯೂಎಎಸ್ ತಂಡವು ಆಸ್ಪತ್ರೆಗೆ ಭೇಟಿ ನೀಡಿ ಸ್ವಚ್ಛತೆ, ರೋಗಿಗಳ ಸೇವೆ, ಗುಣಮಟ್ಟದ ಚಿಕಿತ್ಸಾ ಸೌಲಭ್ಯ ಪರಿಗಣಿಸಿ ಶೇ.74.61ರಷ್ಟು ಅಂಕ ನೀಡಿ ರಾಷ್ಟ್ರಮಟ್ಟದ ಎನ್‌ಕ್ಯೂಎಎಸ್‌ನಡಿ ನಮ್ಮ ಆಸ್ಪತ್ರೆಯನ್ನು ಆಯ್ಕೆ ಮಾಡಿದ್ದಾರೆ ಎಂದರು.
ಆಸ್ಪತ್ರೆಗೆ ಪ್ರತಿದಿನ 200ಕ್ಕೂ ಹೆಚ್ಚು ಹೊರರೋಗಿಗಳು ಬರುತ್ತಿದ್ದು ಅವರೆಲ್ಲರಿಗೂ ಉತ್ತಮ ಗುಣಮಟ್ಟದ ಚಿಕಿತ್ಸೆಯನ್ನು ನೀಡಲಾಗುತ್ತಿದೆ. ಆಂಬುಲೆನ್ಸ್ ಸೇವೆ, ಉಚಿತ ಕಣ್ಣಿನ ಶಸ್ತ್ರ ಚಿಕತ್ಸೆ, ಹೆರಿಗೆ ಕೊಠಡಿ, ಶವಾಗಾರ, ಶುದ್ದ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಅಚ್ಚುಕಟ್ಟಾಗಿದೆ ಎಂದರು. ಗ್ರಾಪಂ ಅಧ್ಯಕ್ಷ ಹರೀಶ್ ಮಾತನಾಡಿ, ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ಒಗ್ಗಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಕಾಂಪೌಂಡ್ ನಿರ್ಮಾಣ ಹಾಗೂ ವಸತಿ ಗೃಹಗಳ ದುರಸ್ಥಿ ಕಾರ್ಯ ಮಾಡಬೇಕು ಎಂದರು. ತಾಪಂ ಮಾಜಿ ಉಪಾಧ್ಯಕ್ಷ ಶಂಕರ್, ಗ್ರಾಪಂ ಸದಸ್ಯರಾದ ರಘುಚಂದನ್, ಕಮಲಮ್ಮ, ಜಯಮ್ಮ, ಡಾ. ಷಡಕ್ಷರಿ, ಚಂದ್ರಕಲಾ, ಸರೋಜಮ್ಮ ಮತ್ತಿತರರಿದ್ದರು.