ಸಾರಾಂಶ
ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ವಿಸ್ತರಣೆಗೆ ಸಹಾಯಕವಾಗಲಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿ ಡಾ. ಸಂತೋಷ್ ತಿಳಿಸಿದರು. ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರಿಗೆ ಸೌಲಭ್ಯಗಳ ವಿಸ್ತರ್ಣೆಮಾಡಿ ಜನರಿಗೆ ಆದಷ್ಟು ಸೌಲಭ್ಯ ನೀಡುವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಉದ್ದೇಶವಾಗಿದೆ. ಸೌಲಭ್ಯ ವಿಸ್ತರಣೆಯಿಂದ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಪಡೆದು ಸೌಲಭ್ಯಗಳು ಹೆಚ್ಚು ಹೆಚ್ಚು ಸಿಗುವಂತೆ ಮಾಡಬೇಕೆಂದರು.
ಕನ್ನಡಪ್ರಭ ವಾರ್ತೆ ಬಸವಾಪಟ್ಟಣ
ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಸಾರ್ವಜನಿಕರಿಗೆ ಆರೋಗ್ಯ ಇಲಾಖೆಯಿಂದ ದೊರೆಯುವ ಸೌಲಭ್ಯಗಳ ವಿಸ್ತರಣೆಗೆ ಸಹಾಯಕವಾಗಲಿದೆ ಎಂದು ರಾಜ್ಯ ಆರೋಗ್ಯ ಅಧಿಕಾರಿ ಡಾ. ಸಂತೋಷ್ ತಿಳಿಸಿದರು.ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿಯನ್ನು ಮೂಡಿಸಿ ಅವರಿಗೆ ಸೌಲಭ್ಯಗಳ ವಿಸ್ತರ್ಣೆಮಾಡಿ ಜನರಿಗೆ ಆದಷ್ಟು ಸೌಲಭ್ಯ ನೀಡುವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆಯ ಉದ್ದೇಶವಾಗಿದೆ. ಪ್ರಮುಖವಾಗಿ ಆಸ್ಪತ್ರೆಯಲ್ಲಿ ಸ್ವಚ್ಛತೆ, ಹೆರಿಗೆ ನಂತರದ ದೊರೆಯುವ ಸೌಲಭ್ಯಗಳು ಅಲ್ಲದೆ ದಾಖಲಾತಿಗಳ ನಿರ್ವಹಣೆ ದೊರೆಯುವ ಸೌಲಭ್ಯಗಳ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಆರೋಗ್ಯದ ಬಗ್ಗೆ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸುವಂತೆ ಮಾಡುವುದು, ಸೌಲಭ್ಯ ವಿಸ್ತರಣೆಯಿಂದ ಸರ್ಕಾರದ ವತಿಯಿಂದ ಹೆಚ್ಚಿನ ಅನುದಾನ ಪಡೆದು ಸೌಲಭ್ಯಗಳು ಹೆಚ್ಚು ಹೆಚ್ಚು ಸಿಗುವಂತೆ ಮಾಡವುದು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಖಾತ್ರಿ ಸಮೀಕ್ಷೆ ಆಗಿದೆ ಎಂದು ಬಸವಾಪಟ್ಟಣ ಪ್ರಾಥಮಿಕ ಆರೋಗ್ಯ ತಪಾಸಣಾ ಆರೋಗ್ಯಾಧಿಕಾರಿ ತಿಳಿಸಿದರು.
ಇದೇ ವೇಳೆ ಆಸ್ಪತ್ರೆ ಸಿಬ್ಬಂದಿಗಳಾದ ಹಿರಿಯ ನಿರೀಕ್ಷಕ ಲೊಕೇಶ್ ಶೂಶ್ರೂಕಿಯರಾದ ಕೃಷ್ಣವೇಣಿ, ಲಕ್ಷ್ಮೀದೇವಿ ಸವಿತಾ, ಪದ್ಮಾ ,ಪುಷ್ಪವತಿ, ಡಿ ದರ್ಜೆ ಸಹಾಯಕರಾದ ಇಲಿಯಾಸ್ ಪಾಷ, ವಿಜಯಕುಮಾರ್ ಸಂದೀಪ್ ಮತ್ತು ಪ್ರಮೀಳಾ, ಪ್ರಯೋಗಲಾಯ ತಜ್ಞರಾದ ರಾಘವೇಂದ್ರ ಇತರರು ಹಾಜರಿದ್ದರು.