ಏಪ್ರಿಲ್‌ ೧ ರಿಂದ ನರೇಗಾ ಕೂಲಿ ದರ ಹೆಚ್ಚಳ: ಜಿಪಂ ಸಿಇಒ ಕೆ.ಆರ್.ನಂದಿನಿ

| Published : Mar 30 2025, 03:00 AM IST

ಸಾರಾಂಶ

೨೦೨೪-೨೫ ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ದಿನಗೂಲಿ ದರ ೩೪೯ ರು. ಇದ್ದು, ೨೦೨೫-೨೬ ನೇ ಸಾಲಿನಲ್ಲಿ ಏಪ್ರಿಲ್ ೦೧ ರಿಂದ ೩೭೦ ರು.ಗೆ ದಿನಗೂಲಿ ದರವನ್ನು ನಿಗಧಿಪಡಿಸಿದೆ. ಮನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಆರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ ೧೦೦ ದಿನಗಳ ಅಕುಶ ಕೂಲಿ ಕೆಲಸ ಕೊಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಅಕುಶಲ ಕೂಲಿಕೆಲಸ ಮಾಡುವ ಗ್ರಾಮೀಣ ಕೂಲಿಕಾರರ ದಿನಗೂಲಿ ದರವನ್ನು ೩೭೦ ರು.ಗೆ ಹೆಚ್ಚಳ ಮಾಡಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಮಂತ್ರಾಲಯವು ಆದೇಶ ಹೊರಡಿಸಿದೆ ಎಂದು ಜಿಪಂ ಸಿಇಒ ಕೆ.ಆರ್.ನಂದಿನಿ ತಿಳಿಸಿದ್ದಾರೆ.

೨೦೨೪-೨೫ ನೇ ಸಾಲಿನಲ್ಲಿ ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ದಿನಗೂಲಿ ದರ ೩೪೯ ರು. ಇದ್ದು, ೨೦೨೫-೨೬ ನೇ ಸಾಲಿನಲ್ಲಿ ಏಪ್ರಿಲ್ ೦೧ ರಿಂದ ೩೭೦ ರು.ಗೆ ದಿನಗೂಲಿ ದರವನ್ನು ನಿಗಧಿಪಡಿಸಿದೆ. ಮನರೇಗಾ ಯೋಜನೆಯಡಿ ಗ್ರಾಮೀಣ ಪ್ರದೇಶದ ಪ್ರತಿ ಆರ್ಹ ಕುಟುಂಬಕ್ಕೂ ಒಂದು ಆರ್ಥಿಕ ವರ್ಷದಲ್ಲಿ ೧೦೦ ದಿನಗಳ ಅಕುಶ ಕೂಲಿ ಕೆಲಸ ಕೊಡಲಾಗುತ್ತದೆ. ಒಂದು ಕುಟುಂಬ ವರ್ಷದಲ್ಲಿ ನೂರು ದಿನ ಕೆಲಸ ಮಾಡಿದರೆ ೩೭ ಸಾವಿರ ರು. ಕೂಲಿ ಹಣ ಪಡೆದುಕೊಳ್ಳಬಹುದು. ನರೇಗಾ ಯೋಜನೆಯಡಿ ಕೂಲಿ ಕೆಲಸ ಮಾಡುವ ಗಂಡು-ಹೆಣ್ಣಿಗೆ ೩೭೦ ರು.. ಸಮಾನ ಕೂಲಿ ವೇತನ ನೀಡಲಾಗುವುದು ಎಂದು ತಿಳಿಸಿದ್ದಾರೆ.ಕೆ.ಎಂ.ಮಹೇಶ್‌ಗೆ ಪಿಎಚ್‌.ಡಿ ಪದವಿ

ಮಂಡ್ಯ:

ಸಮಾಜ ಕಾರ್ಯಕ್ಕೆ ಸಂಬಂಧಿಸಿದಂತೆ ಮಂಡಿಸಿದ ಸಂಶೋಧನಾ ಪ್ರಬಂಧಕ್ಕೆ ಸಾಮಾಜಿಕ ಕಾರ್ಯಕರ್ತ ಕೆ.ಎಂ.ಮಹೇಶ್ ಅವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯ ಪಿಎಚ್‌.ಡಿ ಪದವಿ ನೀಡಿ ಗೌರವಿಸಿದೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನವ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ ಡಾ.ಎಲ್.ಶ್ರೀನಿವಾಸ್ ಹಾಗೂ ತುಮಕೂರು ವಿವಿ ವಿಶ್ರಾಂತ ಉಪಕುಲಪತಿ ಡಾ.ವೈ.ಎಸ್. ಸಿದ್ದೇಗೌಡ ಮಾರ್ಗದರ್ಶನದಲ್ಲಿ ಸಮಾಜ ಕಾರ್ಯಕ್ಕೆ ಸಂಬಂಧಿಸಿದಂತೆ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕೊಡುಗೆಗಳು ಎಂಬ ವಿಷಯದ ಮೇಲೆ ಮಂಡಿಸಿದ ಸಂಶೋಧನ ಮಹಾಪ್ರಬಂಧಕ್ಕೆ ಪಿಎಚ್‌.ಡಿ ಪದವಿ ಲಭಿಸಿದೆ. ಮಂಡ್ಯದ ಚಾಮುಂಡೇಶ್ವರಿ ನಗರ ನಿವಾಸಿ, ಸಾಮಾಜಿಕ ಕಾರ್ಯಕರ್ತ ಕೆ.ಎಂ.ಮಹೇಶ್ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.