ಗುಳೆ ನಿಯಂತ್ರಣಕ್ಕೆ ನರೇಗಾ ಯೋಜನೆ ಸಹಕಾರಿ

| Published : Apr 18 2025, 12:31 AM IST

ಗುಳೆ ನಿಯಂತ್ರಣಕ್ಕೆ ನರೇಗಾ ಯೋಜನೆ ಸಹಕಾರಿ
Share this Article
  • FB
  • TW
  • Linkdin
  • Email

ಸಾರಾಂಶ

ಮೊಳಕಾಲ್ಮುರು ತಾಲೂಕಿನ ಬೊಮ್ಮದೇವರ ಹಳ್ಳಿಯಲ್ಲಿ ನಡೆಯುತ್ತಿರುವ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳಕ್ಕೆ ಸಿಇಒ ಸೋಮಶೇಖರ್ ಭೇಟಿ ನೀಡಿ ಕೂಲಿಕಾರರೊಂದಿಗೆ ಸಂವಾದ ನಡೆಸಿದರು.

ಕೂಲಿ ಬೇಡಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಜಿಪಂ ಸಿಇಒ ಎಸ್‌.ಜಿ.ಸೋಮಶೇಖರ್‌ ಹೇಳಿಕೆಕನ್ನಡಪ್ರಭ ವಾರ್ತೆ ಮೊಳಕಾಲ್ಮುರು

ದೂರದ ನಗರಗಳತ್ತ ಉದ್ಯೋಗ ಅರಸಿ ಹೋಗುವುದನ್ನು ತಡೆಯಲು ನರೇಗಾ ಉಪಯುಕ್ತವಾಗಿದ್ದು, ಪ್ರತಿಯೊಬ್ಬರು ಯೋಜನೆಯನ್ನು ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜೆ.ಸೋಮಶೇಖರ್ ಹೇಳಿದರು.

ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮ ಪಂಚಾಯತಿಯಲ್ಲಿ ಮಹಾತ್ಮಾಗಾಂಧಿ ನರೇಗಾ ಯೋಜನೆಯಡಿ ಗುರುವಾರ ಐಇಸಿ ಚಟುವಟಿಕೆಯಡಿ ಕೂಲಿ ಬೇಡಿಕೆ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನರೇಗಾ ಯೋಜನೆಯಡಿ ಪ್ರಸ್ತುತ ವರ್ಷದಿಂದ ಕೂಲಿಕಾರರಿಗೆ 21 ರು. ಹೆಚ್ಚಳವಾಗಿದೆ. ಪ್ರಸ್ತುತ 370 ರು. ಕೂಲಿ ನೀಡಲಿದ್ದು ಗಂಡು ಮತ್ತು ಹೆಣ್ಣಿಗೆ ಸಮಾನ ವೇತನವಿದೆ.

ಕೂಲಿಕಾರಿಗೆ 100 ದಿನಗಳು ಕೆಲಸ ಮಾಡಿ ಒಟ್ಟು 37,000 ರು. ಪಡೆದು ತಮ್ಮ ತಮ್ಮ ಕುಟುಂಬಗಳು ಆರ್ಥಿಕವಾಗಿ ಸದೃಢರಾಗಬೇಕು ಮತ್ತು ಜನರು ಬೇರೆ ಊರುಗಳಿಗೆ ಗುಳೆ ಹೋಗದೇ ತಮ್ಮ ತಮ್ಮ ಗ್ರಾಮಗಳಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡಿ ಆರ್ಥಿಕವಾಗಿ ಸಬಲರಾಗಬೇಕು ಎಂದು ಹೇಳಿದರು.

ಕುಟುಂಬದಲ್ಲಿ 3-4 ವರ್ಷದ ಒಳಗಿನ ಮಕ್ಕಳಿದ್ದಲ್ಲಿ ಕೂಸಿನ ಮನೆಯಲ್ಲಿ ಬಿಟ್ಟು ನೆಮ್ಮದಿಯಿಂದ ಕೆಲಸ ಮಾಡಬಹುದು, ಮಕ್ಕಳನ್ನು ನೋಡಿಕೊಳ್ಳಲು ಕೇರ್ ಟೇಕರ್‌ಗಳಿದ್ದು, ಅವರು ತಾಯಿಯಂತೆ ತಮ್ಮ ಮಕ್ಕಳನ್ನು ಆರೈಕೆ ಮಾಡುತ್ತಾರೆ. ಕೆಲಸ ಮುಗಿದ ನಂತರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಬಹುದು ಹಾಗೂ ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಸಿಇಒ ರವರಲ್ಲಿ ಕೂಲಿಗಾರರು ಕೋರಿದರು.

ಇದೇ ವೇಳೆ ಕೂಲಿಗಾರರಿಂದ 320 ರು. ಕೂಲಿ ಬೇಡಿಕೆ ಅರ್ಜಿಗಳನ್ನು ಸ್ವೀಕರಿಸಲಾಯಿತು ಹಾಗು ತಮ್ಮೆನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೊಮ್ಮದೇವರಹಳ್ಳಿ ನಡೆಯುತ್ತಿರುವ ಗೋಕಟ್ಟೆ ಹೂಳು ತೆಗೆಯುವ ಕಾಮಗಾರಿಗೆ ಭೇಟಿ ನೀಡಿ, ಕೂಲಿಗಾರರೊಂದಿಗೆ ಸಂವಾದ ನೆಡೆಸಿ, ಆರೋಗ್ಯ ವಿಚಾರಿಸಿದರು.

ತಾಲೂಕು ಪಂಚಾಯತಿ ಕಾರ್ಯ ನಿರ್ವಾಹಕ ಅಧಿಕಾರಿ ಹನುಮಂತಪ್ಪ, ಜಿಲ್ಲಾ ಪಂಚಾಯತ್ ನರೇಗಾ ಶಾಖೆಯ ಎಡಿಪಿಸಿ ಮೋಹನ್ ಕುಮಾರ್, ಜಿಲ್ಲಾ ಐಇಸಿ ಸಂಯೋಜಕ ರವೀಂದ್ರನಾಥ್, ಸಹಾಯಕ ನಿರ್ದೇಶಕ ಗಣೇಶ್ ನರೇಗಾ ತಾಂತ್ರಿಕ ಸಂಯೋಜಕ ಮಂಜುನಾಥ್, ತಾಲೂಕು ಐಇಸಿ ಸಂಯೋಜಕ ದೇವರಾಜ್, ಎಂಐಎಸ್ ಸಂಯೋಜಕ ಮಧುಸೂಧನ್ ಪಿಡಿಒ ಗುಂಡಪ್ಪ ಹಾಗೂ ಬಾಂಡ್ರಾವಪ್ಪ ಸೇರಿದಂತೆ ಇದ್ದರು.