ಸಾರಾಂಶ
ನರೇಗಾ ಯೋಜನೆಯಲ್ಲಿ ಗ್ರಾಪಂನಿಂದ ಅನುಮೋದನೆಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿ ಕೆಲಸದಲ್ಲಿ ಕೂಲಿಕಾರರಿಗೆ ನಿಗದಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೂಲಿಕಾರರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭವಾರ್ತೆ ಪಾವಗಡ
ನರೇಗಾ ಯೋಜನೆಯಲ್ಲಿ ಗ್ರಾಪಂನಿಂದ ಅನುಮೋದನೆಗೊಂಡ ಕೆರೆ ಹೂಳೆತ್ತುವ ಕಾಮಗಾರಿ ಪ್ರಗತಿ ಕೆಲಸದಲ್ಲಿ ಕೂಲಿಕಾರರಿಗೆ ನಿಗದಿಗಿಂತ ಕಡಿಮೆ ಕೂಲಿ ನೀಡಲಾಗುತ್ತಿದೆ ಎಂದು ಆರೋಪಿಸಿ ಕೂಲಿಕಾರರು ತಾಪಂ ಕಚೇರಿ ಎದುರು ಪ್ರತಿಭಟನೆ ನಡೆಸಿದರು.ಬುಧವಾರ ಏಕಾಏಕಿ ಕಚೇರಿಗೆ ಬಂದ ಕೂಲಿಕಾರರು, ಪ್ರಸಕ್ತ ಸಾಲಿಗೆ ನರೇಗಾ ಯೋಜನೆ ಅಡಿ ಬೂದಿಬೆಟ್ಟ ಗ್ರಾಪಂ ವ್ಯಾಪ್ತಿಯ ಯರಮ್ಮನಹಳ್ಳಿ ಕೆರೆಯಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿದೆ. 20ಕ್ಕೂ ಹೆಚ್ಚು ಮಂದಿ ಕೂಲಿ ಕೆಲಸದಲ್ಲಿ ನಿರತರಾಗಿದ್ದು, 20ಮಂದಿಗೆ 7ದಿನದ ಕಾಮಗಾರಿಯ ಕೂಲಿಹಣ ಬಿಡುಗಡೆಯಾಗಬೇಕಿದೆ. ಪ್ರತಿದಿನ ತಲಾ 370ರುಗಳ ಕೂಲಿ ನೀಡುವಂತೆ ಸರ್ಕಾರದ ಆದೇಶವಿದೆ. ಆದರೆ ಇಲ್ಲಿನ ಪಿಡಿಒ ಹಾಗೂ ನರೇಗಾ ಎಂಜಿನಿಯರ್ ಸೇರಿ ಪ್ರತಿದಿನ ಒಬ್ಬ ಕೂಲಿಕಾರ್ಮಿಕನಿಗೆ ತಲಾ 190ರು ಕೂಲಿ ಹಣ ನಿಗದಿಪಡಿಸಿದ್ದಾರೆ. ಇದು ಕಾರ್ಮಿಕರಿಗೆ ಮಾಡುವ ಮೋಸವಾಗಿದೆ. ನ್ಯಾಯಯುತವಾಗಿ ಪ್ರತಿದಿನದ ಕೂಲಿ 370ರುಗಳಂತೆ ಲೆಕ್ಕಹಾಕಿ 20ಮಂದಿಗೆ 7ದಿನದ ಕೂಲಿ ಹಣ ನೀಡುವಂತೆ ತಾಪಂ ಇಒಗೆ ಆಗ್ರಹಿಸಿದರು.
ಈ ವೇಳೆ ತಮಟೆ ಸಂಸ್ಥೆಯ ಶ್ರೀನಿವಾಸ್, ಬಳಸಮುದ್ರ ವೆಂಕಟೇಶ್,ರಾಮಕೃಷ್ಣ ಹಾಗೂ ಕೂಲಿಕಾರರಾದ ಅಲುವೇಲಮ್ಮ, ಸುಶೀಲಮ್ಮ ಶಮಾ, ಮಮತಾ ಲಕ್ಷ್ಮೀದೇವಮ್ಮ, ಸಾಕಮ್ಮ, ಸಿದ್ದೇಶಪ್ಪ, ಮಂಜುಳಮ್ಮ, ರಾಧಮ್ಮ, ನಾಗರಾಜು, ಯಲ್ಲಮ್ಮ, ನರಸಮ್ಮ,ಮುತ್ಯಾಲಮ್ಮ, ಕಾಮಣ್ಣ, ನಾಗಮ್ಮ ಅಕ್ಕಲಪ್ಪ, ಲಲಿತಮ್ಮ ಇತರೆ ಅನೇಕ ಮಂದಿ ಕೂಲಿಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.