ಮಿಡ್ಲ್‌.. ನಗರಕ್ಕೆನೃಪತುಂಗ ಕನ್ನಡ ಶಾಲೆಯಲ್ಲಿ ಸಡಗರ, ಸಂಭ್ರಮದಿಂದ ಮಕ್ಕಳ ಸ್ವಾಗತ

| Published : Jun 01 2024, 01:47 AM IST

ಮಿಡ್ಲ್‌.. ನಗರಕ್ಕೆನೃಪತುಂಗ ಕನ್ನಡ ಶಾಲೆಯಲ್ಲಿ ಸಡಗರ, ಸಂಭ್ರಮದಿಂದ ಮಕ್ಕಳ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ವಿಶೇಷವಾಗಿ ಬಾ ಮರಳಿ ಶಾಲೆಗೆ, ಬ್ಯಾಕ್ ಟೂ ಸ್ಕೂಲ್ ಎಂಬ ಘೋಷವಾಕ್ಯವನ್ನು ಬರೆದ ಸೆಲ್ಫಿ ಕಾರ್ನರ್ ಅನ್ನು ಸಿದ್ಧಪಡಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಆ ಸೆಲ್ಫಿ ಕಾರ್ನರ್ ನಲ್ಲಿ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ರಾಮಕೃಷ್ಣನಗರದಲ್ಲಿರುವ ನೃಪತುಂಗ ಕನ್ನಡ ಶಾಲೆಯಲ್ಲಿ ಶುಕ್ರವಾರ ಬಹಳ ಸಡಗರ, ಸಂಭ್ರಮದಿಂದ ಮಕ್ಕಳನ್ನು ಶಾಲೆಗೆ ಸ್ವಾಗತಿಸಲಾಯಿತು.ಸಂಸ್ಥೆಯ ಉಪಾಧ್ಯಕ್ಷ ಸ.ರ. ಸುದರ್ಶನ, ಕಾರ್ಯದರ್ಶಿ ಸವಿತಾ ಪ. ಮಲ್ಲೇಶ್ ಅವರು ಶಾಲೆಗೆ ಬಂದ ಪ್ರತಿಯೊಂದು ಮಗುವಿಗೂ ಗುಲಾಬಿ ಹೂವು ಮತ್ತು ಚಾಕೋಲೇಟ್ ಅನ್ನು ನೀಡಿ ಸ್ವಾಗತಿಸಿದರು. ಶಿಕ್ಷಕರು ವಿವಿಧ ನುಡಿಗಟ್ಟು ಮತ್ತು ಘೋಷ ವಾಕ್ಯಗಳ ಚಾರ್ಟ್ ಗಳನ್ನು ಹಿಡಿದು ನಿಂತು ಮಕ್ಕಳನ್ನು ಆಕರ್ಷಿಸಿದರು.ವಿಶೇಷವಾಗಿ ಬಾ ಮರಳಿ ಶಾಲೆಗೆ, ಬ್ಯಾಕ್ ಟೂ ಸ್ಕೂಲ್ ಎಂಬ ಘೋಷವಾಕ್ಯವನ್ನು ಬರೆದ ಸೆಲ್ಫಿ ಕಾರ್ನರ್ ಅನ್ನು ಸಿದ್ಧಪಡಿಸಲಾಗಿತ್ತು. ಮಕ್ಕಳು ಉತ್ಸಾಹದಿಂದ ಆ ಸೆಲ್ಫಿ ಕಾರ್ನರ್ ನಲ್ಲಿ ಸ್ನೇಹಿತರೊಂದಿಗೆ, ಶಿಕ್ಷಕರೊಂದಿಗೆ ಫೋಟೋಗಳನ್ನು ಕ್ಲಿಕ್ಕಿಸಿಕೊಂಡರು.1 ರಿಂದ 7ನೇ ತರಗತಿಯ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು. ಪ್ರಾರ್ಥನೆಯ ಸಮಯದಲ್ಲಿ ಸಂವಿಧಾನ ಪ್ರಸ್ತಾವನೆಯನ್ನು ಮಕ್ಕಳಿಂದ ಹೇಳಿಸಲಾಯಿತು. ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ಪ್ರತಿಜ್ಞಾ ವಿಧಿಯನ್ನು ಮಾಡಿಸಲಾಯಿತು. ಅಲ್ಲದೆ, ಮಕ್ಕಳಿಗೆ ಚಿತ್ರಕಲೆ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಶೀಲಾ, ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಕೆ.ಆರ್. ಸೌಮ್ಯಶ್ರೀ, ಶಿಕ್ಷಕರು ಮತ್ತು ಶಿಕ್ಷಕೇತರು ಹಾಗೂ ಮಕ್ಕಳು ಇದ್ದರು.