ಸಾರಾಂಶ
ಗ್ರಾಪಂ ಚುನಾಯಿತ ಪ್ರತಿನಿಧಿ, ಬೆಂಬಲಿಗರು, ಅಧಿಕಾರಿಗಳ ಅಪವಿತ್ರ ಒಡಂಬಡಿಕೆ । ಸಾರ್ವಜನಿಕವಾಗಿ ಕೇಳಿ ಬರುತ್ತಿರುವ ಆರೋಪಕನ್ನಡಪ್ರಭ ವಾರ್ತೆ ಹೊಸದುರ್ಗ
ದುಡಿಯುವ ಕೈಗಳಿಗೆ ಕೆಲಸ ಒದಗಿಸಿ ಗಂಡು-ಹೆಣ್ಣು ಎನ್ನುವ ಭೇದಭಾವವಿಲ್ಲದೆ ಸರಿ ಸಮವಾಗಿ ಹಣ ಪಾವತಿ ಸೇರಿದಂತೆ ಹತ್ತು ಹಲವು ಸೌಲಭ್ಯಗಳನ್ನು ಜನತೆಗೆ ತಲಪಿಸುವ ಕೇಂದ್ರ ಸರ್ಕಾರದ ಮಹಾತ್ವಕಾಂಕ್ಷಿ ನರೇಗಾ ಯೋಜನೆ ಅನುಷ್ಠಾನ ಹಂತದಲ್ಲಿ ಬರುವ ಅಧಿಕಾರಿಗಳು ಅಪವಿತ್ರ ಒಡಂಬಡಿಕೆಯಿಂದ ಹಣ ಎಗ್ಗಿಲ್ಲದೆ ಉಳ್ಳವರ ಪಾಲಾಗುತ್ತಿದೆ.ಸ್ಥಳೀಯ ಗ್ರಾಪಂನ ಕೆಲವು ಚುನಾಯಿತ ಪ್ರತಿನಿದಿಗಳು, ಸಂಬಂಧಿಕರು, ಬೆಂಬಲಿಗರು, ತಾಂತ್ರಿಕ (ಟಿಎಎ) ಸಹಾಯಕರು, ಬಿಎಫ್‌ಟಿಗಳು, ಹಾಗೂ ಕೆಲವು ಗ್ರಾಪಂನ ಅಧಿಕಾರಿಗಳು, ಸಿಬ್ಬಂದಿಗಳ ಅಪವಿತ್ರ ಮೈತ್ರಿಯಿಂದ ನರೇಗಾ ಯೋಜನೆಯ ಹಣ ಕೆಲವರಿಗೆ ಮಾತ್ರ ಸದ್ಬಳಕೆಯಾಗುತ್ತಿದೆ ಎಂದು ಸಾರ್ವಜನಿಕವಾಗಿ ಕೇಳಿ ಬರುತ್ತಿದೆ.
ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮ ಸಭೆಗಳ ಮೂಲಕ ಅಯ್ಕೆಯಾದ ಕಾಮಗಾರಿಗಳನ್ನು ಗ್ರಾಪಂ ಸಿಬ್ಬಂದಿ ಕ್ರೋಡಿಕರೀಸಿ ತಯಾರಿಸಿದ ಕ್ರಿಯಾ ಯೋಜನೆಗೆ ತಾಪಂ ಜಿಪಂ ಅಧಿಕಾರಿಗಳಿಂದ ಅನುಮೋದನೆಗೊಂಡು ಕಾಮಗಾರಿಗಳನ್ನು ಕೂಲಿಕಾರರ ಬೇಡಿಕೆಯಂತೆ ಗ್ರಾಪಂಯ ಅಧಿಕಾರಿಗಳು ಸೂಚಿಸಿದ ಕಾಮಗಾರಿಗಳನ್ನು ಮಾಡಬೇಕಾಗಿದೆ. ಅದರೆ ಇಲ್ಲಿ ಗ್ರಾಪಂ ಪಿಡಿಒಗಳು, ತಾಂತ್ರಿಕ ಸಹಾಯಕರು, ಸ್ಥಳಿಯ ಗುತ್ತಿಗೆದಾರರು, ಗ್ರಾಪಂ ಸದಸ್ಯರು ಪರಸ್ಪರ ಹೊಂದಾಣಿಕೆಯಂತೆ ಲಾಭದಾಯಕವಾಗಿ ಬರುವ ಕಾಮಗಾರಿಗಳನ್ನು ಅಯ್ಕೆ ಮಾಡಿಕೊಂಡು ನಿರ್ವಹಿಸುತ್ತಿರುವುವುದು ಸಾಮಾನ್ಯವಾಗಿದೆ.ನರೇಗಾ ಯೋಜನೆಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ನಿಯಂತ್ರಿಸಲು ಕಾಮಗಾರಿಗಳ ಕೆಲಸಕ್ಕೆ ಹಾಜರಾದ ಕೂಲಿಕಾರರು ಹಾಜರಾತಿಯನ್ನು ಪ್ರತಿ ದಿವಸ ಎರಡು ಬಾರಿ ಕಡ್ಡಾಯವಾಗಿ ಎನ್‌ಎಂಎಂಎಸ್ ತ್ರಂತ್ರಾಂಶದಲ್ಲಿ ಛಾಯಚಿತ್ರ ತೆಗೆದು ಇಂಡೀಕಸಿ ಕಾರ್ಮಿಕರ ಪೋಟೋ ಪರೀಶಿಲಿಸಿ ನಿಯಮನುಸಾರ ಕ್ರಮಬದ್ಧವಾಗಿದ್ದರೆ ಮಾತ್ರ ಕೂಲಿ ಹಣ ಪಾವತಿಸಬೇಕು ಎಂದು ಇಲಾಖೆ ಕಟ್ಟುನಿಟ್ಟಿನ ಅದೇಶ ನೀಡಿದ್ದರೂ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗೂ 10ಕ್ಕೂ ಹೆಚ್ಚು ಗ್ರಾಪಂ ಗಳಲ್ಲಿ 100 ರಿಂದ 550ಕ್ಕೂ ಹೆಚ್ಚು ಕೂಲಿಕಾರರು ಕಾಮಗಾರಿಗಳಲ್ಲಿ ಕೆಲಸಕ್ಕೆ ಹಾಜರಾಗಿರುವುದು ತಂತ್ರಾಂಶದಲ್ಲಿ ಕಂಡುಬಂದರೂ ಕೂಲಿಕಾರರ ಸಂಖ್ಯೆಗೂ ಎನ್‌ಎಂಎಂಎಸ್ ಛಾಯಚಿತ್ರಗಳಲ್ಲಿರುವ ಕೂಲಿಕಾರರ ಸಂಖ್ಯೆಗೂ ಹೊಂದಿಕೆಯಾಗದಿದ್ದರೂ ಕೂಲಿ ವೆಚ್ಚ ಪಾವತಿ ಮಾಡಲಾಗಿದೆ ಎನ್ನಲಾಗುತ್ತಿದೆ.
ಕಾಮಗಾರಿಗಳ ಅಂದಾಜು ಪಟ್ಟಿಗಳನ್ನು ತಾಂತ್ರಿಕ ಸಹಾಯಕರು ಕೆಲಸ ಮಾಡುವ ಗುತ್ತಿಗೆದಾರರಿಗೆ ತಯಾರಿಸಿ ಗ್ರಾಪಂಗಳಿಂದ ಅಡಳಿತಾತ್ಮಕ ಮಂಜೂರಾತಿ ಪಡೆದು ತಾಂತ್ರಿಕ ಮಂಜೂರಾತಿ ಕೊಡಿಸುವ ಹಂತದಿಂದ ಲಕ್ಷ ರು. ಕಾಮಗಾರಿಗೆ ಇಂತಿಷ್ಟು ಕಮೀಷನ್ ಹಣ ಎಂದು ಪಡೆದಕೊಂಡು ಕಾಮಗಾರಿಗಳು ನಡೆಯುವ ಸ್ಥಳಕ್ಕೂ ಹೋಗದೇ ಅಂದಾಜು ಪಟ್ಟಿ ಹಿಡಿದಕೊಂಡು ಬಿಲ್ ಬರೆದಕೊಡುವ ತಾಂತ್ರಿಕ ಸಹಾಯಕರಿಗೆ, ತಾಂತ್ರಿಕ ಸಹಾಯಕರು ನೀಡುವ ಬಿಲ್ ಪಡೆದು ಪರಿಶೀಲಿಸದೆ ಹಣ ವರ್ಗಾವಣೆ ಮಾಡುವ ಪಿಡಿಒ ಹಾಗೂ ಅಧ್ಯಕ್ಷರಿಗೆ ಕಡಿವಾಣ ಹಾಕದಿದ್ದರೆ ನರೇಗಾ ಯೋಜನೆಯ ಹಣ ಗುತ್ತಿಗೆದಾರರ ಪಾಲಾಗುತ್ತದೆ.ಕಾಮಗಾರಿಗಳು ಗುಣಮಟ್ಟದಲ್ಲಿ ಅನುಷ್ಠಾನಗೊಳ್ಳತ್ತಿಲ್ಲ. ಯೋಜನೆಯಲ್ಲಿ ಅನುಷ್ಠಾನಗೊಂಡ ಕೆರೆ ಹೂಳು ಎತ್ತುವುದು, ರಾಜಕಾಲುವೆ ಅಭಿವೃದ್ಧಿ ಕಾಮಗಾರಿ ಸೇರಿದಂತೆ ಕೆಲವು ಗ್ರಾಪಂಗಳಲ್ಲಿ ಸ್ಥಳದ ಹೆಸರು ಬದಲಾಯಿಸಿ ಮರು ಕಾಮಗಾರಿಗಳನ್ನು ಯೋಜನೆಯಲ್ಲಿ ಸೇರ್ಪಡಿಸಿಕೊಂಡು ನಿರ್ವಹಿಸಿತ್ತಿರುವುನ್ನು ಸಂಬಂದಿಸಿದ ಅಧಿಕಾರಿಗಳು ಕಂಡರೂ ಜಾಣ ಕುರಡರಂತೆ ಇರುವುದನ್ನು ಸಾರ್ವಜನಿಕರು ಪ್ರಶ್ನೆ ಮಾಡಿದರೆ ಕೆಲಸ ಮಾಡುವ ಗುತ್ತಿಗೆದಾರರನ್ನು ಎತ್ತಿ ಕಟ್ಟಿ ಗ್ರಾಪಂಗಳಲ್ಲಿ ಗಲಾಟೆ ಮಾಡಿಸುವ ಮೂಲಕ ಅಶಾಂತಿ ಮೂಡಿಸುವ ಯತ್ನಗಳು ಕಂಡು ಬರುತ್ತಿವೆ.
ಹೊಸದುರ್ಗ ತಾಲೂಕಿನಲ್ಲಿ 25 ಸಾವಿರಕ್ಕೂ ಹೆಚ್ಚು ಮಾನವ ದಿನಗಳನ್ನು ಸೃಜಿಸಿರುವ ಉದಾಹರಣೆಗೆ ಜಿಎನ್ ಕೆರೆ, ಕಾರೇಹಳ್ಳಿ, ಹೆಗ್ಗೆರೆ, ದೊಡ್ಡಗಟ್ಟ, ಅತ್ತಿಮಗ್ಗೆ ಸೇರಿದಂತೆ ಇತರೆ ಗ್ರಾಪಂಗಳಲ್ಲಿನ ಅವ್ಯವಹಾರ ಜಿಲ್ಲಾ, ತಾಲೂಕು ಮಟ್ಟದ ಅಧಿಕಾರಿಗಳಿಗೆ ಗೊತ್ತಿದ್ದರೂ ಕಡಿವಾಣ ಹಾಕದಿರುವುದನ್ನು ನೋಡಿದರೆ ಇದರಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಪಾಲೂ ಇದೆಯಾ ಎನ್ನುವ ಅನುಮಾನ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.