ಸಾರಾಂಶ
ಮಹಿಳೆಗೆ ನರೇಗಾ ಮೂಲಕ ಆರ್ಥಿಕ ಶಕ್ತಿ ನೀಡುವ ಕಾರ್ಯ ಆಗುತ್ತಿದೆ. ಸಮುದಾಯ ಆಸ್ತಿಗಳಾದ ಕೆರೆ, ನಾಲಾ, ಮಣ್ಣು, ನೀರು, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ.
ಕೊಪ್ಪಳ(ಯಲಬುರ್ಗಾ):
ಉದ್ಯೋಗ ಖಾತ್ರಿ ಯೋಜನೆಯಲ್ಲಿ ಮಹಿಳೆಯರು ತೊಡಗಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದು ಪಿಡಿಒ ಫಕೀರಪ್ಪ ಕಟ್ಟಿಮನಿ ಹೇಳಿದರು.ಯಲಬುರ್ಗಾ ತಾಲೂಕಿನ ಸಂಕನೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶಿರಗುಪ್ಪಿದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೊಂಡಿರುವ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಸ್ತ್ರೀ ಚೇತನ ಅಭಿಯಾನ ಹಾಗೂ ರೋಜಗಾರ ದಿನಾಚರಣೆ ಹಾಗೂ ಪಂಚಾಯತ್ ರಾಜ್ ದಿವಸ್ ಆಚರಣೆ ಉದ್ದೇಶಿಸಿ ಮಾತನಾಡಿದ ಅವರು, ಮಹಿಳೆಗೆ ನರೇಗಾ ಮೂಲಕ ಆರ್ಥಿಕ ಶಕ್ತಿ ನೀಡುವ ಕಾರ್ಯ ಆಗುತ್ತಿದೆ ಎಂದರು.
ಸಮುದಾಯ ಆಸ್ತಿಗಳಾದ ಕೆರೆ, ನಾಲಾ, ಮಣ್ಣು, ನೀರು, ಪರಿಸರ ಸಂರಕ್ಷಣೆ ಮಾಡುವ ಜವಾಬ್ದಾರಿ ಇದೆ ಎಂದ ಅವರು, 1993ರ ಪಂಚಾಯರ್ ರಾಜ್ ತಿದ್ದುಪಡಿ ಕಾಯ್ದೆ ಜಾರಿಯಾಗಿ 32 ವರ್ಷಗಳಾಗಿದ್ದು, ಗ್ರಾಮೀಣ ಪ್ರದೇಶದ ಜನರಿಗೆ ಸೌಕರ್ಯ ಒದಗಿಸಲು ಅನುಕೂಲವಾಗಿದೆ ಎಂದು ಹೇಳಿದರು.ಸಂಕನೂರ ಗ್ರಾಮ ಪಂಚಾಯಿತಿಯ ಶಿರಗುಪ್ಪಿ ಗ್ರಾಮದ ನಾಲಾ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಪಂಚಾಯತ್ ರಾಜ್ ದಿವಸ ಆಚರಣೆ ಹಿನ್ನೆಲೆ ಕೇಕ್ ಕತ್ತರಿಸಿ ಸಿಹಿ ಹಂಚಲಾಯಿತು.
ಗ್ರಾಪಂ ಅಧ್ಯಕ್ಷೆ ನಾಗಮ್ಮ ತಳವಾರ, ಉಪಾಧ್ಯಕ್ಷ ಪರಶುರಾಮ ಕದಡಿ, ಸದಸ್ಯರಾದ ಯಲ್ಲಪ್ಪ ಜಾಲಿಹಾಳ, ಕಾರ್ಯದರ್ಶಿ ಮಹಿಬೂಬ್ ಹಿರೇಮನಿ, ಡಿಇಒ ಭೀಮರಾವ್ ದೇಸಾಯಿ, ಕರ ವಸೂಲಿಗಾರರಾದ ತಿಪ್ಪಣ್ಣ ಗುರಿಕಾರ, ಕಾಯಕ ಮಿತ್ರರಾದ ಜಯಶ್ರೀ ಬೆನಾಳ, ಐಒಸಿ ಸಂಯೋಜಕ ಶರಣಪ್ಪ ಹಾಳಕೇರಿ, ಕಾಯಕ ಬಂಧುಗಳಿದ್ದರು.